ಕನ್ನಡ ಕಿರುತೆರೆಯ ಖ್ಯಾತ ತಾರೆ, ನಟಿ ರೇಖಾ ಅವರ ಪತಿ ಕೂಡ ಕಲಾವಿದರೇ! ಅವರು ಯಾರೆಂದು ಗೊತ್ತಾ?

ರೇಖಾ ಅವರು ಮೂಲತಃ ಬೆಂಗಳೂರಿನವರು. ಸಪ್ಟೆಂಬರ್ 4 1985ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಜಯನಗರದಲ್ಲಿಯೇ ಮುಗಿಸಿ, ನಂತರ ಬಿಹೆಚ್ಎಸ್ ಫಸ್ಟ್ ಗ್ರೇಡ್ ಕಾಲೇಜ್ ಅನ್ನು ಪ್ರವೇಶಿಸುತ್ತಾರೆ. ರೇಖಾ ಅವರು ಎಂಬಿಎ ಓದಿ ಮುಗಿಸಿದ್ದಾರೆ. ನಟನೆಯಲ್ಲಿ ಮೊದಲಿನಿಂದಲೂ ಆಸಕ್ತಿಯನ್ನು ಹೊಂದಿದ್ದ ಇವರು ಅನೇಕ ದಾರವಾಹಿಗಳಲ್ಲಿ, ಸಿನಿಮಾ ಪರದೆಯ ಮೇಲೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರೇಖಾ ಅವರು 2009ರಲ್ಲಿ ಏಷ್ಯಾನೆಟ್ ಟಿವಿ ವಾಹಿನಿಯಲ್ಲಿ ‘ಪಾರಿಜಾತಂ’ ಎಂಬ ತಮಿಳು ಧಾರವಾಹಿಯಲ್ಲಿ ಬಣ್ಣ ಹಚ್ಚುತ್ತಾರೆ. ಸನ್ ಟಿವಿಯಲ್ಲಿ ಪ್ರಸಾರವಾದ ‘ದೈವಮಗಳ್’ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತ ನಟಿ ಎನಿಸಿಕೊಂಡಿದ್ದಾರೆ. ವಿಜಯ ಟಿವಿಯಲ್ಲಿ ಪ್ರಸಾರವಾದ ನೀಲಿ ದಾರವಾಹಿಯಲ್ಲಿ ದೇವಯಾನಿಯಾಗಿ ಪಾತ್ರನಿರ್ವಹಿಸಿ ಜನಮನ ಗೆದ್ದಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ರೇಖಾ ಅವರು ಮಾಯಾಮೃಗ, ನಂದಿನಿ, ರಾಧಾಕಲ್ಯಾಣ ಸೇರಿದಂತೆ ಹಲವಾರು ಕನ್ನಡ ಧಾರವಾಹಿಗಳಲ್ಲಿ ಮಿಂಚಿದ್ದು ಎಲ್ಲರೂ ಇವರನ್ನು ಮೆಚ್ಚಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ಮಾನಸಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಚಪ್ಪಾಳೆಗೆ ಪಾತ್ರರಾಗಿದ್ದಾರೆ.

ಸದ್ಯ ತಮಿಳು ಕಿರುತೆರೆಯ ಶೂಟಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೇಖಾ ಅವರ ಕೈ ಹಿಡಿದ ಕನ್ನಡ ಕಿರುತೆರೆಯ ಖ್ಯಾತ ನಟ ಯಾರೆಂದು ಸಾಕಷ್ಟು ಕನ್ನಡಿಗರಿಗೆ ತಿಳಿದಿಲ್ಲ. ತಮಿಳು ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿರುವ ರೇಖಾ ಅವರಿಗೆ ಕನ್ನಡ ಕಿರುತೆರೆಯ ಫೇಮಸ್ ನಟನೊಂದಿಗೆ ವಿವಾಹವಾಗಿದೆ. ರೇಖಾ ಅವರಂತೆ ಅವರ ಪತಿಯು ಕೂಡ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರೇಖಾ ಅವರ ಪತಿಯ ಹೆಸರು ವಸಂತ್ ಕುಮಾರ್. ‘ಲಕ್ಷ್ಮೀ ಬಾರಮ್ಮ’ ಎಂಬ ಧಾರವಾಹಿಯಲ್ಲಿ ನಟಿಸುವುದರ ಮೂಲಕ ಮನೆ ಮಂದಿಗೆಲ್ಲ ಪರಿಚಿತರಾಗಿದ್ದ ವಸಂತ್ ಕುಮಾರ್ ಅವರು ಇದೀಗ ‘ಮಂಗಳ ಗೌರಿ’ ಧಾರವಾಹಿಯಲ್ಲಿ ಮಂಗಳ ಗೌರಿಯ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಗೊಂಬೆಯ ತಂದೆಯಾಗಿ ಕಾಣಿಸಿಕೊಂಡಿದ್ದರು. ರೇಖಾ ಹಾಗೂ ವಸಂತ್ ಕುಮಾರ್ ಅವರದ್ದು ಲವ್ ಮ್ಯಾರೇಜ್. ವಸಂತ್ ಕುಮಾರ್ ಅವರು ರೇಖಾ ಅವರ ಶೂಟಿಂಗ್ ನ ಬ್ಯುಸಿ ಶೆಡ್ಯೂಲನ್ನು ಅರ್ಥ ಮಾಡಿಕೊಂಡು, ರೇಖಾವರಿಗೆ ಫುಲ್ ಸಪೋರ್ಟ್ ಅನ್ನು ಮಾಡುತ್ತಾರಂತೆ. ಇದನ್ನು ಸ್ವತಃ ರೇಖಾ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಒಟ್ಟಿನಲ್ಲಿ ಈ ದಂಪತಿಗಳು ಖುಷಿಯಿಂದ ಜೀವನ ನಡೆಸುತ್ತಿದ್ದು, ಪೂಜಾ ಎಂಬ ಮಗಳಿದ್ದಾಳೆ.

Leave a Comment

error: Content is protected !!