ಬಿಪಿ ನಿಯಂತ್ರಿಸುವ ಶಕ್ತಿದಾಯಕ ಮನೆಮದ್ದುಗಳಿವು

ಒತ್ತಡದ ಜೀವನಶೈಲಿಯಿಂದ ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗಿ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಬಾಧಿಸುತ್ತದೆ.ಇಂದು ನಮ್ಮ ಭಾರತದಲ್ಲಿ ಸರಾಸರಿ ಮೂವರಲ್ಲಿ ಒಬ್ಬರು ರಕ್ತದೊತ್ತಡ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯ ಅನಾರೋಗ್ಯ ಸಮಸ್ಯೆ ಆಗಿದ್ದು, ಇದು ಅಧಿಕ ಸಂದರ್ಭ ದಲ್ಲಿ ನಿಮ್ಮ ಜೀವನವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡ ದಿಂದ ಬಳಲುವ ಅನೇಕ ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳೇ ಕಂಡುಬರುವುದಿಲ್ಲ.ರಕ್ತವು ರಕ್ತನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಒತ್ತಡವನ್ನುಂಟು ಮಾಡುವುದೇ ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

ರಕ್ತದೊತ್ತಡ ನಿಯಂತ್ರಿಸಲು ಕೆಲವು ಮನೆಮದ್ದುಗಳು ಸಹಾಯಕ ಅವುಗಳೆಂದರೆ.
ಜೇನುತುಪ್ಪ : ಪ್ರಕೃತಿ ನಮಗೆ ನೀಡಿರುವ ವರ ಅಂದರೆ ಅದು ಜೇನುತುಪ್ಪ. ಜೇನುತುಪ್ಪ ಅನೇಕ ರೀತಿಯಾದ ಶಮನಕಾರಿ ಗುಣಗಳನ್ನು ಹೊಂದಿದ್ದು, ಅಧಿಕ ರಕ್ತದೊತ್ತಡ ಇದು ಸಹಕಾರಿ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಜೇನುತುಪ್ಪವು ರಕ್ತನಾಳಗಳಿಗೆ ಆರಾಮದಾಯಕವಾಗಿದ್ದು, ಹಸಿ ಜೇನುತುಪ್ಪದ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.

ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು, ಈ ಹಣ್ಣಿನಲ್ಲಿನ ಸಿಟ್ರೋಲಿನ್ ಎಂಬ ಸಾವಯವ ಸಂಯುಕ್ತವು ಹೃದಯವನ್ನ ಪಂಪ್ ಮಾಡಲು ಸಹಕರಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆಯನ್ನ ರೂಡಿಸಿಕೊಳ್ಳಿ. ಕಲ್ಲಂಗಡಿನ ಬೀಜಗಳು ರಕ್ತವನ್ನು ತಿಳಿಗೊಳಿಸಿ,ಮೂರ್ತಪಿಂಡದ ಕಾರ್ಯವನ್ನು ಸರಾಗಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಬಾಳೆಹಣ್ಣು: ಅಧಿಕ ರಕ್ತದೊತ್ತಡವನ್ನ ನಿಯಂತ್ರಿಸಲು ಬಾಳೆಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ. ಬಾಳೆ ಹಣ್ಣಿನಲ್ಲಿರುವ ಪೋಟಾಷಿಯಂ ಅಂಶ ದೇಹದಲ್ಲಿರುವ ಸೋಡಿಯಂ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಬಾಳೆಹಣ್ಣಿನ ಜೊತೆ ಕೆಲವು ಸೊಪ್ಪು ಹಾಗೂ ಇನ್ನಿತರೆ ಹಣ್ಣುಗಳ ಸೇವನೆ ಒಳ್ಳೆಯದು.

ನುಗ್ಗೆಕಾಯಿ:ನುಗ್ಗೆಕಾಯಿ ಎಲ್ಲರಿಗೂ ಬಲೂ ಪ್ರಿಯ.ಆರೋಗ್ಯದ ದೃಷ್ಟಿಯಿಂದ ನುಗ್ಗೆಕಾಯಿ ಫಲಕಾರಿಯಾಗಿದೆ. ಇದರಲ್ಲಿನ ಪ್ರೋಟಿನ್, ವಿಟಮಿನ್ಸ್, ಖನಿಜಾಂಶಗಳು ರಕ್ತದೊತ್ತಡವನ್ನ ನಿಯಂತ್ರಿಸುತ್ತದೆ. ನೆಲ್ಲಿಕಾಯಿ: ಸಂಪ್ರದಾಯಕವಾಗಿರುವ ನೆಲ್ಲಿಕಾಯಿಯನ್ನ ರಕ್ತದೊತ್ತಡ ಇರುವವರು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಇದರಲ್ಲಿನ ಆಮ್ಲದ ವಿಟಮಿನ್ ಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಮೂಲಂಗಿ:ಮೂಲಂಗಿ ಹಾಗೂ ಇದರ ಎಲೆಗಳು ಬಿಪಿ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿ ಪೋಟಾಷಿಯಂ ಅಂಶ ಅಧಿಕವಾಗಿದ್ದು ದೇಹದಲ್ಲಿನ ಸೋಡಿಯಂ ಅಂಶ ಕಡಿಮೆಗೊಳಿಸುತ್ತದೆ.
ಟೊಮೇಟೊ: ಟೊಮೇಟೊದಲ್ಲಿ ಲೈಕೋಪಿನ್ ಎಂಬ ಅಂಶವಿದ್ದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಈ ಆರು ಮನೆಮದ್ದುಗಳ ಸೇವನೆಯಿಂದ ಅದಿಕ ರಕ್ತದೊತ್ತಡವನ್ನ ಕ್ರಮೇಣವಾಗಿ ನಿಯಂತ್ರಿಸಲು ಸಾಧ್ಯ.

Leave a Comment

error: Content is protected !!