‘ನಮ್ ಏರಿಯಾದಲ್ಲಿ ನನ್ನ ಹಿಂದೆ ಎಷ್ಟೊಂದು ಹುಡುಗರು ಓಡಾಡ್ತಿದ್ರು ಗೊತ್ತಾ?’ ಎನ್ನುತ್ತಾ ತಮ್ಮ ಫಸ್ಟ್ ಲವ್ ಸ್ಟೋರಿಯನ್ನು ನೆನಪಿಸಿಕೊಂಡ ಆಂಕರ್ ಅನುಶ್ರೀ

‘ಕಂಬಳಿ ಹುಳ’ ಚಿತ್ರವನ್ನು ವೀಕ್ಷಿಸಿದ ಬಳಿಕ ಸಂದರ್ಶನಕಾರರ ಜೊತೆ ಮಾತನಾಡಿದ ಅನುಶ್ರೀ ಅವರು ತಮ್ಮ ಹಳೆಯ ದಿನಗಳ ನೆನಪನ್ನು ಮೆಲುಕು ಹಾಕಿದ್ದಾರೆ. ಕಂಬಳಿ ಹುಳ ಚಿತ್ರದ ಬಗ್ಗೆ ಮಾತನಾಡಿದ ಅನುಶ್ರೀ ಅವರು “ಒಂದು ಕಥೆ ಕಾವ್ಯವಾದಾಗ ‘ಕಂಬಳಿ ಹುಳ’ ಎನ್ನುವಂತ ಚಿತ್ರವು ಅದ್ಭುತವಾಗಿ ತಯಾರಾಗುತ್ತೆ; ಈ ಸಿನಿಮಾವನ್ನು ಎಲ್ಲರೂ ಯಾಕ್ ನೋಡಬೇಕು ಅಂತ ಹೇಳುತ್ತಿದ್ದೀನಿ ಅಂದ್ರೆ, ಊರಲ್ಲಿರುವಾಗ ನಮ್ಮೆಲ್ಲರಲ್ಲೂ ಒಂದು ಮುಗ್ಧತೆ ಇರುತ್ತೆ. ಬೆಳಿತಾ ಬೆಳಿತಾ ಬಂದು ಪಟ್ಟಣವನ್ನು ಸೇರಿದಾಗ ಆ ಮುಗ್ಧತೆ ಕಳೆದುಹೋಗ್ಬಿಡುತ್ತೆ.

ಆ ಮುಗ್ಧತೆಯನ್ನು ಉಳಿಸಿಕೊಂಡು ಅದೇ ಮುಗ್ದತೆಯಲ್ಲಿ ಚಿತ್ರವನ್ನು ನಿರ್ಮಿಸಿ, ಎಲ್ಲಾ ಪಾತ್ರಗಳಲ್ಲಿಯೂ ಮುಗ್ದತೆಯನ್ನು ತೋರಿಸಿ, ಮತ್ತೆ ನಮ್ಮೆಲ್ಲರಿಗೂ ನಮ್ಮ ಊರು, ನಮ್ಮ ಫಸ್ಟ್ ಲವ್ ಸ್ಟೋರಿ, ನಮ್ಮ ಏರಿಯಾದಲ್ಲಿ ನಮ್ ಹಿಂದೆ ಓಡಾಡುತ್ತಿದ್ದಂತ ಹುಡುಗರ ನೆನಪು ಮರುಕಳಿಸುವಂತೆ ಮಾಡಿದೆ. ಇದೇ ನಿಜವಾದ ಜೀವನ ಎನ್ನುವುದನ್ನು ಮತ್ತೊಮ್ಮೆ ಈ ಚಿತ್ರದ ಮೂಲಕ ನೋಡಬಹುದು” ಎಂದಿದ್ದಾರೆ.

Kannada Anchor anushree about her boy friends

” ಪ್ರತಿಯೊಬ್ಬರು ಅಷ್ಟೇ; ಖುಷಿಖುಷಿಯಾಗಿ ಎಲ್ಲರೊಂದಿಗೂ ಹಂಚಿಕೊಳ್ಳುವಂತಹ ವಿಷಯವೆಂದರೆ ಹಿಂದಿನ ದಿನಗಳ ನೆನಪು. ಆ ದಿನಗಳ ನೆನಪನ್ನು ಇಟ್ಟುಕೊಂಡು ಯಾವುದೇ ಅನ್ನೆಸ್ಸಸರಿ ಫೈಟಿಂಗ್ಸ, ಪಂಚಿಂಗ್ ಮಾಸ್ ಡೈಲಾಗ್ಸ್ ಏನು ಇಲ್ಲದೆ ಸರಳತೆಯಲ್ಲಿ ಎಕ್ಸ್ಟ್ರಾ ಆರ್ಡಿನರಿ ಆಗಿ ಚಿತ್ರವನ್ನು ನಿರ್ಮಿಸಲಾಗಿದೆ. ನಮ್ಮಲ್ಲಿ ಕಳೆದುಹೋಗುತ್ತಿರುವಂಥ ಮುಗ್ಧತೆಯನ್ನು ವಾಪಸ್ ಪಡೆಯೋದಕ್ಕೆ ನಾವೆಲ್ಲರೂ ಇಂತಹ ಚಿತ್ರವನ್ನು, ಚಿತ್ರಮಂದಿರಗಳಿಗೆ ಹೋಗಿ ನೋಡಬೇಕು” ಎಂದು ಅನುಶ್ರೀ ಅವರು ಚಿತ್ರವನ್ನು ವೀಕ್ಷಿಸಿದ ಬಳಿಕ ಮಾತನಾಡಿದ್ದಾರೆ.

ಅಲ್ಲದೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಬಳಿ ಸಣ್ಣದೊಂದು ವಿನಂತಿಯನ್ನು ಮಾಡಿಕೊಂಡಿದ್ದಾರೆ. “ಕಂಬಳಿ ಹುಳ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದವರೆಗೂ ಅಪ್ಪು ಎಂದರೆ ತುಂಬಾನೆ ಇಷ್ಟ; ಪುನೀತ್ ರಾಜಕುಮಾರ್ ಅವರಿಗೆ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರಲ್ಲಿ ಆನಂದ ಸಿಗುತ್ತಿತ್ತು. ಅಂತೆಯೇ ಪುನೀತ್ ಅವರ ಅಭಿಮಾನಿಗಳಾದ ನಾವು ಕೂಡ ಹೊಸಬರ ಕಲೆಗೆ ಪ್ರೋತ್ಸಾಹ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ನೋಡಿ ಚಿತ್ರವನ್ನು ಗೆಲ್ಲಿಸಬೇಕು. ಅಭಿಮಾನಿಗಳಿಂದ ಮಾತ್ರವೇ ಚಿತ್ರವು ಗೆಲ್ಲಲು ಸಾಧ್ಯ” ಎಂದಿದ್ದಾರೆ.

Kannada Anchor anushree about her boy friends

ಅನುಶ್ರೀ ಅವರಿಗೆ ಚಿತ್ರವನ್ನು ನೋಡಿದ ಬಳಿಕ ತುಂಬಾ ಇಷ್ಟವಾದ ಸೀಕ್ವೆನ್ಸ್ ಎಂದರೆ ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ನಡುವಿನ ಕೆಮೆಸ್ಟ್ರಿಯಂತೆ. ಯಾರೇ ಕಂಬಳಿ ಹುಳ ಚಿತ್ರವನ್ನು ವೀಕ್ಷಿಸಿದರು ಕೂಡ ಅವರಿಗೂ ಇಷ್ಟವಾಗುವಂತಹ ಪಾತ್ರವೆಂದರೆ ನಾಯಕ ಮತ್ತು ನಾಯಕಿಯದ್ದಂತೆ.

ಅನುಶ್ರೀ ಅವರು “ಫಸ್ಟ್ ಪ್ರೀತಿಯೇ ಬೆಸ್ಟ್ ಪ್ರೀತಿ; ನಂತರದಲ್ಲಿ ನೀವು ಯಾರನ್ನ ವಿವಾಹವಾಗುತ್ತೀರಾ ಎನ್ನುವುದು ಸೆಕೆಂಡರಿ. ಆದರೆ ಕೊನೆಯವರೆಗೂ ಮನಸ್ಸಿನಲ್ಲಿ ಮಧುರವಾಗಿ ಉಳಿದುಕೊಳ್ಳುವ ನೆನಪುಗಳೆಂದರೆ ಮೊದಲು ನಾವು ಯಾರನ್ನು ಇಷ್ಟಪಡುತ್ತೇವೆ, ನಮ್ಮನ್ನು ಮೊದಲು ಯಾರು ಇಷ್ಟಪಡುತ್ತಾರೆ ಎಂಬುದು..” ಎಂದಿದ್ದಾರೆ.

“ಸಾಮಾನ್ಯವಾಗಿ ನಾನು ನಡೆಸಿಕೊಟ್ಟಂತ ಕಾರ್ಯಕ್ರಮಗಳಲ್ಲಿ ನೋಡಿದ ಹಾಗೆ ಎಲ್ಲರಿಗೂ ಇಷ್ಟವಾಗುವವರು ಉತ್ತರ ಕರ್ನಾಟಕದ ಪ್ರತಿಭೆಗಳು ಹಾಗೂ ಹಳ್ಳಿಯಿಂದ ಬಂದವರು. ಯಾಕೆಂದರೆ ಅವರಲ್ಲಿರುವ ಮುಗ್ಧತೆಯೇ ಅವರೊಂದಿಗೆ ಎಲ್ಲರನ್ನು ಕನೆಕ್ಟ್ ಮಾಡುತ್ತೆ. ಅದೇ ಮುಗ್ದತೆಯೊಂದಿಗೆ ಮೂಡಿಬಂದಿರುವ ಕಂಬಳಿ ಹುಳ ಚಿತ್ರವೂ ಕೂಡ ಎಲ್ಲರಿಗೂ ಇಷ್ಟವಾಗುತ್ತೆ. ಎಲ್ಲರೂ ಈ ಚಿತ್ರವನ್ನು ನೋಡಬೇಕು. ಈ ಸಿನಿಮಾಗೆ ಹೆಚ್ಚೆಚ್ಚು ಶೋಗಳು ಸಿಗಲಿ” ಎಂದು ಅನುಶ್ರೀ ಅವರು ಹಾರೈಸಿದ್ದಾರೆ.

Leave a Comment

error: Content is protected !!