ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೋತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ? ಹೊಸದಾಗಿ ಕೇಳಿ ಬರ್ತಿದೆ ವಿಚಿತ್ರ ಸುದ್ದಿ


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar) ಅವರ ಮರಣ ನಂತರ ಅವರು ಮಾಡಿಕೊಂಡು ಹೋಗುತ್ತಿದ್ದಂತಹ ಎಲ್ಲಾ ಕೆಲಸಗಳನ್ನು ಈಗ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ದೊಡ್ಡ ಮನೆಯಲ್ಲಿ ಪಾರ್ವತಮ್ಮ ಅವರು ಪ್ರೊಡಕ್ಷನ್ ಹೌಸ್ ಅನ್ನು ತಾವೇ ಮುಂದೆ ನಿಂತು ನಡೆಸಿಕೊಂಡು ಹೋಗುತ್ತಿದ್ದದ್ದು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ದೊಡ್ಮನೆಯ ಸೊಸೆಯಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪರಿಪಕ್ವವಾಗಿ ಅರಿತುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಪಿಆರ್ ಕೆ ಪ್ರೊಡಕ್ಷನ್ ಹಾಗೂ ಆಡಿಯೋ ಸೇರಿದಂತೆ ಅಪ್ಪು ಅವರ ನಡೆಸಿಕೊಂಡು ಬರುತ್ತಿದ್ದ ಹಲವಾರು ಜನಪರ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ (ashwini puneeth rajkumar) ಅವರು ಮುನ್ನಡೆಸಿಕೊಂಡು ಬರುತ್ತಿದ್ದು ಅಪ್ಪು ಅವರ ಇರುವಿಕೆಯನ್ನು ಈಗ ಎಲ್ಲರೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಲ್ಲಿ ಕಾಣುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದೆ ರೀತಿಯಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ :22 ವರ್ಷಗಳ ನಂತರ ಮತ್ತೆ ವೈರಲ್ ಆಯ್ತು ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ಕಾರ್ಡ್. ಹೇಗಿತ್ತು ಗೊತ್ತಾ ಮದುವೆ ಕಾರ್ಡ್?

Ashwini puneeth rajkumar with mla bhyarti suresh son

ಇಲ್ಲಿ ನಾವು ಬೇರೆಯದೇ ರೀತಿಯಲ್ಲಿ ಸದ್ದು ಮಾಡುತ್ತಿದೆ ಎಂಬ ಪದವನ್ನು ಪ್ರಯೋಗ ಮಾಡಿರುವುದಕ್ಕೆ ಒಂದು ವಿಶೇಷ ಕಾರಣವಿದೆ. ಯಾಕೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೆಬ್ಬಾಳದ ಶಾಸಕರಾಗಿರುವ ಬೈರತಿ ಸುರೇಶ್ ಅವರ ಮಗನಾಗಿರುವ ಸಂಜಯ್ ಸುರೇಶ್ ಅವರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ನೀವು ಕೂಡ ಈ ಫೋಟೋವನ್ನು ನೋಡಬಹುದಾಗಿದೆ. ಇಲ್ಲಿ ಬೇರೆಯದೇ ಸುದ್ದಿಗಳು ಹರಿದಾಡುತ್ತಿವೆ.

Ashwini puneet rajkumar with mla son

ಕೆಲವು ಕಡೆಗಳಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ಕರೆಯಲು ಬೈರತಿ ಸುರೇಶ್ ಅವರ ಕಡೆಯಿಂದ ಬುಲಾವ್ ಬಂದಿದೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇನ್ನು ಕೆಲವು ಕಡೆಗಳಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲು ಭೇಟಿ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಮೂಲಗಳಿಂದ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಇದು ಕೇವಲ ಸೌಹಾರ್ದ ಯುತ ಭೇಟಿ ಎಂಬುದಷ್ಟೇ ತಿಳಿದು ಬಂದಿದೆ. ಈಗಾಗಲೇ ದೊಡ್ಮನೆ ಕುಟುಂಬಕ್ಕೆ ಮೊದಲಿನಿಂದಲೂ ಕೂಡ ರಾಜಕೀಯದ ಆಹ್ವಾನ ಎಷ್ಟೇ ಬಂದಿದ್ದರು ಕೂಡ ಒಂದು ಬಾರಿಯೂ ಆ ಕಡೆಗೆ ದೊಡ್ಮನೆ ತಲೆಹಾಕಿಯೂ ಕೂಡ ಮಲಗಿಲ್ಲ. ಹೀಗಾಗಿ ಇಲ್ಲಿ ಕೂಡ ಕೇಳಿ ಬರುತ್ತಿರುವ ಸುದ್ದಿ ಕೇವಲ ಗಾಳಿ ಸುದ್ದಿ ಎಂಬುದಾಗಿ ನಾವು ಭಾವಿಸಬಹುದಾಗಿದೆ.


Leave A Reply

Your email address will not be published.