Saregamapa 19: ಸರಿಗಮಪ 19ರ ವಿನ್ನರ್ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು ಮೌಲ್ಯದ್ದು ಗೊತ್ತಾ?

Pragathi Badiger ಮಕ್ಕಳಿಂದ ಹಿಡಿದು ಮುದುಕರ ತನಕವೂ ಕೂಡ ಇಷ್ಟಪಡುವಂತಹ ಸಂಗೀತ ಕಾರ್ಯಕ್ರಮ ಆಗಿರುವಂತಹ ಸರಿಗಮಪ 19 ಈಗಾಗಲೇ ಫೈನಲ್ ಕಾರ್ಯಕ್ರಮವನ್ನು ಕೂಡ ಮುಕ್ತಾಯಗೊಳಿಸಿದ್ದು ವಿನ್ನರ್ ಯಾರು ಎಂಬುದು ಹೊರಬಂದಿದೆ. ಹೌದು ಪ್ರಗತಿ ಬಡಿಗೇರ್(Pragathi Badiger) ಅವರು ಈ ಕಾರ್ಯಕ್ರಮವನ್ನು ಗೆಲ್ಲುವ ಮೂಲಕ ಗೆಲುವಿನ ಕಿರೀಟವನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ.

ಕೊಪ್ಪಳದಲ್ಲಿ ನಡೆದಿರುವಂತಹ ಈ ಫೈನಲ್ ಕಾರ್ಯಕ್ರಮ ನೆನ್ನೆ ಅಷ್ಟೇ ಮುಕ್ತಾಯಗೊಂಡಿದ್ದು ಪ್ರಗತಿ ಬಡಿಗೇರ್ ಮೊದಲ ಸ್ಥಾನವನ್ನು ಶಿವಾನಿ(Shivani) ಎರಡನೇ ಸ್ಥಾನವನ್ನು ಹಾಗೂ ತನುಶ್ರೀ ಮೂರನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಸಂಗೀತ ಪ್ರತಿಭೆಗೆ ಸರಿಯಾದ ಗೌರವವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಅಷ್ಟಕ್ಕೂ ಇವರು ಪಡೆದುಕೊಂಡಿರುವ ಬಹುಮಾನದ ವಿವರ ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಪ್ರಗತಿ ಬಡಿಗೇರ್(Pragathi Badiger) ಅವರಿಗೆ 20 ಲಕ್ಷ ಮೌಲ್ಯದ 30 × 40 ಸೈಟ್ ಸಿಕ್ಕಿದ್ದು ನಗದು ರೂಪದಲ್ಲಿ ನಾಲ್ಕು ಲಕ್ಷ ರೂಪಾಯಿ ಬಹುಮಾನ ದೊರಕಿದೆ. ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಶಿವಾನಿಯವರು(Shivani) 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಇನ್ನು ಮೂರನೇ ಸ್ಥಾನವನ್ನು ಪಡೆದುಕೊಂಡಿರುವಂತಹ ಮಂಗಳೂರಿನ ಹುಡುಗಿ ತನುಶ್ರೀ 5 ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡಿದ್ದಾಳೆ. ಈ ಕಾರ್ಯಕ್ರಮದಲ್ಲಿ ನಿಜಕ್ಕೂ ನಿಮಗೆ ಇಷ್ಟ ಆದಂತಹ ಸ್ಪರ್ಧಿ ಯಾರು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Leave a Comment

error: Content is protected !!