ತಾನು ಮದುವೆ ಆಗಲಿರುವ ಭಾವಿ ಪತಿಯನ್ನೇ ಬಂಧಿಸಿದ ಮಹಿಳಾ ಸಬ್ ಇನ್ಸ್‌ಪೆಕ್ಟರ್! ನಿಶ್ಚಿತಾರ್ಥದ ನಂತರ ಗೊತ್ತಾಯ್ತು ಶಾಕಿಂಗ್ ಸತ್ಯ

ಅಸ್ಸಾಂನ ನಾಗಾವ್ ಪೊಲೀಸ್ ಠಾಣೆಯ ಮಹಿಳಾ ವಿಭಾಗದ ಪ್ರಭಾರಿ ಸಬ್ ಇನ್‌ಸ್ಪೆಕ್ಟರ್ ಆಗಿ ಜೋನ್ಮಣಿ ರಾಭಾ ಎಂಬ ಯುವತಿ ಕೆಲಸ ಮಾಡುತ್ತಿದ್ದಳು. ಹಾಗೂ ಈಕೆಗೆ ರಾಣಾ ಪಾಗ್‌ ಎಂಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಹೊಸದಾದ ಕೇಸ್ ವೊಂದರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ಮದುವೆ ಆಗಲಿರುವ ಹುಡುಗ ಕಳ್ಳ -ಖದೀಮ ಎಂಬ ವಿಷಯ ಜೋನ್ಮಣಿಗೆ ತಿಳಿಯುತ್ತೆ. ತಾನು ಮದುವೆಯಾಗಲಿರುವ ಭಾವಿ ಪತಿ ಅಪರಾಧಿ ಎಂದು ತಿಳಿದಾಗ ಈ ಪೋಲೀಸ್ ಮಹಿಳೆ ಮಾಡಿದ ಕೆಲಸ ನಿಜಕ್ಕೂ ಬೆರಗು ಮೂಡಿಸಿದೆ.

ಹಿಂದಿನ ವರ್ಷ ಜನವರಿ 2021 ರಲ್ಲಿ ಫೇಸ್ ಬುಕ್ ನಲ್ಲಿ ಇವರಿಬ್ಬರ ಭೇಟಿಯಾಯಿತು. ಮೊದಲು ಭೇಟಿಯಾದಾಗ ಜೋನ್ಮಣಿ ಬಳಿ ಈ ಸಮಯದಲ್ಲಿ, ರಾಣಾ ಪಾಗ್ ತನ್ನನ್ನು ತಾನು ONGC ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯ ಮಾಡಿ ಕೊಂಡಿದ್ದ. ಜೋನ್ಮಣಿ ಈತನ ನಲ್ಮೆಯ ಮಾತುಗಳಿಗೆ ಮನಸೋತಿದ್ದಳು. ಮೊದಮೊದಲು ಈತನ ಮೇಲೆ ಆಕೆಗೆ ಸ್ವಲ್ಪ ಕೂಡ ಅನುಮಾನ ಬರಲಿಲ್ಲ. ಫೇಸ್ ಬುಕ್ ನಲ್ಲಿ ಪರಿಚಯವಾಗಿ ಹಾಗೆ ನಿಧಾನವಾಗಿ ಇವರಿಬ್ಬರ ಸ್ನೇಹ ಶುರುವಾಯ್ತು.

ಕೆಲವು ದಿನಗಳ ನಂತರ ರಾಣಾ ಗೆ ಜೋನ್ಮಣಿ ಮೇಲೆ ಪ್ರೀತಿ ಹುಟ್ಟುತ್ತದೆ. ನಂತರ, ರಾಣಾ ಜೋನ್ಮಣಿಗೆ ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ. ಮದುವೆಯ ಪ್ರಸ್ತಾಪವನ್ನು ಕಣ್ಣು ಮುಚ್ಚಿಕೊಂಡು ಜೋನ್ಮಣಿ ಸಹ ಒಪ್ಪಿಕೊಂಡಿದ್ದಳು.ಆಮೇಲೆ ರಾಣಾ ಮತ್ತು ಜೋನ್ಮಣಿ ಇಬ್ಬರೂ ಕುಟುಂಬದವರು ಮಾತುಕತೆ ನಡೆಸಿ 2021 ಅಕ್ಟೋಬರ್ ತಿಂಗಳಿನಲ್ಲಿ ಎರಡು ಜೋಡಿಗಳಿಗೆ ನಿಶ್ಚಿತಾರ್ಥ ಮಾಡಿದ್ದರು.ಮತ್ತು ಇವರಿಬ್ಬರ ಮದುವೆಯನ್ನು ಇದೇ ವರ್ಷ 2022 ನವೆಂಬರ್ ತಿಂಗಳಿನಲ್ಲಿ ನಿಗದಿ ಮಾಡಲಾಗಿತ್ತು.

2022 ರ ಪ್ರಾರಂಭದಲ್ಲಿ ಜೋನ್ಮಣಿ ಒಂದು ವಂಚನೆಯ ಆರೋಪದ ತನಿಖೆ ನಡೆಸುವಾಗ ತನ್ನ ಭಾವಿ ಪತಿ ಆರೋಪಿ ಎಂಬುದು ಈಕೆಯ ವಿಷಯ ತಿಳಿಯುತ್ತದೆ. ಈ ವಿಷಯ ತಿಳಿದು ಸ್ವತಃ ಜೋನ್ಮಣಿಯೇ ಶಾಕ್ ಆಗುತ್ತಾಳೆ. ಆಗ ಜೋನ್ಮಣಿ ತನ್ನ ಭಾವಿ ಪತಿಯ ಬ್ಯಾಗ್ರೌಂಡ್ ಏನೆಂದು ಸೂಕ್ಷ್ಮವಾಗಿ ಪರೀಕ್ಷಿಸಲು ಮುಂದಾಗುತ್ತಾಳೆ. ವಿಚಾರಣೆಯ ವೇಳೆ ಭಾವಿ ಪತಿ ರಾಣಾ ನ ಸೀಲುಗಳು, ನಕಲಿ ಐಡಿ ಪುರಾವೆಗಳು, ದೋಷಾರೋಪಣೆಯ ದಾಖಲೆಗಳು, ಲ್ಯಾಪ್‌ಟಾಪ್, ಹಲವಾರು ಮೊಬೈಲ್ ಫೋನ್‌ಗಳು ಮತ್ತು ಚೆಕ್ ಪುಸ್ತಕಗಳು ಸಿಕ್ಕಿವೆ.

ಈ ಮನುಷ್ಯ ಹಲವಾರು ಜನರನ್ನು ನಕಲಿ ಗುರುತಿನ ಮೂಲಕ ನಂಬಿಸಿ ಮೋಸ ಮಾಡುತ್ತಿದ್ದ ಎಂಬ ವಿಷಯ ಜೋನ್ಮಣಿ ಗೆ ತಿಳಿಯುತ್ತೆ. ಗುತ್ತಿಗೆ ನೀಡುವ ನೆಪದಲ್ಲಿ ನಕಲಿ ಗುರುತಿನ ಮೂಲಕ 30 ಲಕ್ಷ ರೂಪಾಯಿಗಳನ್ನು ವಂ’ಚ’ನೆ ಮಾಡಿದ ಸಾಕ್ಷಿಗಳು ಕೂಡ ಆಕೆಗೆ ಸಿಗುತ್ತೆ. ವಿಷಯ ತಿಳಿಯುತ್ತಿದ್ದಂತೆ ಸಬ್ಬಿನಿಸ್ಪೆಕ್ಟರ್ ಜೋನ್ಮಣಿ ಕಳ್ ನನ್ ಮಗ ಭಾವಿ ಪತಿಯನ್ನು ಬಂಧಿಸಿದ್ದಾಳೆ ಮತ್ತು ನ್ಯಾಯಾಲಯಕ್ಕೆ ಕೂಡ ಹಾಜರುಪಡಿಸಿದ್ದಾಳೆ. ಹಾಗೆ ನ್ಯಾಯಾಲಯವು ರಾಣಾ ನನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಲ್ಲಿ ಇಡುವಂತೆ ಆಜ್ಞೆ ಹೊರಡಿಸಿದೆ.

Leave a Comment

error: Content is protected !!