ಶತಕದ ಆಟಕ್ಕೆ ವಿರಾಟ್ ಕಾರಣ ಎಂದ ರಜತ್ ಪಾಟೀದಾರ್, ಅದು ಹೇಗೆ ಗೊತ್ತಾ?

IPL ಪಂದ್ಯ ಆರಂಭ ಆಗಿದ್ದು ಪಂದ್ಯ ನಡೆದಿದ್ದು ಅರ್ ಸಿ ಬಿ ಬೆಂಗಳೂರು ಪ್ರತಿನಿಧಿಸಿ ತಂಡ ಆಗಿದೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಜೀವನದಲ್ಲಿ ಒಂದು ಅದ್ಬುತ ಅವಕಾಶವನ್ನು ಆ ದೇವರು ನೀಡುತ್ತಾರೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿ ಅದರ ಸದುಪಯೋಗ ಪಡೆದು ಕೊಳ್ಳುವ ಕಲೆ ಈ ವ್ಯಕ್ತಿ ಆಗಿರುವುದು
ರಜತ್ ಪಟೇದರ ಬಗ್ಗೆ ಎಲ್ಲರಿಗೂ ಗೊತ್ತು ಇವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಲ್ಲಿ ಆಡುವ ಒಬ್ಬ ಕ್ರಿಕೆಟಿಗ ಇಂದೋರ್ ಮೂಲದ ಇವರು ಯುವ ಬ್ಯಾಟ್ಸ್ಮನ್ ಆಗಿದ್ದು ಇವರು ಕುಟುಂಬ ಅವರು ಬೇಸಾಯ ಹಾಗೂ ಪೈಪ್ ನಿರ್ಮಾಣ ಮಾಡುವ ವ್ಯವಹಾರ ನಡೆಸುತ್ತಿದ್ದ ಇವರು ಅದರಲ್ಲಿ ಮುಂದುವರಿಯಬೇಕು ಎಂದುಕೊಂಡರು ಆದರೆ ಕ್ರಿಕೆಟ್ ಅಲ್ಲಿ ಹೆಚ್ಚು ಆಸಕ್ತಿ ಒಲವು ತೋರಿದ ಕಾರಣ ಆತ್ತಕಡೆ ಸಾಗಿದ್ದರು ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದ ಬಳಿಕ ಭಾರಿ ಸದ್ದು ಮಾಡಿರುವ ಹೆಸರು ರಜತ್‌ ಪಾಟಿದಾರ್‌.

ಅಂದಹಾಗೆ ಸ್ಟೈಲಿಷ್‌ ಬಲಗೈ ಬ್ಯಾಟ್ಸ್‌ಮನ್ ಐಪಿಎಲ್ 2022 ಟೂರ್ನಿಯಿಂದಲೂ ಆರ್‌ಸಿಬಿ ಬಳಗದಲ್ಲಿ ರಜತ್‌ ಇದ್ದಾರೆ ಐಪಿಎಲ್ 2022 ಟೂರ್ನಿ ಸಲುವಾಗಿ ನಡೆದ ಆಟಗಾರರ ಹರಾಜಿನಲ್ಲಿ ರಜತ್‌ ಮಾರಾಟವಾಗದೇ ಉಳಿದಿದ್ದು ಬಳಿಕ ಆರ್‌ಸಿಬಿ ತಂಡದ ಯುವ ಪ್ರತಿಭೆ ಲವನೀತ್‌ ಸಿಸೋಡಿಯಾ ಗಾಯಗೊಂಡ ಕಾರಣ ಅವರ ಜಾಗದಲ್ಲಿ ರಜತ್‌ ಅವರನ್ನು ಬದಲಿ ಆಟಗಾರನಾಗಿ 20 ಲಕ್ಷ ರೂ.ಗಳ ಮೂಲ ಬೆಲೆಯೊಂದಿಗೆ ತೆಗೆದುಕೊಳ್ಳಲಾಯಿತು. ಈಗ ಆರ್‌ಸಿಬಿ ತಂಡದಲ್ಲಿ 3ನೇ ಕ್ರಮಾಂಕವನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವಲ್ಲಿ 28 ವರ್ಷದ ಬಲಗೈ ಬ್ಯಾಟರ್‌ ಯಶಸ್ವಿಯಾಗಿದ್ದಾರೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ ಅಬ್ಬರಿಸಿದ ರಜತ್‌, ಕೇವಲ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿ, 54 ಎಸೆತಗಳಲ್ಲಿ ಅಜೇಯ 112 ರನ್‌ಗಳ ಕೊಡುಗೆ ಸಲ್ಲಿಸುವ ಮೂಲಕ ಆರ್‌ಸಿಬಿ ಗೆಲುವಿನ ರೂವಾರಿ ಎನಿಸಿದರು. ಇದರ ಬಗ್ಗೆ ಮಾದ್ಯಮದಲ್ಲಿ ನನ್ನ ದಿನಕ್ಕಾಗಿ ಕಾಯುತ್ತ ಇದ್ದೆ ಆ ದಿನ ಇಂದು ಒದಗಿ ಬಂದಿದ್ದೆ ಹಾಗೂ ಈ ದಿನವನ್ನು ನಾನು ನನ್ನ ಜೀವನ ಪರ್ಯಂತ ಮರೆಯಲಾಗದ ದಿನ ಎಂದು ಭಾವುಕರಾದರು ಮತ್ತು ನನ್ನ ಮೇಲೆ ನಂಬಿಕೆ ಇಟ್ಟ ಆರ್ ಸಿ ಬಿ ಆಡಳಿತ ಮಂಡಳಿ ವಿರಾಟ್ ಕೊಹ್ಲಿ ಎಲ್ಲರಿಗೂ ಧನ್ಯವಾದ ಹಾಗೂ ನಮ್ಮ ತಂಡದ ತರಬೇತುದಾರ ಮೈಕ್ ಹಾರ್ ಸನ್ ಅವರ ತರಬೇತಿ ನನ್ನನ್ನು ತುಂಬಾನೇ ಪ್ರಚೋದಿಸಿ ಹುರಿದುಂಬಿಸಿದರು

ಮೊನ್ನೆ ನಡೆದ ಆಟದಲ್ಲಿ ರಜತ್ ಅವರ ಆಟವನ್ನು ನೋಡಿದ ಜನರು ಹುಚ್ಚೆದ್ದು ಕುಣಿದುಕುಪ್ಪಳಿಸುತ್ತಾ ಇದ್ದರು ವಿರಾಟ್ ಕೊಹ್ಲಿ ಮುಂತಾದ ದಿಗ್ಗಜ ಆಟಗಾರರು ಸೋತಾಗ ಹೇಗೆ ಮೈದಾನದಲ್ಲಿ ಆಟ ಆಡಬೇಕು ಎಂದು ತನ್ನ ಆಟದ ಮೂಲಕ ತೋರಿಸಿದ್ದಾರೆ ಇನ್ನೂ ವಿರಾಟ್ ಕೊಹ್ಲಿ ಹಾಗೂ ಬೇರೆ ಆಟಗಾರ ನಿನ್ನ ಆಟದ ಕೌಶಲ್ಯವನ್ನು ತೋರಿಸು ಎಂದು ಹುರಿದುಂಬಿಸಿದ್ದಾರೆ ಹಾಗಾಗಿ ಮೊನ್ನೆ ನಡೆದ ಆಟದಲ್ಲಿ ಕೇವಲ 28 ಬಾಲ್ ಅರ್ಧಶತಕ ಬಾರಿಸಿದ್ದರು ಎಲ್ಲೂ ಆರ್ಭಟವನ್ನು ನಿಲ್ಲಿಸದೆ ಮೈದಾನ ಅಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ್ದರು

ಇದನ್ನು ದೋಗ್ಗೌಟ್ ಅಲ್ಲಿ ಕುಳಿತು ವೀಕ್ಷಣೆ ಮಾಡುತಿದ್ದ ವಿರಾಟ್ ಕೊಹ್ಲಿ ಅವರು ಚಪ್ಪಾಳೆ ಹಾಗೂ ಸಂತೋಷದಿಂದ ಪ್ರೋತ್ಸಾಹ ಮಾಡುತ್ತಿದ್ದರು ಇದಕ್ಕಿಂತ ಮೊದಲು ರಜತ್ ಅವರು ಶತಕ ಬಾರಿಸಿದ್ದಾರೆ ಟೀಂ ಇಂಡಿಯಾ ಅಲ್ಲಿ ಆಡುವ ಅವಕಾಶ ಸಿಗುತ್ತಿದ್ದು ಈಗಲೂ ಸಾಧ್ಯತೆ ಇದೆ ರಜತ್ ಅವರು 11 ಬೌಂಡರಿ 6 ಸಿಕ್ಸರ್ ಬಾರಿಸಿದ್ದರು ಕೊನೆಗೂ ಔಟ್ ಆಗಿದೆ ನೋಟೌಟ್ ಬ್ಯಾಟ್ಮ್ಯಾನ್ ಆಗಿ ಉಳಿದರು ಹೀಗೆ ಇವರು ಎಲ್ಲಾ ಪಂದ್ಯಗಳಲ್ಲಿ ಒಳ್ಳೆಯ ಆಟ ಆಡಲಿ ಎಂದು ಹಾರೈಸೋಣ.

Leave a Comment

error: Content is protected !!