ಸಚಿವರ ರಾಶಿ ರಾಶಿ ಹಣ ಖ್ಯಾತ ನಟಿಯ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದರ ಹಿಂದಿನ ಅಸಲಿಯತ್ತೇನು ಗೊತ್ತಾ

ಪಶ್ಚಿಮ ಬಂಗಾಳದಲ್ಲಿ ಹಿರಿಯ ಸಚಿವ ಮತ್ತು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸುಮಾರು 21 ಕೋಟಿ ರೂ ನಗದು ಹಣವನ್ನು ವಶಪಡಿಸಿಕೊಂಡಿತ್ತು. ಅಷ್ಟು ಮಾತ್ರವಲ್ಲ 79 ಲಕ್ಷದಷ್ಟು ಗೋಲ್ಡ್, 54 ಲಕ್ಷದಷ್ಟು ಫಾರಿನ್ ಕರೆನ್ಸಿ ಪತ್ತೆಯಾಗಿದೆ ಜೊತೆಗೆ ಬೇಕಾದಷ್ಟು ಆಸ್ತಿ ಪಾಸ್ತಿಗೆ ಸಂಭಂದಿಸಿದಂತೆ ದಾಖಲೆಗಳು ಕೂಡಾ ಅವರ ಮನೆಯಲ್ಲಿ ಪತ್ತೆಯಾಗಿದೆ. ಇದೆಲ್ಲವನ್ನ ನೋಡಿ ಒಂದು ಕ್ಷಣ ಇ ಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಪಾರ್ಥ ಚಟರ್ಜಿ ಅವರು ರಾಜ್ಯ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಶಾಲಾ ಸೇವಾ ಆಯೋಗದ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯಲ್ಲಿ ಈ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಅರ್ಪಿತಾ ಅವರನ್ನು ಬಂಧಿಸಿದ್ದ ಇ.ಡಿ, ಪಾರ್ಥ ಚಟರ್ಜಿ ಅವರನ್ನು ಶನಿವಾರ ಸಂಜೆ ಬಂಧಿಸಿದೆ. ಈ ದಾಳಿಯ ಬಳಿಕ ಅರ್ಪಿತಾ ಮುಖರ್ಜಿ ಕಡೆಗೆ ಎಲ್ಲರ ಗಮನ ಹರಿದಿದೆ.

ಅರ್ಪಿತಾ ಅವರು ಪಶ್ಚಿಮ ಬಂಗಾಳದ ಹಾಲಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಹಾಗೂ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರ ಬಹಳ ಆಪ್ತ ನಿಕಟವರ್ತಿ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ಅರ್ಪಿತಾ ಮುಖರ್ಜಿ ಮೂಲತಃ ರೂಪದರ್ಶಿ ಮತ್ತು ನಟಿ. ಕೆಲವು ಬಂಗಾಳಿ, ಒಡಿಯಾ ಮತ್ತು ತಮಿಳು ಚಿತ್ರಗಳಲ್ಲಿ ಅವರು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಬಂಗಾಳಿ ಸೂಪರ್‌ಸ್ಟಾರ್ ಪ್ರೊಸೆಂಜಿತ್ ಚಟರ್ಜಿ ಅವರ ಜತೆ 2009ರಲ್ಲಿ ಮಾಮಾ ಭಗ್ನೆ ಚಿತ್ರದಲ್ಲಿ, 2008ರಲ್ಲಿ ನಟ ಜೀತ್ ಜತೆ ಪಾರ್ಟ್ನರ್ ಚಿತ್ರದಲ್ಲಿ ನಟಿಸಿದ್ದರು. ಕೋಲ್ಕತಾದ ಅತ್ಯಂತ ದೊಡ್ಡ ದುರ್ಗಾ ಪೂಜಾ ಸಮಿತಿಯಾಗಿರುವ ನಕ್ತಲಾ ಉದಯನ್ ಸಂಘ ಎಂಬ ಪಾರ್ಥ ಚಟರ್ಜಿ ಅವರ ದುರ್ಗಾ ಪೂಜಾ ಸಮಿತಿಯ ಮೂಲಕ ದಶಕಗಳ ಹಿಂದೆ ಇಬ್ಬರ ಭೇಟಿ ನಡೆದಿತ್ತು.

ಇತ್ತೀಚಿನ ವರ್ಷಗಳಲ್ಲಿ ನಕ್ತಲಾ ಉದಯನ್ ಸಂಘದ ಪ್ರಚಾರ ಆಂದೋಲನಗಳ ಮುಂದಾಳತ್ವ ಅರ್ಪಿತಾ ಅವರದ್ದೇ ಆಗಿರುತ್ತಿತ್ತು. ದುರ್ಗಾ ಪೂಜೆ ಸಂದರ್ಭಗಳಲ್ಲಿ ಚಟರ್ಜಿ ಅವರ ಸಮಿತಿಯ ಜಾಹೀರಾತುಗಳಲ್ಲಿ ಅರ್ಪಿತಾ ಅವರ ಚಿತ್ರ ಸರ್ವೇ ಸಾಮಾನ್ಯವಾಗಿ ಇರುತ್ತಿತ್ತು. ಇ.ಡಿ ಮಾಹಿತಿ ಪ್ರಕಾರ, ಕೋಲ್ಕತಾ ಮತ್ತು ಸುತ್ತಮುತ್ತಲಿನ ಉಪನಗರಗಳಲ್ಲಿ ಅರ್ಪಿತಾ ಕೆಲವು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಅವರ ತಾಯಿ ಮಿನತಿ ಮುಖರ್ಜಿ, ಉತ್ತರ ಕೋಲ್ಕತಾದ ಬೆಲ್ಘಾರಿಯಾದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಸಾಮಾನ್ಯ ಜೀವನ ನಡೆಸುತ್ತಿದ್ದು ಮಗಳ ಇಷಾರಾಮಿ ಜೀವನದ ಬಗ್ಗೆ ಅವರಿಗೆ ತಿಳಿದಿಲ್ಲ.

ದಕ್ಷಿಣ ಕೋಲ್ಕತಾದ ಐಷಾರಾಮಿ ಹೌಸಿಂಗ್ ಕ್ಯಾಂಪಸ್‌ನಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮೊದಲ ಮಹಡಿಯ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ 500 ರೂ ಮತ್ತು 2000 ರೂ ಮುಖಬೆಲೆಯ ನಗದು ಹಣದ ರಾಶಿ ಪತ್ತೆಯಾಗಿತ್ತು. ಈ ಹಣವನ್ನು ಮುಚ್ಚಿದ ಲಕೋಟೆಗಳಲ್ಲಿ ತುಂಬಿಸಿಡಲಾಗಿತ್ತು. ಅವರು ತನಿಖೆಗೆ ಸಹಕರಿಸುತ್ತಿಲ್ಲ. ಏನೇ ಕೇಳಿದರೂ ಮಾತನಾಡುತ್ತಿಲ್ಲ. ಹಣದ ಮೂಲ ಯಾವುದು ಎಂಬ ಪ್ರಶ್ನೆಗಳಿಗೆ ಉತ್ತರ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಇ.ಡಿ ಅಧಿಕಾರಿಯೊಬ್ಬರು ಹೇಳಿದ್ದರು.
ಅಷ್ಟು ದೊಡ್ಡ ಹಣ ಅವಳಿಗೆ ಹೇಗೆ ಮತ್ತು ಎಲ್ಲಿಂದ ಎನ್ನುವುದು ನನಗೆ ಹೇಗೆ ಗೊತ್ತಾಗುತ್ತದೆ? ನನಗೆ ಅದು ಮಾಧ್ಯಮದಿಂದ ಗೊತ್ತಾಗಿದೆ. ಪಾರ್ಥ ಚಟರ್ಜಿ ಪೋಷಕರಾಗಿರುವ ಪೂಜೆ ಸಮಿತಿಯಲ್ಲಿ ಆಕೆ ಪ್ರಮುಖವಾಗಿ ತೊಡಗಿಕೊಂಡಿದ್ದಳು ಎನ್ನುವುದು ಕೂಡ ನನಗೆ ಮಾಧ್ಯಮಗಳಿಂದ ತಿಳಿದಿದೆ ಎಂದು ಅರ್ಪಿತಾ ಅವರ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಹಿಂದೆ, ಶಿಕ್ಷಣ ಸಚಿವರಾಗಿದ್ದವರು. ಸರ್ಕಾರಿ ಶಾಲೆಗಳಿಗೆ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿರುವ ಬಗ್ಗೆ ಸಿಬಿಐ ಮತ್ತು ಇ.ಡಿ ತನಿಖೆ ಕೈಗೊಂಡಿದೆ. ಅಖಿಲ ಭಾರತೀಯ ತೃಣಮೂಲ ಕಾಂಗ್ರೆಸ್‌ನ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ.

ಸಂಸದೀಯ ವ್ಯವಹಾರಗಳ ಖಾತೆಯನ್ನೂ ಪಾರ್ಥ ಅವರು ಹೊಂದಿದ್ದಾರೆ. 2014 ರಿಂದ 2021ರವರೆಗೂ ಮಮತಾ ಬ್ಯಾನರ್ಜಿ ಅವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಟಿಎಂಸಿಯಿಂದ 2001ರಲ್ಲಿ ಮೊದಲ ಬಾರಿಗೆ ಪಾರ್ಥ ಶಾಸಕರಾಗಿ ಆಯ್ಕೆಯಾದರು. ಮಮತಾ ಅವರ ನೇತೃತ್ವದಲ್ಲಿ ಪಕ್ಷವು 2011ರಲ್ಲಿ ಸರ್ಕಾರ ರಚಿಸುವುದಕ್ಕೂ ಹಿಂದಿನಿಂದಲೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಹೊಣೆ ನಿರ್ವಹಿಸಿದ್ದಾರೆ. 2006 ರಿಂದ 2011ರವರೆಗೂ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಮಮತಾ ಅವರು 2016ರಲ್ಲಿ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಿದಾಗ ಸಂಪುಟದಲ್ಲಿ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಸಚಿವ, ವಾಣಿಜ್ಯ ಮತ್ತು ಕೈಗಾರಿಕೆಗಳು, ಸಾರ್ವಜನಿಕ ಉದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಇಲಾಖೆಗಳ ಸಚಿವರಾಗಿದ್ದರು.

ಮಮತಾ ಬ್ಯಾನರ್ಜಿ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರೂ ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ಈಗ ಇಷ್ಟೆಲ್ಲಾ ಹಣ ದೊರೆತ ಮೇಲೆ ಅಲ್ಲಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಇದರ ಬಗ್ಗೆ ಮಮತಾ ಬ್ಯಾನರ್ಜಿ ಅವರು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತೆ ಇದೆಲ್ಲ ರಾಜಕೀಯ ವಿಚಾರ. ಈಗ ನಮ್ಮನ್ನೆಲ್ಲಾ ಕಾಡುತ್ತಿರುವ ಪ್ರಶ್ನೆ ಎಂದರೆ ಸಚಿವರ ಸಂಪರ್ಕ ಸಿಕ್ಕರೆ ಸಾಮಾನ್ಯ ನಟಿಯರು ಕೂಡಾ ಐಷಾರಮಿ ಜೀವನ ನಡೆಸಬಹುದಾ. ಮತ್ತೊಂದೆಡೆ ಜನ ಇದು ಒಂದು ಬದುಕೇ ಚೀ ಥೂ ಅಂತ ಅಂತಾ ಉಗಿತಾ ಇದಾರೆ. ಅದೇನೇ ಇರಲಿ ಇಂದು ಅದೆಷ್ಟೋ ಮಂದಿ ಹಸಿವು ಬಡತನದಿಂದ ಒದ್ದಾಡ್ತಾ ಇದಾರೆ, ಎಷ್ಟೋ ಜನ ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಳತಾ ಇದಾರೆ.

ಬೇರೆ ಬೇರೆ ರೀತಿಯ ಸಂಕಟ ಅನುಭವಿಸುತ್ತಾ ಇದಾರೆ. ಭಾರತ ಇನ್ನೂ ಕೂಡ ಆ ಬಡತನದ ಬೇಗೆಯಿಂದ ಹೊರಬರಲು ಸಾಧ್ಯ ಆಗುತ್ತಿಲ್ಲ. ಆದರೆ ಇಂತಹ ಜನಪ್ರತಿನಿಧಿಗಳು ಇನ್ನೊಬ್ಬರನ್ನು ಕೊಳ್ಳೆಹೊಡೆದು ತಾವು ಹಾಗೂ ತಮ್ಮ ಆಪ್ತರ ಜೊತೆ ಐಷಾರಾಮಿ ಜೀವನ ನಡೆಸುತ್ತಾ ಇದಾರೆ. ಆದರೆ ಕೆಲ ರಾಜಕಾರಣಿಗಳಿಗೆ ಈ ನಟಿ ಮಣಿಯರ ಮೇಲೆ ಸ್ವಲ್ಪ ಹೆಚ್ಚೇ ಎಂಬಷ್ಟು ಮೋಹ. ಕೇವಲ ಪಾರ್ಥ ಚಟರ್ಜಿ ಮಾತ್ರ ಅಲ್ಲ ನಮ್ಮ ಕರ್ನಾಟಕವು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರಾಜಕಾರಣಿಗಳಿಗೆ ಈ ಹೀರೋಯಿನ್ ಎಂದರೆ ಒಂಥರಾ ಮೋಹ. ಕೆಲವು ಕಡೆ ಈ ರಾಜಕಾರಣಿಗಳು ನಟಿಯರನ್ನ ಮದುವೆ ಕೂಡಾ ಆಗಿದ್ದಾರೆ. ಹಾಗೆಂದು ಎಲ್ಲಾ ರಾಜಕಾರಣಿಗಳು, ನಟಿಯರು ಒಂದೇ ತರ ಇಲ್ಲ. ಇಲ್ಲೂ ಅನೇಕ ಉತ್ತಮರು ಇದ್ದಾರೆ.

Leave a Comment

error: Content is protected !!