ಇದು ಜನರಿಗೆ ಕೆಲಸದ ಒತ್ತಡ ಹೆಚ್ಚಾದಂತೆ ತಮ್ಮ ಮನೆಯ ಕೆಲಸವನ್ನು ಮಾಡಿಕೊಳ್ಳಲು ಕೂಡ ಅವರಿಗೆ ಪುರುಸೊತ್ತು ಇರುವುದಿಲ್ಲ ಹಾಗಾಗಿ ಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಲು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಪೇಟೆಯಲ್ಲಿ ವಾಸಿಸುವ ಜನರಲ್ಲಿ ಭಾಗಶಃ ಎಲ್ಲರೂ ಬಿಸಿಯಾಗಿರುತ್ತಾರೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆಂದು ಹೊರಗೆ ಹೋಗುವರು ಹಾಗಾಗಿ ಮನೆಯನ್ನು ಹೇಗಾದರೂ ಕ್ಲೀನ್ ಮಾಡಿ ಇಟ್ಕೋಬೇಕು ಅಂತ ಕೆಲಸದವರನ್ನು ಒಬ್ಬರನ್ನ ನೇಮಿಸಿ ಬಿಡುತ್ತಾರೆ. ಆದರೆ ಇದರಿಂದ ಆಗುವ ಅನಾಹುತ ಮಾತ್ರ ಅವರೇ ಅನುಭವಿಸಬೇಕು.

ಹೌದು ಕೆಲಸಕ್ಕೆ ಎಂದು ಯಾರನ್ನಾದರೂ ನೇಮಿಸಿಕೊಳ್ಳುವುದಕ್ಕಿಂತ ಮೊದಲು ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ ಇಲ್ಲವಾದರೆ ಇಂತಹ ಘಟನೆ ನಿಮ್ಮ ಜೀವನದಲ್ಲಿಯೂ ನಡೆಯಬಹುದು. ಈಗ ಕೆಲಸಕ್ಕೆ ಜನ ಬೇಕು ಅಂದ್ರೆ ಆನ್ಲೈನ್ ಬುಕಿಂಗ್ ಕೂಡ ಮಾಡಬಹುದು. ಇಲ್ಲಿ ಮೂವರು ಕಳ್ಳಿಯರ ಚಾಲಕೀತನವನ್ನು ನೋಡಿ. ಫೇಸ್ಬುಕ್ ನಲ್ಲಿ ನಾವು ಮನೆ ಕೆಲಸ ಮಾಡ್ತೀವಿ ಅಂತ ಜಾಹೀರಾತನ ಕೊಟ್ಟು ಬೇರೆ ಬೇರೆ ಮನೆಗಳಿಗೆ ಕೆಲಸಕ್ಕೆ ಸೇರುತ್ತಾರೆ. ಮುಂಬೈ ಮೂಲದ ಇವರು ಮನೆ ಕೆಲಸಕ್ಕೆ ಸೇರಿ ಕೀಲಿ ಕೈ ಗೆ ಸೇರಿದ ಕೂಡಲೇ ಮಾಡುವ ಕೆಲಸವೇನು ಗೊತ್ತಾ?

ಹೌದು ಕೆಲಸಕ್ಕೆ ಎಂದು ಬಂದ ಮೂರು ಕಳ್ಳಿಯರನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂವರು ಮುಂಬೈ ಮೂಲದವರಾಗಿದ್ದು ಪ್ರಿಯಾಂಕಾ ರಾಜೇಶ್ ಮೂಗ್ರೆ (29 ವರ್ಷ) ಮಹಾದೇವಿ (26 ವರ್ಷ) ಮತ್ತು ವನಿತಾ (37 ವರ್ಷ) ಎಂದು ಹೇಳಲಾಗಿದೆ. 250 ಗ್ರಾಂ ಚಿನ್ನ ಹಾಗೂ 100 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವರು ‘ರೆಫರ್ ಹೌಸ್ ಮೇಡ್ಸ್’ ಎನ್ನುವ ಫೇಕ್ ಫೇಸ್ಬುಕ್ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡು ಆ ಮೂಲಕ ಮನೆ ಕೆಲಸಕ್ಕೆ ಸೇರುತ್ತಾರೆ. ಮನೆ ಕೆಲಸಕ್ಕಾಗಿ ಜನರನ್ನ ಹುಡುಕುತ್ತಿರುವವರು ಇವರು ಕೊಡುವ ಜಾಹೀರಾತನ್ನು ನೋಡಿ ಕರೆ ಮಾಡಿ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಹೀಗೆ ಸ್ವಲ್ಪ ದಿನ ಒಬ್ಬರ ಮನೆಯಲ್ಲಿ ಕೆಲಸ ಮಾಡಿ ನಂತರ ಅವರ ಮನೆಯ ಒಳಹೊರಹನ್ನು ತಿಳಿದುಕೊಂಡು ಆ ಮನೆಯಲ್ಲಿರುವ ಬೆಲೆಬಾಳುವ ಚಿನ್ನಾಭರಣಗಳು ಹಾಗೂ ಹಣವನ್ನು ಲಪಟಾಯಿಸುತ್ತಾರೆ.

ಇತ್ತೀಚಿಗಿನ ಒಂದು ಪ್ರಕರಣದ ಪ್ರಕಾರ, ನಕಲಿ ಆಧಾರ್ ಕಾರ್ಡ್ ನೀಡಿ ಅರವಿಂದ್ ಎನ್ನುವವರ ಮನೆಯಲ್ಲಿ ಮಹಾದೇವಿ ಕೆಲಸಕ್ಕೆ ಸೇರಿದ್ದಾಳೆ. ಅವಳು ಕೆಲಸಕ್ಕೆ ಸೇರಿ ಕೆಲವು ದಿನಗಳಲ್ಲೇ ಮನೆಯವರು ಬೇರೆ ಊರಿಗೆ ಹೋಗುವ ಸಂದರ್ಭ ಬರುತ್ತದೆ. ಆಗ ತನ್ನ ಸ್ನೇಹಿತೆಯರ ಜೊತೆ ಸೇರಿ ಮನೆಯನ್ನ ದೋಚಿಕೊಂಡು ಮುಂಬೈಗೆ ಪರಾರಿಯಾಗಿದ್ದಾರೆ.

ಇನ್ನು ಈ ಮೂವರು ಮುಂಬೈನಲ್ಲಿಯೂ ಇಂತಹ ಹಲವು ಕೆಲಸವನ್ನು ಮಾಡಿದ್ದು ಸಾಕಷ್ಟು ಬಾರಿ ಅರೆಸ್ಟ್ ಕೂಡ ಆಗಿದ್ದರು. ಒಬ್ಬೊಬ್ಬರ ಮೇಲೆಯೂ ಸಾಕಷ್ಟು ಕೇಸ್ ಗಳಿವೆ. ಇದೀಗ ಬೆಂಗಳೂರಿಗೆ ಬಂದು ತಮ್ಮ ಕಳ್ಳತನದ ದಂ’ಧೆಯನ್ನು ಮುಂದುವರೆಸಿದರು ಆದರೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ.

By admin

Leave a Reply

Your email address will not be published.