ಯಾಕಾದ್ರೋ ಮದುವೆ ಯಾದ್ನೋ, ನಟಿ ಸೋನುಗೌಡ ಹಿಗೇಳಿದ್ಯಾಕೆ ಗೋತ್ತಾ

ಸ್ಯಾಂಡಲ್​ವುಡ್​ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹಲವಾರು ನಟಿ ಮಣಿಗಳಲ್ಲಿ ಇವರು ಕೂಡ ಅಷ್ಟೇ ಅಲ್ಲದೆ ಈಕೆಯ ತಂಗಿ ಕೂಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಅದು ಮತ್ಯಾರು ಅಲ್ಲ ಸೋನು ಗೌಡ ಈಕೆಯ ತಂಗಿಯ ಹೆಸರು ನೇಹಾ ಗೌಡ ನೇಹಾ ಅಂದ್ರೆ ಬಹುಶಃ ಯಾರಿಗೂ ಬೇಗ ಗೊತ್ತಾಗೋದು ಇಲ್ಲ ಅದೇ ಗೊಂಬೆ ಅಂದ್ರೆ ಎಲ್ಲರಿಗೂ ಬೇಗ ನೆನಪಾಗುತ್ತೆ ಲಕ್ಷ್ಮೀಬಾರಮ್ಮ ಸೀರಿಯಲ್ ಆ ಗೊಂಬೆ ಅಲಿಯಾಸ್ ನೇಹಾ ಗೌಡ ಅವರ ಅಕ್ಕ ಸೋನು ಗೌಡ

ಸೋನು ಗೌಡ ಅವರು ಸಿನಿಮಾ ರಂಗದಿಂದ ಅಷ್ಟೇ ಅಲ್ಲದೆ ಅವರು ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುತ್ತಾರೆ ಸೋನು ಗೌಡ ಅವರು ಈ ಮೊದಲು ಮದುವೆ ಆಗಿದ್ದರು ಆದರೆ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದ್ದು ಈಗ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ (Wedding Movie) ಪ್ರೇಮ್ ಅವರ ಜೊತೆ ನಟಿಸಿದ್ದಾರೆ ಈ ಸಿನಿಮಾದ ಟ್ರೇಲರ್ ಹಾಗು ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ ಈ ಕಾರ್ಯಕ್ರಮ ಮುಗಿದ ಬಳಿಕ ಸುದ್ದಿವಾಹಿನಿ ಜತೆ ಮಾತನಾಡಿದ ಸೋನು ಗೌಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನೂ ನೆನಪಿಸಿಕೊಂಡಿದ್ದಾರೆ

ಸೋನು ಗೌಡ ಅವರು ಜನಿಸಿದ್ದು 23 ಮಾರ್ಚ್ 1990 ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮೌಂಟ್ ಕಾರ್ಮೆಲ್ ಶಾಲೆ ಬೆಂಗಳೂರಿನಲ್ಲಿ ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುವಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತಂದೆಯ ಮುಖಾಂತರವೇ ಇವರು ಕನ್ನಡ ಚಿತ್ರರಂಗದಲ್ಲಿ ಆಸಕ್ತಿಯನ್ನು ವಹಿಸಲು ಅವಕಾಶ ದೊರೆಯಿತು 2008 ರಲ್ಲಿ ಬಿಡುಗಡೆಯಾದ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ಪಾತ್ರ ಮಾಡಲು ಅವಕಾಶ ಸಿಗುತ್ತದೆ ನಂತರ ಇವರು ಪರಮೇಶಿ ಪಾನ್ ವಾಲ ಗುಲಾಮ ಕಿರಗೂರಿನ ಗಯ್ಯಾಳಿಗಳು i love you ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಅಷ್ಟೇ ಅಲ್ಲದೆ ಕನ್ನಡ, ತೆಲುಗು, ತಮಿಳು,ಮಲಯಾಳಂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿ ಸೈ ಅನಿಸಿಕೊಂಡಿದ್ದಾರೆ

2010 ನವೆಂಬರ್ 1 ರಂದು ಇವರಿಗೆ ಮನೋಜ್ ಕುಮಾರ್ ಅವರ ಜೊತೆಯಲ್ಲಿ ವಿವಾಹವಾಗುತ್ತದೆ ಆದ್ರೆ ಹೆಚ್ಚು ದಿನ ಮದುವೆ ಉಳಿಯದೆ ಮುರಿದು ಬಿದ್ದಿತ್ತು ಇದರ ಬಗ್ಗೆ ಮೊದಲ ಬಾರಿಗೆ ಸೋನು ಗೌಡ ಅವರು ಸುದ್ದಿವಾಹಿನಿ ಆವರ ಬಳಿ ಮಾತಾಡುತ್ತಾ ಭಾವುಕರಾಗಿದ್ದರು ಅವರು ಅದೇನು ಹೇಳಿದರು ಅನ್ನೋದನ್ನ ನೋಡೋಣ ಬನ್ನಿ

ಡಿವೋರ್ಸ್‌ ಸಮಯದಲ್ಲಿ ಮಾನಸಿಕ ಒತ್ತಡ ಹೇಗಿರುತ್ತೆ ಅಂತ ಅನುಭವಿಸಿದವರಿಗೇ ಗೊತ್ತು ಈ ಥರದ ಅನುಭವ ನನ್ನ ಬದುಕಲ್ಲೂ ಆಗಿದೆ ಬೇಸಿಕಲಿ ನಾನು ಅಷ್ಟೊಂದು ಎಕ್ಸ್ಪ್ರೆಸಿವ್ ಆಗಿಲ್ಲ ಹೇಳ್ಬೇಕು ಅಂತ ಅನಿಸಿದರೂ ಕೂಡ ಅದು ಹೇಗೆ ಹೇಳ್ಬೇಕು ಅನ್ನೋದು ಗೊತ್ತಾಗೋದು ಇಲ್ಲ ಎಂಗ್ ಸ್ಟಾರ್ಸ್ ಗೆ ಈಗ ಹೇಳೋದು ಏನದ್ರೆ ಮದುವೇ ಆಗೋಗು ಮುಂಚೆ ಒಂದು ಸಲ ಅಲ್ಲಾ ಹತ್ತು ಸಲ ಯೋಚಿಸಿ ದುಡಿದು ಹಾಕೋ ಗಂಡನಿಗಿಂತ ಎಲ್ಲಾ ಸಂದರ್ಭದಲ್ಲೂ ಜೊತೆಗೆ ನಿಲ್ಲೋ ಹುಡುಗನನ್ನು ಆಯ್ಕೆ ಮಾಡಿಕೊಳ್ಳಿ ಎಷ್ಟೋ ಬಾರಿ ಅನಿಸಿತ್ತು ತಾನು ಮದುವೆ ಆಗಬಾರದಿತ್ತು ಅಂತ ಅದೆಷ್ಟೋ ಬಾರಿ ದೇವರನ್ನ ಬೈದದ್ದು ಇದೆ

ಪೂಜೆ ಪುನಸ್ಕಾರ ಯಾವುದು ಮಾಡದೆ ದೂರ ಇದ್ದದ್ದು ಇದೆ ಕೊನೆಗೆ ಏನೇ ಬಂದ್ರು accept ಮಾಡ್ಕೊಂಡು ಬದುಕಬೇಕು ಅನ್ನೋದನ್ನ ಕಲಿತೆ ಈಗ ಹಾಗೆ ಇದ್ದೀನಿ ಕೂಡ ಜೀವನದಲ್ಲಿ ಏನೇ ಬಂದ್ರು ಎದುರಿಸಿ ಮುಂದೆ ಹೋಗ್ಬೇಕು ಅನ್ನೋದನ್ನ ಕಲ್ತಿದ್ದೀನಿ ಒಬ್ಬ ಆರ್ಟಿಸ್ಟ್ ಆದ್ರೂ ಅಷ್ಟೇ ಒಬ್ಬ ಸಾಮಾನ್ಯ ವ್ಯಕ್ತಿ ಆದ್ರೂ ಅಷ್ಟೇ ಬಂದದನ್ನ ಒಪ್ಪಿ ಮುಂದುವರೆಯಬೇಕು ಎಂದಿದ್ದಾರೆ

Leave a Comment

error: Content is protected !!