ಚಿನ್ನದಿಂದ ಲೇಪಿತಗೊಂಡಿರುವ ವಾಚ್ ಅನ್ನು ಧರಿಸಿರುವ ವಿರಾಟ್ ಕೊಹ್ಲಿ. ಈ ವಾಚ್ ನ ಬೆಲೆ ಎಷ್ಟು ಗೊತ್ತಾ

ಕ್ರಿಕೆಟ್ ಆಟಕ್ಕೆ ಮತ್ತು ಕ್ರಿಕೆಟ್ ಆಟಗಾರರಿಗೆ ತುಂಬಾನೇ ಫ್ಯಾನ್ಸ್ ಇದ್ದಾರೆ. ಕ್ರಿಕೆಟ್ ಪ್ರಿಯರು ತನ್ನ ನೆಚ್ಚಿನ ಪ್ಲೇಯರ್ ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡ್ತಾ ಇರ್ತಾರೆ. ಆಟಗಾರನ ಹೇರ್ ಸ್ಟೈಲ್, ಸ್ಯೂಟ್, ಬೂಟ್, ವಾಚ್, ಚೈನ್ ಎಲ್ಲದರ ಮೇಲು ಗಮನಹರಿಸುವ ಅಭಿಮಾನಿಗಳು ಇದರ ಬಗ್ಗೆ ಚರ್ಚೆ ಕೂಡ ಮಾಡುತ್ತಾರೆ.

ಭಾರತ ಕ್ರಿಕೆಟ್ ತಂಡವು ಮುಂದೆ ನಡೆಯಲಿರುವ ಟಿ ಟ್ವೆಂಟಿ ವಿಶ್ವ ಕಪ್ ನಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದೆ. ರೋಹಿತ್ ಶರ್ಮ ಅವರು ತಂಡದ ನಾಯಕರಾಗಿ ಆಡಲಿದ್ದಾರೆ. ಈ ತಂಡವು ಶೇರ್ ಮಾಡಿರುವ ಫೋಟೋವನ್ನು ಇಂಚಿಂಚಾಗಿ ಆಸಕ್ತಿಯುಳ್ಳವರು ನೋಡಿದ್ದಾರೆ. ಭಾರತದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲ್ಲೋವರ್ಸ್ ಹೊಂದಿರುವ ಆಟಗಾರನೆಂದರೆ ವಿರಾಟ್ ಕೊಹ್ಲಿ. ಏಷ್ಯಾಕಪ್ ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿ, ಶತಕಗಳ ಮಳೆ ಸುರಿಸಿದ ಕೊಹ್ಲಿ ಅವರ ಮೇಲೆ ಮುಂಬರುವ ಆಟಗಳಲ್ಲಿ ತುಂಬಾ ನಿರೀಕ್ಷೆಇದೆ.

ಅತಿ ಹೆಚ್ಚು ಅಪೇಕ್ಷೆಯ ಜಾಹೀರಾತುದಾರರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಯಾವಾಗಲೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಹೊಸ ಹೊಸ ವಾಚ್, ಕನ್ನಡಕ, ಬ್ಯಾಗ್, ಶೂ ಧರಿಸುವುದರ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಸ್ಟಾರ್ ಕ್ರಿಕೆಟಿಗರಿಗೆ ಹೇರ್ ಸ್ಟೈಲ್ ಮಾಡುವ ರಶೀದ್ ಸಲಾಮ್ನಿ ಅವರಿಂದ, ವಿರಾಟ್ ಕೊಹ್ಲಿ ಅವರು ಏಷ್ಯಾಕಪ್ ಗೂ ಮೊದಲೇ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದರು. ಅದೊಂದು ಕಟಿಂಗ್ ಗೆ ಬರೋಬ್ಬರಿ 80000 ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕೇಳಿದ ನೆಟ್ಟಿಗರು ‘ಅದೇ ಹಣದಲ್ಲಿ ಬೈಕ್ ಬರ್ತಿತ್ತು’ ಅಂತೆಲ್ಲ ಕಾಮೆಂಟ್ಸ್ ಮಾಡಿದ್ದರು.

ಇದೀಗ ಕೊಹ್ಲಿ ಅವರ ದುಬಾರಿ ವಾಚ್ ಸದ್ದು ಮಾಡಿದೆ. ಅಂದಹಾಗೆ ಅವರು ತೊಟ್ಟಿರುವ ವಾಚ್ ರೋಲೆಕ್ಸ್ ಕಂಪನಿಯದ್ದಾಗಿದೆ. ಇವರಿಗೆ ಬೇಕಾದ ರೀತಿಯಲ್ಲಿ ಹೊಸಹೊಸ ಮಾದರಿಯಲ್ಲಿ ರೋಲೆಕ್ಸ್ ಕಂಪನಿಯು ವಾಚ್ ಗಳನ್ನು ರೆಡಿ ಮಾಡಿ ಕೊಹ್ಲಿಯವರಿಗೆ ಕೊಡುತ್ತಂತೆ. ಅದಕ್ಕಾಗಿ ಹಿಂದೆಂದೂ ನೋಡಿರದ ಹೊಸ ಡಿಸೈನ್ ನ ವಾಚ್ ಗಳು ಕೊಹ್ಲಿ ಅವರ ಕೈಯಲ್ಲಿ ಮಿಂಚುತ್ತವೆ. ಈಗ ಚರ್ಚೆಯಲ್ಲಿರುವ ವಾಚ್ ನ ಬೆಲೆ ಮೂವತ್ತು ಲಕ್ಷ ರೂಪಾಯಿಗಳು.ಯಾಕಿಷ್ಟು ಬೆಲೆ ಅಂತಿದ್ದೀರಾ?? ಈ ವಾಚ್ನ ಸ್ಪೆಷಾಲಿಟಿ ಏನಪ್ಪಾ ಅಂದ್ರೆ, ಇದು ಚಿನ್ನದಿಂದ ಲೇಪಿತಗೊಂಡಿದೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಈ ವಾಚ್ ನ ಬೆಲೆ ತಿಳಿದ ಕೆಲವರು ಗಲ್ಲದ ಮೇಲೊಂದು ಬೆರಳಿಟ್ಟು ಯೋಚಿಸುತ್ತಿದ್ದಾರಂತೆ.ಹೀಗೆ ಕೊಹ್ಲಿ ಅವರ ಬಳಿ ಡಿಫ್ರೆಂಟ್ ಡಿಸೈನ್ಸನ ದುಬಾರಿ ವಾಚುಗಳ ಕಲೆಕ್ಷನ್ಸ್ ಇದೆಯಂತೆ.

Leave a Comment

error: Content is protected !!