ಕ್ರಿಕೆಟ್ ಜಗತ್ತಿನ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ. 50 ವರ್ಷ ವಯಸ್ಸಿನ ಶೇನ್ ವಾರ್ನ್ ಗೆ ಆಗಿದ್ದಾದರೂ ಏನು ಗೊತ್ತಾ

ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ಇಂದು ನಗುನಗುತ್ತಾ ಇರುವವರು ನಾಳೆ ಇರುವುದಿಲ್ಲ. ಕೆಲವೊಂದು ಸಲ ನಮಗೆ ಜೀವನ ಇಷ್ಟೇನಾ, ನಮ್ಮ ಬದುಕು ತುಂಬಾ ಚಿಕ್ಕದು ಅಂತ ಅನಿಸುತ್ತದೆ. ಇತ್ತೀಚೆಗಂತೂ ಚಿಕ್ಕ ವಯಸ್ಸಿನವರೇ ಬೇಗ ತೀರಿಸಿಕೊಳ್ಳುತ್ತಿದ್ದಾರೆ. ಇದೀಗ ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ಕೇವಲ ಐವತ್ತು ವರ್ಷ ವಯಸ್ಸಿನ ಕ್ರಿಕೆಟ್ ಆಟಗಾರನಿಗೆ ಇದ್ದಕ್ಕಿದ್ದಂತೆ ಆಗಿದ್ದಾದರೂ ಏನು ಎಂಬುದು ಹಲವರಿಗೆ ಕಾಡುತ್ತಿದೆ.

ಶೇನ್ ವಾರ್ನೆಯವರನ್ನು ಕಿಂಗ್ ಆಫ್ ಸ್ಪಿನ್ ಎಂದೇ ಕರೆಯುತ್ತಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಶೇನ್ ವಾರ್ನೆಯವರು ಎರಡನೇ ಸ್ಥಾನವನ್ನು ಪಡೆದಿದ್ದಾರೆ ಇವರು 145 ಟೆಸ್ಟ್ ಮ್ಯಾಚ್ಗಳನ್ನು ಅಡಿ ಸುಮಾರು 708 ವಿಕೇಟುಗಳನ್ನು ಎತ್ತಿದ್ದಾರೆ. ಮುರಳೀಧರನ್ ಅವರನ್ನು ಬಿಟ್ಟರೆ ಅತೀ ಹೆಚ್ಚು ವಿಕೆಟ್ ಪಡೆದ ಕ್ರಿಕೆಟ್ ಬೌಲರ್. ಆಸ್ಟ್ರೇಲಿಯ ತಂಡದ ಗ್ರೇಟೆಸ್ಟ್ ಬೌಲರ್ ಎಂದು ಕೂಡ ಕರೆಯುತ್ತಾರೆ. ಇಂಥ ಒಂದು ಅದ್ಭುತ ಕ್ರಿಕೇಟ ಆಟಗಾರ ನನ್ನು ಕಳೆದುಕೊಂಡಿರುವುದು ಕ್ರಿಕೆಟ್ ಜಗತ್ತಿಗೆ ತುಂಬಲಾರದ ನಷ್ಟ ಉಂಟಾಗಿದೆ.

ಶೇನ್ ವಾರ್ನೆಯವರು ಇಂಥ ಅದ್ಭುತ ಬೌಲರ್ ಎಂದರೆ ಇವರನ್ನು ನೋಡಿ ಇನ್ಸ್ ಪೈರ್ ಆಗಿ ಹಲವಾರು ಯುವಕರು ಕ್ರಿಕೆಟ್ ಪ್ರಾರಂಭಿಸಿದ್ದಾರೆ. ನಮ್ಮ ಸಿ ಬಿ ತಂಡದ ಯುಜುವೇಂದ್ರ ಚಾಹಲ್ ಅವರಿಗೆ ಕೂಡ ಶೇನ್ ವಾರ್ನ್ ಅವರೇ ಪ್ರೇರಣೆ. ಶೇನ್ ವಾರ್ನ್ ಅವರು 2008-2011 ರ ತನಕ ಐಪಿಎಲ್ ನಲ್ಲಿ ಆಟವಾಡಿದ್ದಾರೆ. ಇವರು ಕ್ಯಾಪ್ಟನ್ ಆಗಿ 2008 ರಲ್ಲಿ ಐಪಿಎಲ್ ಕಪ್ ಅನ್ನು ಕೂಡ ಗೆದ್ದಿದ್ದರು.  ಇವರು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿದ್ದರು. ಹಾಗೆ 2018 ರಿಂದ ಶೇನ್ ವಾರ್ನ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿ ಕೆಲಸ ಮಾಡುತ್ತಿದ್ದರು.

ದೈಹಿಕವಾಗಿ ತುಂಬ ಫಿಟ್ ಆಗಿದ್ದು ಶೇನ್ ವಾರ್ನ್ ಅವರಿಗೆ ಇದ್ದಕ್ಕಿದ್ದಂತೆ ಆಗಿದ್ದೇನು ಎಂಬುದು ನಿಜಕ್ಕೂ ಆಶ್ಚರ್ಯಕರ ವಿಷಯ. ಶೇನ್ ವಾರ್ನ್ ಅವರು ಥೈಲೆಂಡ್ ನಲ್ಲಿ ವಿಲ್ಲಾದಲ್ಲಿ ವಾಸಿಸುತ್ತಿದ್ದರು. ಮಾರ್ಚ್ 4 2022 ರ ಸಂಜೆ ಶೇನ್ ವಾರ್ನ್ ಅವರಿಗೆ ಹೃದಯಾಘಾ’ ತ ಉಂಟಾಗಿದೆ. ಶೇನ್ ವಾರ್ನ್ ಅವರು ವಿಲ್ಲಾದಲ್ಲಿ ಪ್ರತಿಕ್ರಿಯಿಸದೇ ಇರುವುದು ಕಂಡುಬಂದಿದೆ. ತಕ್ಷಣ ವೈದ್ಯರನ್ನು ಶೇನ್ ವಾರ್ನ್ ಅವರ ಮನೆಗೆ ಕರೆಸಿದ್ದಾರೆ. ಮತ್ತು ವೈದ್ಯಕೀಯ ಸಿಬ್ಬಂದಿಗಳು ತಮ್ಮ ಎಲ್ಲಾ ಪ್ರಯತ್ನವನ್ನು ಪಟ್ಟರೂ ಸಹ ಶೇನ್ ವಾರ್ನ್ ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗಲಿಲ್ಲ.

ಹದಿಮೂರು ಗಂಟೆಗಳ ಹಿಂದಷ್ಟೇ ಶೇನ್ ವಾರ್ನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಸ್ಟ್ರೇಲಿಯ ಮಾಜಿ ಆಟಗಾರ ರೋಡ್ ಮಾರ್ಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಆದರೆ ವಿಧಿಯಾಟ ನೋಡಿ ಮರು ದಿನ ಕಳೆಯುವಷ್ಟರಲ್ಲಿ ಶೇನ್ ವಾರ್ನ್ ಅವರೇ ಇಲ್ಲ. ಶೇನ್ ವಾರ್ನ್ ಅವರ ನಿಧನಕ್ಕೆ ಆಗಲು ಕಾರಣ ಏನು ಎಂಬುದನ್ನು ಶೇನ್ ವಾರ್ನೆ ಕುಟುಂಬದವರು ಇನ್ನೂ ಕೂಡ ಬಿಟ್ಟುಕೊಟ್ಟಿಲ್ಲ. ದಯವಿಟ್ಟು ನಮಗೆ ತೊಂದರೆ ಕೊಡಬೇಡಿ ನಮಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಶೇನ್ ವಾರ್ನ್ ಕುಟುಂಬದವರು ತಿಳಿಸಿದ್ದಾರೆ.

Leave a Comment

error: Content is protected !!