ದೇಶದಲ್ಲಿ ಕೊರೋನಾ ಮಹಾಮಾರಿಯ ಪ್ರಭಾವದಿಂದ ದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ ಹಾಗು ಇಡೀ ದೇಶವೇ ಲಾಕ್ ಡೌನ್ ನಲ್ಲಿದೆ, ಹೀಗಿರಿವಾಗ ದೇಶಕ್ಕಾಗಿ ಹಾಗೂ ದೇಶದ ಜನರ ಒಳಿತಿಗಾಗಿ ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯರು ರಾತ್ರಿ ಹಗಲು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಆದ್ರೆ ವಿಜವಾಡದ ಪೊಲೀಸ್ ಅಧಿಕಾರಿ ತನ್ನ ಹೆತ್ತ ತಾಯಿಯ ಅಂತ್ಯ ಸಂಸ್ಕಾರಕ್ಕೂ ಹೋಗದೆ ಕರ್ತ್ಯವಾದಲ್ಲಿ ನಿರತರಾಗಿದು ಕೆಲಸದ ಮೂಲಕವೇ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಹೌದು ಸರ್ಕಾರಿ ರೈಲ್ವೆ ಪೊಲೀಸ್ ನಲ್ಲಿ ಸಬ್ ಇನ್ ಪೆಕ್ಟರ್ ಕೆ ಶಾಂತರಾಮ್ ಅವರ ತಾಯಿ 69 ವರ್ಷದ ಸೀತಾಮಹಾಲಕ್ಷ್ಮೀ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು ಹಾಗಾಗಿ ಅಂತ್ಯ ಸಂಸ್ಕಾರಕ್ಕೆ ಹೋಗಬೇಕಾ ಅಥವಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾ? ಅನ್ನೋ ದ್ವಂದಕ್ಕೆ ಸಿಲುಕಿ ಕೊನೆಗೆ ತನ್ನನ್ನು ಸಮಾಜಸೇವೆಗೆ ತೊಡಗಿಸಿಕೊಂಡಿದ್ದಾರೆ.

ಇನ್ನು ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೋನಾ ಎಫೆಕ್ಟ್ ದಿನದಿಂದ ದಿನಕ್ಕೆ ಜಾಸ್ತಿ ಆಗುತಿದ್ದು, ಆದಷ್ಟು ಜನರು ಲಾಕ್ ಡೌನ್ ಪಾಲನೆ ಮಾಡಬೇಕಾಗುತ್ತದೆ, ಜನರು ಕಟ್ಟು ನಿಟ್ಟಿನ ಕ್ರಮವನ್ನು ಪಾಲಿಸದ್ದೆ ಇದ್ದಲ್ಲಿ ಮುಂದಿನ ದಿನಗಳು ಇನ್ನು ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ ಹಾಗಾಗಿ ಎಲ್ಲರು ಮನೆಯಲ್ಲೇ ಇದ್ದು ಕೊರೋನಾ ವೈರಸ್ ವಿರುದ್ಧ ಹೋರಾಡಬೇಕಾಗಿದೆ.

By admin

Leave a Reply

Your email address will not be published.