ಚಿತ್ರರಂಗ ಹಾಗೂ ಕಿರುತೆರೆಯ ಕ್ಷೇತ್ರ ಎನ್ನುವುದು ಪ್ರೇಕ್ಷಕರಿಗೆ ಪರದೆ ಮೇಲೆ ಮನರಂಜನೆ ನೀಡುವ ಕ್ಷೇತ್ರಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಕಲೆಯನ್ನು ಹತ್ತಾರು ವರ್ಷಗಳಿಂದಲೂ ಪ್ರೇಕ್ಷಕರ ಮುಂದೆ ಪ್ರಸಾರ ಮಾಡಿಕೊಂಡು ಬರಲಾಗುತ್ತಿದೆ. ಮನೋರಂಜನೆ ಕ್ಷೇತ್ರ ಎನ್ನುವುದು ಕಲಾವಿದರಿಗೆ ದೇವಸ್ಥಾನದಂತೆ ಎಂದರೆ ತಪ್ಪಾಗಲಾರದು.

ಆದರೆ ದೇವಸ್ಥಾನದಂತೆ ಇರುವಂತಹ ಈ ಕ್ಷೇತ್ರದಲ್ಲಿ ಕೂಡ ಕೆಲವೊಂದು ಪಾಪ ಕಾರ್ಯಗಳು ನಡೆಯುತ್ತದೆ ಎನ್ನುವುದು ನಿಜಕ್ಕೂ ಕೂಡ ಶೋಚನೀಯ ವಿಚಾರವಾಗಿದೆ. ಹೌದು ನಾವು ಮಾತನಾಡುತ್ತಿರುವುದು ಹಲವಾರು ವರ್ಷಗಳಿಂದಲೂ ಕೂಡ ಭಾರತೀಯ ಚಿತ್ರರಂಗದಲ್ಲಿ ಹಾಗೂ ಮನೋರಂಜನೆ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಒಂದು ಸ್ಥಿತಿಯ ಬಗ್ಗೆ. ಹೌದು, ನಾವು ಮಾತನಾಡುತ್ತಿರುವುದು ಕಾಸ್ಟಿಂಗ್ ಕೌಚ್ ಬಗ್ಗೆ. ಮಂಚ ಹತ್ತಿದರೆ ಮಾತ್ರ ಇಲ್ಲಿ ಅವಕಾಶ ಸಿಗುತ್ತದೆ ಎನ್ನುವ ಪರಂಪರೆ ಬಹಳಷ್ಟು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಇದರ ಬಗ್ಗೆ ಈಗ ತೆಲುಗು ಚಿತ್ರರಂಗದ ಕಿರುತೆರೆಯ ಖ್ಯಾತ ನಟಿ ದಿವ್ಯಶ್ರೀ ಅವರು ಬಹಿರಂಗವಾಗಿ ಮಾತನಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಇದು ಕಡಿಮೆಯಾಗಿದ್ದರೂ ಕೂಡ ಸಂಪೂರ್ಣವಾಗಿ ಇಲ್ಲ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಈಗ ಇದೇ ವಿಚಾರದ ಕುರಿತಂತೆ ನಟಿ ದಿವ್ಯಶ್ರೀ ಅವರು ಹೇಳಿದ್ದಾರೆ.

ಮೊದಲು ಸಿನಿಮಾದಲ್ಲಿ ಮಾತ್ರ ಇತ್ತು ಆದರೆ ಈಗ ಕಿರುತೆರೆಯ ಲೋಕಕ್ಕೆ ಕೂಡ ಈ ಕಾಸ್ಟಿಂಗ್ ಕೌಚ್ ಎನ್ನುವ ಕರಾಳ ಪರಂಪರೆ ಕಾಲಿಟ್ಟಿದೆ ಎಂಬುದಾಗಿ ಅವರು ಇಟ್ಟಿದ್ದಾರೆ. ಒತ್ತಾಯ ಏನು ಇಲ್ಲ ನೀವು ನಮ್ಮ ಜೊತೆ ಅಡ್ಜಸ್ಟ್ ಮಾಡಿಕೊಂಡರೆ ನಿಮಗೆ ಲಾಭ ಎಂಬುದಾಗಿ ನಿರ್ಮಾಪಕರು ಚಿತ್ರೀಕರಣಕ್ಕೂ ಮುನ್ನವೇ ಹೇಳುತ್ತಾರಂತೆ. ಒಂದು ವೇಳೆ ನಿರಾಕರಿಸಿದರೆ ಪರೋಕ್ಷವಾಗಿಯೇ ಅವರಿಗೆ ಪಾತ್ರದಿಂದ ನಿರಾಕರಿಸಲಾಗುತ್ತದೆ ಎಂಬುದಾಗಿ ಕೂಡ ದುಃಖದಿಂದ ದಿವ್ಯಶ್ರೀ ಅವರು ಇಲ್ಲಿ ಹೇಳುತ್ತಾರೆ. ಈ ಕರಾಳ ಪರಂಪರೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

By admin

Leave a Reply

Your email address will not be published.