ತಮಿಳಿನ ಧಾರವಾಹಿಯಿಂದ ಹೊರ ಬಂದು ತನಗಾದ ಅನುಭವವದ ಬಗ್ಗೆ ಸತ್ಯ ಬಿಚ್ಚಿಟ್ಟ ಪಾರು ಖ್ಯಾತಿಯ ಮೋಕ್ಷಿತ

ಲಾಕ್ ಡೌನ್ ನಂತರ ಕಿರುತರೆ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿತ್ತು ಯಾಕೆಂದರೆ ಸಿನಿಮಾ ಚಿತ್ರೀಕರಣಗಳು ನಡೆಯುತ್ತಿರಲಿಲ್ಲ ಹಾಗೂ ಥಿಯೇಟರ್ ಗೆ ಹೋಗಿ ಸಿನಿಮಾಗಳನ್ನು ಕೂಡ ಹೊಸದಾಗಿ ನೋಡಲು ಪ್ರೇಕ್ಷಕರಿಗೆ ಆಗುತ್ತಿರಲಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಮನೆಯಲ್ಲಿ ಕೂತು ಬೋರ್ ಹೊಡೆಯುತ್ತಿದ್ದ ಪ್ರೇಕ್ಷಕರಿಗೆ ಮನೋರಂಜನೆಯ ಸಿಂಚನವನ್ನು ನೀಡಿದ್ದು ಕಿರುತೆರೆಯ ಧಾರವಾಹಿಗಳು ಎಂದು ಹೇಳಬಹುದಾಗಿದೆ.

ಕೇವಲ ಕಿರುತೆರೆಯ ಧಾರವಾಹಿಗಳು ಮಾತ್ರ ಬೆಳೆದಿದ್ದಲ್ಲದೆ ಕಿರುತೆರೆಯ ಧಾರವಾಹಿಯಲ್ಲಿ ನಟಿಸುತ್ತಿದ್ದ ಚಿಕ್ಕ ಚಿಕ್ಕ ಕಲಾವಿದರು ಕೂಡ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಪರಿಚಿತರಾಗುತ್ತಾರೆ. ಹೇಗೆ ಸಿನಿಮಾ ನಟರನ್ನು ಪ್ರೇಕ್ಷಕರು ಸಲೀಸಾಗಿ ಗುರುತಿಸುತ್ತಾರೋ ಅದೇ ರೀತಿ ಈ ಸಮಯದಲ್ಲಿ ಕಿರುತೆರೆಯ ಧಾರವಾಹಿ ನಟ ನಟಿಯರನ್ನು ಕೂಡ ಪ್ರೇಕ್ಷಕರು ಗುರುತಿಸುವಂತಾಯಿತು. ಇವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಪಾರು ಧಾರವಾಹಿ ಖ್ಯಾತಿಯ ಮೋಕ್ಷಿತ ಅವರ ಬಗ್ಗೆ.

Paru sserial actress mokshita

ಮೋಕ್ಷಿತ ಅವರು ಕನ್ನಡ ಕಿರುತೆರೆಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಪಾರು ಧಾರವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರು. ಇನ್ನು ಇವರು ಕೇವಲ ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೆ ತಮಿಳು ಕಿರುತೆರೆಯಲ್ಲಿ ಕೂಡ ಕೆಲಸ ಮಾಡುತ್ತಿದ್ದು ಈಗ ಎಲ್ಲರೂ ಆಶ್ಚರ್ಯ ಪಡುವಂತಹ ಸುದ್ದಿ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನೀಡಿದ್ದಾರೆ.

ಹೌದು ಗೆಳೆಯರೇ ಮೋಕ್ಷಿತ ಅವರು ತಾವು ತಮಿಳಿನಲ್ಲಿ ನಟಿಸುತ್ತಿದ್ದ ಮೀನಾಕ್ಷಿ ಪೊನ್ನುಂಗ ಎನ್ನುವ ಧಾರವಾಹಿಯಿಂದ ಸಡನ್ ಆಗಿ ಹೊರಬಂದು ಎಲ್ಲರಲ್ಲೂ ಕೂಡ ಆಶ್ಚರ್ಯವನ್ನು ಮೂಡಿಸಿದ್ದಾರೆ. ಈ ಧಾರವಾಹಿಯಿಂದ ಹೊರಬರಲು ಬೇರೆ ಯಾವುದೇ ಕಾರಣಗಳಿಲ್ಲ ನನ್ನ ವಯಕ್ತಿಕ ಕಾರಣಕ್ಕಾಗಿ ಹೊರಬಂದಿದ್ದೇನೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಧಾರವಾಹಿ ತಂಡಕ್ಕೆ ಎಷ್ಟು ದಿನ ಒಳ್ಳೆಯ ಸಹಕಲಾವಿದರಾಗಿ ಇದ್ದೇ ಧನ್ಯವಾದಗಳು ಎಂಬುದಾಗಿ ಧನ್ಯವಾದ ಪೋಸ್ಟ್ ಅನ್ನು ಕೂಡ ಪೋಸ್ಟ್ ಮಾಡಿದ್ದಾರೆ.

Leave a Comment

error: Content is protected !!