ಹಳ್ಳಿಕಡೆ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಅತ್ತಿಹಣ್ಣಿನ ಮರದಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತೇ?

ಎಲ್ಲರೂ ಎಷ್ಟೋ ಮರಗಳನ್ನು ನೋಡಿರುತ್ತಾರೆ. ಹಾಗೆಯೇ ಆ ಮರಗಳಿಗೆ ಹಣ್ಣು ಮತ್ತು ಹೂವುಗಳು ಬಿಟ್ಟಿದ್ದನ್ನು ನೋಡಿರುತ್ತಾರೆ. ಆದರೆ ಅದರ ಬಗ್ಗೆ ಮಾತ್ರ ತಿಳಿದಿರುವುದಿಲ್ಲ. ಅಂತಹವುಗಳಲ್ಲಿ ಅತ್ತಿ ಮರ ಕೂಡ ಒಂದು. ಇದು ಕೆಂಪು ಬಣ್ಣದ ಹಣ್ಣು ನೀಡುತ್ತದೆ. ನಾವು ಇಲ್ಲಿ ಅತ್ತಿಮರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅತ್ತಿಯಹಣ್ಣು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಅದು ಕೆಂಪುಬಣ್ಣವನ್ನು ಹೊಂದಿರುತ್ತದೆ. ಆದರೆ ಇದರಲ್ಲಿ ಬಹಳ ಹುಳಗಳು ಇರುತ್ತವೆ. ಇದಕ್ಕೆ ಸಂಸ್ಕೃತದಲ್ಲಿ ಔದುಂಬರ ಎಂದು ಕರೆಯುತ್ತಾರೆ. ಇದಕ್ಕೆ ಯಜ್ಞಫಲ, ಬ್ರಹ್ಮವೃಕ್ಷ, ಹರಿತಾಕ್ಷ, ಕ್ಷೀತಫಲ, ಸುಚುಕ್ಷ ಇನ್ನೂ ಮುಂತಾದ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಈ ಮರವು 9 ರಿಂದ 12ಮೀಟರ್ ನಷ್ಟು ಎತ್ತರದಲ್ಲಿ ಬೆಳೆಯುತ್ತದೆ. ಇದರ ಫಲ ಮತ್ತು ತೊಗಟೆಯಿಂದ ಬಿಳಿ ಬಣ್ಣದ ಮೇಣ ಬರುತ್ತದೆ. ಹಣ್ಣಿನ ಒಳಗಡೆ ನೂರಾರು ಸಣ್ಣ ಸಣ್ಣ ಬೀಜಗಳು ಇರುತ್ತವೆ.

ಅತ್ತಿಮರ ಇದು ಹಣ್ಣು ಮತ್ತು ಹೂವು ಕಾಯಿಗಳನ್ನು ಬಿಡುತ್ತದೆ. ಇದನ್ನು ವೇದಗಳ ಕಾಲದಲ್ಲಿ ಸಹ ಬಳಸಲಾಗುತ್ತಿತ್ತು. ಹೋಮ ಹವನಗಳಿಗೆ ನಮ್ಮ ಹಿರಿಯರು ಇದನ್ನು ಬಳಸುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಂದರೆ ಯಜ್ಞಯಾಗಾದಿಗಳಲ್ಲಿ ಬಳಸುತ್ತಿದ್ದರು. ಮೊದಲು ಹಲ್ಲುಜ್ಜಲು ಈಗಿನ ರೀತಿ ಬ್ರಶ್ ಮತ್ತು ಪೇಸ್ಟ್ ಗಳು ಇರಲಿಲ್ಲ. ಆಗ ಜನರು ಗೇರು ಎಲೆಯದಂಟು, ಮಾವಿನ ಎಲೆಯ ದಂಟು ಮತ್ತು ತಣ್ಣಗಾದ ಕೆಂಡಗಳನ್ನು ಬಳಸುತ್ತಿದ್ದರು. ಹಾಗೆಯೇ ಅದರ ಜೊತೆಗೆ ಅತ್ತಿಮರದ ದಂಟನ್ನು ಹಲ್ಲುಜ್ಜಲು ಬಳಸುತ್ತಿದ್ದರು.

ಇದನ್ನು ಹೆಚ್ಚಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಯುತ್ತಾರೆ. ಅತ್ತಿಯಗಿಡದಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಔದುಂಬರ ಮತ್ತು ಕಾಕ ಔದುಂಬರ ಮತ್ತು ನುಜ್ಜುಂಬರ. ಮಧುಮೇಹ ಇರುವವರು ಅತ್ತಿಹಣ್ಣು ಮತ್ತು ನೇರಳೆ ಬೀಜವನ್ನು ಸಮ ಪ್ರಮಾಣದಲ್ಲಿ ಪುಡಿ ಮಾಡಿಕೊಂಡು ಪ್ರತಿನಿತ್ಯ ಸೇವನೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅತ್ತಿಯ ತೊಗಟೆಯ ಭಸ್ಮವನ್ನು ಜೇನುತುಪ್ಪದಲ್ಲಿ ಸೇರಿಸಿ ಕುಡಿಯುವುದರಿಂದ ಬಿಕ್ಕಳಿಕೆ ಕಡಿಮೆ ಆಗುತ್ತದೆ. ಹಾಗೆಯೇ ಅತ್ತಿಯ ಹಾಲಿಗೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಅತಿಸಾರ ಕಡಿಮೆ ಆಗುತ್ತದೆ. ಹಾಗೆಯೇ ಅತ್ತಿಹಣ್ಣನ್ನು ಸೇವನೆ ಮಾಡುವುದರಿಂದ ಅಶಕ್ತತೆ ದೂರವಾಗುತ್ತದೆ

Leave a Comment

error: Content is protected !!