ಟೀಮ್ ಇಂಡಿಯಾ ಆಟಗಾರರನ್ನು ವಿಂಡೀಸ್ ನಾಡಿಗೆ ವಿಮಾನದಲ್ಲಿ ಕಳುಹಿಸಲು ಬಿಸಿಸಿಐ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ

ಟೀಮ್ ಇಂಡಿಯಾ ಈಗಷ್ಟೇ ಇಂಗ್ಲೆಂಡ್ ವಿರುದ್ಧದ ಪಂದ್ಯಗಳನ್ನು ಮುಗಿಸಿ, ಇದೀಗ ವೆಸ್ಟ್ ಇಂಡೀಸ್ ಕಡೆ ಹೊರಟಿದೆ. ನಾಳೆ ಅಂದರೆ ಜುಲೈ 22ರಂದು ವೆಸ್ಟ್ ಇಂಡಿಯಾ ವರ್ಸಸ್ ಇಂಡಿಯಾ ಏಕದಿನ ಪಂದ್ಯ ಆರಂಭವಾಗಲಿದೆ. ಇನ್ನು ವೆಸ್ಟ್ ಇಂಡೀಸ್ ಜೊತೆಗಿನ ಮ್ಯಾಚ್ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ.

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ಒಟ್ಟೂ ಮೂರು ಪಂದ್ಯಗಳನ್ನು ಆಡಲಿವೆ. ಇನ್ನು ಈ ಪಂದ್ಯಗಳು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಸರಣಿ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮೊದಲಾದ ಹಿರಿಯ ಆಟಗಾರರು ಆಡುತ್ತಿಲ್ಲ. ಹಾಗಾಗಿ ಮತ್ಯರು ಟೀಮ್ ಇಂಡಿಯಾ ಗೆಲ್ಲಿಸುವಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನುವುದರ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕುತೂಹಲವಿತ್ತು.

ಭಾರತದ ತಂಡದಿಂದ ಏಕದಿನ ಸರಣಿಯನ್ನು ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್‌), ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ (ಉಪನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಆಡಲಿದ್ಡಾರೆ.

ಇನ್ನು ಏಕದಿನ ಪಂದ್ಯದ ನಂತರ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕರಾಗಿ ತಂಡವನ್ನು ಮುನ್ನೆಡಸಲಿದ್ದಾರೆ. ಜಿಂಬಾಂಬೆ ತಂಡದ ವಿರುದ್ಧ ಪಂದ್ಯಗಳಲ್ಲಿ ಟೀಮ್ ಇಂಡಿಯಾ ತಂಡ ಕೆ ಎಲ್ ರಾಹುಲ್ ನೇತೃತ್ವದಲ್ಲಿ ಕಣಕ್ಕಿಳಿಯಲಿದ್ದಾರೆ. ಇತ್ತೀಚಿಗೆ ಟೀಮ್ ಇಂಡಿಯಾದ ನಾಯಕರು ಸರಣಿಗೆ ಒಬ್ಬರಂತೆ ಬದಲಾಗುತ್ತಾರೆ. ಹಾಗಾಗಿ ಬೇರೆ ಬೇರೆ ಆಟಗಾರರ ನಾಯಕತ್ವದಲ್ಲಿ ತಂಡ ಆಟವಾಡುತ್ತಿದೆ.

ಇತ್ತೀಚಿಗೆ ಕೆ ಎಲ್ ರಾಹುಲ್, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ 80% ಫೀಟ್ ಆಗಿದ್ದು, ಟೀ 20ಯ ಹೊತ್ತಿಗೆ ಸಂಪೂರ್ಣ ರೆಡಿಯಾಗಿ ಬರುತ್ತಾರೆ ಎನ್ನಲಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಕೆ ಎಲ್ ರಾಹುಲ್. ಸದ್ಯ ಎನ್ ಸಿ ಎ ನಲ್ಲಿ ಕೆ ಎಲ್ ರಾಹುಲ್ ಪಂದ್ಯದ ಸಿದ್ದತೆಯಲ್ಲಿದ್ದಾರೆ.

ಅಂದಹಾಗೆ ಕೆರೆಬಿಯನ್ ನಾಡಿಗೆ ಟೀಮ್ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ ಇದರ ಖರ್ಚು ಬರೋಬ್ಬರಿ 3.5 ಕೋಟಿ ರೂಪಾಯಿಗಳು. ಅದೇ ಕಮರ್ಷಿಯಲ್ ಫ್ಲೈಟ್ ನಲ್ಲಿ ಆಗಿದ್ದರೆ 2 ಕೋಟಿ ರೂ. ಅಷ್ಟೇ ಖರ್ಚಾಗುತ್ತಿತ್ತು. ಆದರೆ ಟೀಂ ಇಂಡಿಯಾ ಆಟಗಾರರು, ಅವರ ಪತ್ನಿಯರು, ಸಹಾಯಕ ಸಿಬ್ಬಂದಿ ಎಲ್ಲರೂ ಪ್ರಯಾಣಿಸುತ್ತಿದ್ದು, ಕೋವಿಡ್ ಭೀತಿಯೂ ಇರುವುದರಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ.

Leave a Comment

error: Content is protected !!