ಪಂಜಾಬ್ vs ಸಿಎಸ್ ಕೆ ಮ್ಯಾಚ್ ನಲ್ಲಿ csk ಸೋಲಲು ಇವರೇ ಕಾರಣ. ಟ್ವಿಟ್ಟರ್ ನಲ್ಲಿ ಶುರು ಆಯ್ತು ಟ್ರೆಂಡ್

ಇದೀಗ ಐಪಿಎಲ್ 2022 ರ ಅಬ್ಬರ ಶುರುವಾಗಿದೆ. ಹೊತ್ತು ಪಂದ್ಯಗಳ ನಡುವೆ ಜಟಾಪಟಿ ನಡೆಯುತ್ತಿದೆ. ಈ ವರ್ಷದ ಐಪಿಎಲ್ ಪ್ರತಿಯೊಬ್ಬರ ಊಹೆಯನ್ನು ತಲೆಕೆಳಗೆ ಮಾಡಿದೆ. ಪ್ರತಿವರ್ಷ ಟೇಬಲ್ ಟಾಪ್ ನಲ್ಲಿ ದ್ದ ಸಿಎಸ್ ಕೆ ಮತ್ತು ಮುಂಬೈ ತಂಡದವರು ಇದೀಗ ಪಾಯಿಂಟ್ಸ್ ಟೇಬಲ್ ನ ಕೆಳಗಡೆ ಬಂದು ಕೂತಿದ್ದಾರೆ. ಯಾವಾಗಲೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಈ ವರ್ಷ ಅಂಕ ಪಟ್ಟಿಯ ಮೊದಲನೇ ಸ್ಥಾನವನ್ನು ಗಳಿಸಿದ್ದಾರೆ.

ಅಚ್ಚರಿಯ ವಿಷಯವೇನೆಂದರೆ ಈ ವರ್ಷದ ಐಪಿಎಲ್ ನಲ್ಲಿ ಸಿಎಸ್ಕೆ ತಂಡವು ಸತತ 3 ಬಾರಿ ಮೊದಲನೇ 3ಪಂದ್ಯಗಳನ್ನು ಸೋಲುಂಡಿದ್ದಾರೆ. ಇದೇ ಮೊದಲನೇ ಬಾರಿಗೆ ಸಿಎಸ್ ಕೆ ತಂಡದ ಕಳಪೆ ಆಟದಿಂದ ಮೊದಲ ಮೂದ್ ಮ್ಯಾಚುಗಳನ್ನು ಸೋಲು ಕಂಡಿದ್ದಾರೆ. ಇದೀಗ ಸಿಎಸ್ ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸಿಎಸ್ ಕೆ ತಂಡದ ಕಳಪೆ ಆಟದ ಮೂಲ ಕಾರಣವನ್ನು ಪ್ರೇಕ್ಷಕರೇ ಬಿಚ್ಚಿಟ್ಟಿದ್ದಾರೆ.

ಮೊದಲನೆಯದಾಗಿ ಸಿಎಸ್ ಕೆ ತಂಡದಲ್ಲಿ ಈ ವರ್ಷ ಆದ ಪ್ರಮುಖ ಬದಲಾವಣೆಯೆಂದರೆ ಧೋನಿಯವರ ಬದಲಾಗಿ ಜಡೇಜ ಅವರು ನಾಯಕತ್ವ ವಹಿಸಿರುವುದು. ಮೊದಲನೆಯ ಬಾರಿಗೆ ನಾಯಕತ್ವವನ್ನು ವಹಿಸಿ ಜಡೇಜಾಗೆ ಅನುಭವ ಕಡಿಮೆ ಇದೇ ಕಾರಣದಿಂದ ಸಿಎಸ್ ಕೆ ಅವರು ಮ್ಯಾಚ್ ತೋರುತ್ತಿದ್ದಾರೆ ಎಂಬುದು ಒಂದು ಕಡೆ. ಇನ್ನೊಂದು ಕಡೆ ಸಿಎಸ್ ಕೆ ತಂಡದ ಬೌಲರ್ ಗಳ ಕಳಪೆ ಪ್ರದರ್ಶನವೇ ಸಿಎಸ್ ಕೆ ತಂಡದ ಸೋಲಿಗೆ ಕಾರಣ.. ಎಂಬುದು ಅಭಿ ಮಾನಿಗಳ ಅಭಿಪ್ರಾಯ.

ಆದರೆ ನಿನ್ನೆ ಏಪ್ರಿಲ್ ಮೂರರಂದು ನಡೆದ ಪಂಜಾಬ್ ಮತ್ತು ಸಿಎಸ್ ಕೆ ನಡುವಿನ ಪಂದ್ಯದಲ್ಲಿ ಸಿಎಸ್ ಕೆ ತಂಡದ ವರು ಅತಿ ಕಳಪೆ ಪ್ರದರ್ಶನದ ಕಲ್ಲು ತೋರಿದ್ದಾರೆ.54 ರನ್ ಗಳ ಗರಿಷ್ಠ ಅಂತರದಿಂದ ಪಂಜಾಬ್ ಮೂವರು ಸಿಎಸ್ ಕೆ ಅವರನ್ನು ಸೋಲಿಸಿದ್ದಾರೆ. ಇದೀಗ ಈ ಪಂದ್ಯ ಸೋಲಲಿಕ್ಕೆ ಧೋನಿ ಅವರು ಕೂಡ ಕಾರಣ ಎಂದು ಟ್ವಿಟ್ಟರ್ ಗಳಲ್ಲಿ ಟ್ರೆಂಡ್ ಆಗುತ್ತಿದೆ. ಸಿಎಸ್ ಕೆ 89 ಕ್ಕೆ 5 ವಿಕೆಟ್ ಗಳನ್ನು ಕಳೆದು ಕೊಂಡಿದ್ದರು. ಏಳು ಓವರ್ ಗಳಲ್ಲಿ ನೂರು ರನ್ ಗಳ ಅವಶ್ಯಕತೆಯಿತ್ತು.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಶಿವಮ್ ದುಬೆ ಮತ್ತು ಎಂಎಸ್ ಧೋನಿ ಅವರು ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ಕಡೆ ಶಿವಮ್ ದುಬೆ ಅವರು ಪಂಜಾಬ್ ಬೌಲರ್ ಗಳಿಗೆ ಹಿಗ್ಗಾಮುಗ್ಗ ಭರಿಸುತ್ತಿದ್ದರೆ ಇನ್ನೊಂದು ಕಡೆ ಧೋನಿಯವರು ಬಾಲ್ಗಳನ್ನು ವೇಸ್ಟ್ ಮಾಡುತ್ತಿದ್ದರು. ಶಿವಂ ದುಬೆ ಅವರ ಜೊತೆ ಧೋನಿಯವರು ಕೂಡ ಅಷ್ಟಾಗಿ ಬ್ಯಾಟಿಂಗ್ ಮಾಡಿದ್ದರೆ ನಿನ್ನೆ ಸಿಎಸ್ ಕೆ ತಂಡ ಗೆಲುವಿನ ಹಾದಿ ತಲುಪಬಹುದಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ. 28ಎಸೆತಗಳಲ್ಲಿ 23 ರನ್ನುಗಳನ್ನು ಹೊಡೆದರು ಧೋನಿಯವರ ಟೆಸ್ಟ್ ಆಟವೇ ಈ ಮ್ಯಾಚ್ ಕಾರಣ ಎಂದು ಹಲವರು ಟ್ವಿಟ್ಟರ್ ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.

Leave a Comment

error: Content is protected !!