ಕೊನೆಗೂ ಹಸೆಮಣೆ ಏರೋಕೆ ಸಿದ್ಧರಾದ್ರು ಕನ್ನಡತಿ ರಂಜನಿ ಮತ್ತು ಕಿರಣ್ ರಾಜ್
ಕನ್ನಡತಿ ಸೀರಿಯಲ್ ಕರ್ನಾಟಕದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಕನ್ನಡತಿ ಸೀರಿಯಲ್ ತುಂಬಾ ಜನಪ್ರಿಯತೆ ಗಳಿಸಿತ್ತು ಮನೆಮಂದಿಯೆಲ್ಲಾ ಕೂತು ನೋಡುವಂಥ ಧಾರಾವಾಹಿ. ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಟಿ ಆರ್ ಪಿ ಅಂಕವನ್ನು ಪಡೆದು ಇದೀಗ ಮೊದಲ ಸ್ಥಾನದಲ್ಲಿದೆ. ಕನ್ನಡತಿ ಧಾರಾವಾಹಿ ಇಷ್ಟು ಜನಪ್ರಿಯತೆ ಗೊಳ್ಳೋಕೆ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿರುವ ಕಿರಣ್ ರಾಜ್ ಮತ್ತು ರಂಜನಿ ಅವರು ಕೂಡ ಮುಖ್ಯ ಕಾರಣ. ಕನ್ನಡತಿ ಹರ್ಷಿಕಾ ಮತ್ತು ಭುವನ್ ಸೂಡಿ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು.
ಹರ್ಷ ಮತ್ತು ಭುವಿ ತೆರೆ ಮೇಲೆ ಮೋಡಿ ಮಾಡಿದ್ದಾರೆ. ಈ ಜೋಡಿಯನ್ನು ನೊಡೋಕೆ ಅಂತಾನೇ ತುಂಬಾ ಮಂದಿ ಕನ್ನಡತಿ ಸೀರೆಯಲ್ ನೋಡುತ್ತಾರೆ. ಈ ಎರಡು
ಜೋಡಿಗಳು ನಿಜ ಜೀವನದಲ್ಲಿ ಕೂಡ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡುತ್ತಿತ್ತು. ಧರ್ಮಸ್ಥಳಕ್ಕೆ ಓಡಿಹೋಗಿ ರಂಜನಿ ಮತ್ತು ಕಿರಣ್ ರಾಜ್ ಮದುವೆಯಾಗಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಸ್ವತಃ ಕಿರಣ್ ರಾಜ್ ಮತ್ತು ರಜನಿ ಅವರೇ ತಾವು ಮದುವೆಯಾಗಲಿರುವ ವಿಷಯವನ್ನು ಹೊರಹಾಕಿದ್ದಾರೆ. ಕನ್ನಡಾಂಬೆ ದೇವಾಲಯದಲ್ಲಿ ಕನ್ನಡತಿ ಧಾರಾವಾಹಿಯ ಈ ಮುದ್ದಾದ ಜೋಡಿಗಳ ಮದುವೆ ನಡೆಯಲಿದೆ.

ಹಾಗಂತ ಭುವಿ ಮತ್ತು ವರ್ಷ ನಿಜಜೀವನದಲ್ಲಿ ಮದುವೆಯಾಗುತ್ತಿದ್ದಾರೆ ಅಂತ ಅಂದುಕೊಳ್ಳಬೇಡಿ. ಹರ್ಷ ಮತ್ತು ಭುವಿ ಕನ್ನಡತಿ ಧಾರಾವಾಹಿಯಲ್ಲಿ ಮದುವೆಯಾಗಲಿದ್ದಾರೆ ಇದು ವೀಕ್ಷಕರ ಬಹುದಿನದ ಕೋರಿಕೆಯಾಗಿತ್ತು. ಹರ್ಷ ಮತ್ತು ಭುವಿ ಯಾವಾಗ ಮದುವೆ ಆಗುತ್ತಾರೋ ಎಂಬ ಕುತೂಹಲ ವೀಕ್ಷಕರಲ್ಲಿ ಸದಾ ಕಾಡುತ್ತಿತ್ತು ಇದೀಗ ವೀಕ್ಷಕರ ಕುತೂಹಲಕ್ಕೆ ಅಂತ್ಯ ಕಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹರ್ಷ ಮತ್ತು ಭುವಿ ಮದುವೆಯಾಗಿರೋ ಎಪಿಸೋಡ್ ಟಿವಿಯಲ್ಲಿ ಪ್ರಸಾರವಾಗಲಿದೆ. ಭುವಿ ಮತ್ತು ಹರ್ಷ ಅವರು ಮದುವೆಯಾಗುವ ಕಾರ್ಯಕ್ರಮದ ಎಪಿಸೋಡ್ ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿದೆ.
ಇನ್ನೂ ಇದು ಟಿವಿಯಲ್ಲಿ ಪ್ರಸಾರವಾಗೋಕೆ 2 – 3 ದಿನಗಳು ತೆಗೆದುಕೊಳ್ಳಬಹುದು. ಕನ್ನಡತಿ ಧಾರಾವಾಹಿಯ ವೀಕ್ಷಕರಿಗೆ ಇನ್ನೊಂದು ಸರ್ಪ್ರೈಸ್ ಕಾದಿದೆ ಅದೇನೆಂದರೆ ಹರ್ಷ ಮತ್ತು ಭುವಿ ಇಬ್ಬರ ಮದುವೆ ತುಂಬಾ ವಿಶೇಷವಾಗಿ ಮತ್ತು ವಿಭಿನ್ನವಾಗಿ ನಡೆಯಲಿದೆ. ಯಾಕೆಂದರೆ ಇದು ಅಚ್ಚ ಕನ್ನಡದ ಮದುವೆ ಆಗಿರುತ್ತೆ. ಹರ್ಷ ಮತ್ತು ಭುವಿ ಮದುವೆಯಲ್ಲಿ ನಡೆಯುವ ಪ್ರತಿಯೊಂದು ಶಾಸ್ತ್ರಕ್ಕೂ ಕನ್ನಡದಲ್ಲಿ ಅರ್ಥವನ್ನು ಹೇಳಲಾಗುತ್ತೆ. ಅಚ್ಚಕನ್ನಡದ ಮದುವೆ ಇದೇ ಪ್ರಪ್ರಥಮ ಬಾರಿಗೆ ಟಿವಿಯಲ್ಲಿ ಪ್ರಸಾರ ವಾಗುತ್ತಿದೆ. ರಾಮಾಚಾರಿ ಪಾತ್ರಧಾರಿ ರಿತ್ವಿಕ್ ಅವರು ಪಂಡಿತರ ಪಾತ್ರವಹಿಸಿ ಹರ್ಷ ಮತ್ತು ಭುವಿಯವರ ಈ ಮದುವೆಯ ಶಾಸ್ತ್ರವನ್ನು ನಡೆಸಿಕೊಡಲಿದ್ದಾರೆ.
ಹರ್ಷ ಮತ್ತು ಭುವಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೇನೋ ಹರಿದಾಡುತ್ತಿದೆ ಆದರೆ ಈ ಮದುವೆ ಯಶಸ್ವಿಯಾಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು. ಯಾಕೆಂದರೆ ವರುನಿಧಿ ಎಂಬ ಪಾತ್ರ ಹರ್ಷ ಮತ್ತು ಭುವಿ ಮದುವೆಯನ್ನು ಮುರಿದು ಬಿಳಿಸಲಿಕ್ಕೆ ಪ್ರಯತ್ನ ಪಡುತ್ತಿದ್ದಾಳೆ. ವರುನಿಧಿ ಹರ್ಷ ಮತ್ತು ಭುವಿ ಮದುವೆಯನ್ನು ನಿಲ್ಲಿಸೋಕೆ ಹರಸಾಹಸ ಪಡುತ್ತಿದ್ದಾಳೆ. ಮದುವೆಯಲ್ಲಿ ತಾಳಿಕಟ್ಟುವ ಕೊನೆಯ ಸಮಯದಲ್ಲಿ ಏನಾದರೂ ಟ್ವಿಸ್ಟ್ ಎದುರಾಗುತ್ತಾ ಎಂಬ ಆತಂಕ ವೀಕ್ಷಕರಲ್ಲಿ ಮನೆಮಾಡಿದೆ.. ಒಟ್ಟಿನಲ್ಲಿ ಹರ್ಷ ಮತ್ತೆ ಭುವಿ ಮದುವೆಯಾಗುವುದನ್ನು ಕಣ್ತುಂಬಿಕೊಳ್ಳೋಕೆ ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.