ಮಹಿಳಾ ಕ್ರಿಕೆಟ್ ಜಗತ್ತಿನ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದನ ಖರೀದಿಸಿರುವ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ?

ಕ್ರಿಕೆಟ್ ಎನ್ನುವುದು ಜೆಂಟಲ್ ಮೆನ್ಸ್ ಗೇಮ್ ಎನ್ನುವುದಾಗಿ ಕರೆಯಲಾಗುತ್ತದೆ. ಪುರುಷರಾದಾನತೆ ಹೊಂದಿರುವ ಈ ಕ್ರೀಡೆಯಲ್ಲಿ ಈಗ ಮಹಿಳೆಯರು ಕೂಡ ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ನಮ್ಮ ಭಾರತೀಯ ಮಹಿಳಾ ಕ್ರಿಕೆಟ್ ಎನ್ನುವುದು ಈ ವಿಚಾರದಲ್ಲಿ ಪ್ರಮುಖವಾಗಿ ಮುನ್ನಲೆಗೆ ಬರುತ್ತದೆ. ಇನ್ನು ಸದ್ಯಕ್ಕೆ ನಮ್ಮ ಭಾರತೀಯ ಕ್ರಿಕೆಟ್ ತಂಡದಲ್ಲಿ ಪುರುಷರಲ್ಲಿ ವಿರಾಟ್ ಕೊಹ್ಲಿ ಯಾವ ರೀತಿ ಜನಪ್ರಿಯ ರಾಗಿದ್ದಾರೆ ಅದೇ ರೀತಿ ಮಹಿಳೆಯರಲ್ಲಿ ಸ್ಮೃತಿ ಮಂದನ ಕೂಡ ಅತ್ಯಂತ ಜನಪ್ರಿಯ ಕ್ರಿಕೆಟ್ ಆಟಗಾರ್ತಿ ಎಂದರೆ ತಪ್ಪಾಗಲಾರದು.

ಮೈದಾನದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸ್ಮೃತಿ ಮಂದನ ಎಲ್ಲರ ಮನಸ್ಸನ್ನು ಗೆದ್ದರೆ, ಮೈದಾನದ ಹೊರಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸ್ಮೃತಿ ಮಂದನ ನ್ಯಾಷನಲ್ ಕ್ರಷ್ ಎನ್ನುವ ಖ್ಯಾತಿಗೂ ಕೂಡ ಒಳಗಾಗಿದ್ದಾರೆ. ಮೈದಾನದಲ್ಲಿ ನಿಂತು ಪಡ್ಡೆ ಹೈಕಳ ಹೃದಯವನ್ನು ಗೆಲ್ಲುವ ಸಾಮರ್ಥ್ಯ ಇವರಿಗಿದೆ ಎಂದು ಹೇಳಬಹುದು.

ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಕೇವಲ ಕ್ರಿಕೆಟ್ ಮಾತ್ರವಲ್ಲದೆ ಬ್ರಾಂಡಿಂಗ್ ಪ್ರಮೋಷನ್ ಸೇರಿದಂತೆ ಹಲವಾರು ಮೂಲಗಳಿಂದ ಸ್ಮೃತಿ ಮಂದನ ಅವರು ಆದಾಯವನ್ನು ಗಳಿಸುತ್ತಾರೆ. ಮುಂಬೈನಲ್ಲಿ ಅವರ ಒಡೆತನದ ಒಂದು ಹೋಟೆಲ್ ಕೂಡ ಇದೆ. ಇನ್ನು ಇತ್ತೀಚಿಗಷ್ಟೇ ಪ್ರತಿಮಂದನ ಅವರು ಅತ್ಯಂತ ದುಬಾರಿ ಬೆಳೆಯ ರೇಂಜ್ ರೋವರ್ ಕಾರ್ ಅನ್ನು ಖರೀದಿಸಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆಲೆ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ.

ಹೌದು ಮಿತ್ರರೇ, ಪ್ರತಿ ಮಂದನ ಅವರು ಬರೋಬ್ಬರಿ 1.5 ಕೋಟಿ ರೂಪಾಯಿ ಖರ್ಚು ಮಾಡಿ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇತ್ತೀಚಿಗಷ್ಟೇ ಪುರುಷ ಕ್ರಿಕೆಟಿಗರಷ್ಟೇ ಮಹಿಳಾ ಕ್ರಿಕೆಟ್ಗರು ಕೂಡ ಪ್ರತಿ ಪಂದ್ಯಕ್ಕೆ ಸಂಭಾವನೆಯನ್ನು ಪಡೆಯುತ್ತಾರೆ ಎಂಬ ಬಿಸಿಸಿಐ ನಿಯಮವು ಮಹಿಳಾ ಕ್ರಿಕೆಟಿಗರನ್ನು ಆರ್ಥಿಕವಾಗಿ ಕೂಡ ಸದೃಢರಾಗುವಂತೆ ಮಾಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ.

Leave a Comment

error: Content is protected !!