ತನ್ನ ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಅವನ ಬಳಿ ಮತ್ತೊಂದು ವೀಡಿಯೊ ಇದೆ ಯಾವಾಗ ಬಿಡ್ತಾನೋ ಗೊತ್ತಿಲ್ಲ, ಜೀವನದ ಕಹಿ ಸಂಗತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸೋನು ಗೌಡ

ಕೆಲ ತಿಂಗಳ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಬಿಗ್‌ಬಾಸ್‌ ಮನೆಯಲ್ಲಿರುವ ಸೋನು ಗೌಡ ಆ ವಿಡಿಯೋ ತಮ್ಮದೇ ಎಂದು ಹೇಳಿರುವುದು ಮಾತ್ರವಲ್ಲದೆ ಆ ವಿಡಿಯೋ ವೈರಲ್ ಆಗಿದ್ದರ ಹಿಂದಿನ ಕಾರಣವನ್ನೂ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಇದೀಗ ಬಿಗ್‌ಬಾಸ್ ಮನೆ ಸೇರಿದ್ದಾರೆ. ಟಿಕ್‌ಟಾಕ್ ಮೂಲಕ ಜನಪ್ರಿಯವಾಗಿದ್ದ ಸೋನು ಗೌಡ ಆ ನಂತರ ಇನ್‌ಸ್ಟಾಗ್ರಾಂ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದರು.ಸೋನು ಗೌಡ ಅವರನ್ನು ಸತತವಾಗಿ ಟ್ರೋಲ್ ಮಾಡುವ ದೊಡ್ಡ ವರ್ಗವೇ ಸಾಮಾಜಿಕ ಜಾಲತಾಣದಲ್ಲಿ ಇದೆ. ಸೋನು ಗೌಡ ಹಲವು ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುತ್ತಾರೆ.

ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಬಿಗ್ ಬಾಸ್’ ಓಟಿಟಿ ಶೋ ಶುರುವಾಗಿ ಎರಡು ದಿನ ಕಳೆದಿದೆ. ಮನೆಯೊಳಗೆ ಇರುವ ಸ್ಪರ್ಧಿಗಳು ಒಬ್ಬರಿಗೊಬ್ಬರು ಪರಸ್ಪರ ಪರಿಚಿತರಾಗುತ್ತಿದ್ದಾರೆ. ಒಬ್ಬೊಬ್ಬರೇ ಮುಂದೆ ಬಂದು ತಮ್ಮ ಸಂಕಟದ ಕಥೆಗಳನ್ನು ಹೇಳಿಕೊಂಡು ಕಣ್ಣೀರಿಡುತ್ತಿದ್ದಾರೆ. ಈ ಮಧ್ಯೆ ಸೋನು ಶ್ರೀನಿವಾಸ್ ಗೌಡ ಕೂಡ ತಮ್ಮ ಬದುಕಿನ ಒಂದು ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ವೈರಲ್ ಆದ ತಮ್ಮ ಖಾಸಗಿ ವಿಡಿಯೋ ಕುರಿತು ಮಾಹಿತಿ ಹೇಳಿದ್ದಾರೆ. ಅಂದಹಾಗೆ, ‘ತಮ್ಮ ವಿಡಿಯೋಗಳನ್ನು ಲೀಕ್ ಮಾಡಿದ್ದು ನನ್ನ ಬಾಯ್‌ಫ್ರೆಂಡ್’ ಎಂದು ಹೇಳಿದ್ದಾರೆ ಸೋನು!

ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸಕ್ಕತ್ ಆಗಿ ಸುದ್ದಿಯಾಗುತ್ತಿದ್ದಾರೆ. ಭಿನ್ನ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಪ್ರವೇಶ ನೀಡಿದ ಮರು ಘಳಿಗೆಯಲ್ಲೇ ತನ್ನ ಮನಸ್ಸಿನಲ್ಲಿದ್ದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಸೋನು ಗೌಡ ಅವರು, ತನ್ನ ಜೀವನದಲ್ಲಿ ಎದುರಾದ ನಂಬಿಕೆ ದ್ರೋಹ, ಅವಮಾನಗಳನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೆ ,ಅವನೂ ನನ್ನನ್ನು ಇಷ್ಟಪಡುತ್ತಿದ್ದ ಅವನು ಮೊದಲಿನಿಂದ ನನಗೆ ಗೊತ್ತಿದ್ದ ಹುಡುಗ ನಮ್ಮ ಜಾತಿಯವನು ಅವರನ್ನು ಮದುವೆ ಆಗ್ತೀನಿ ಅಂತ ಮನೆಯಲ್ಲಿ ಸಹ ಹೇಳಿದ್ದೆ.ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು ಅವನೂ ಕೂಡ ಮದುವೆಗೆ ಒಪ್ಪಿಕೊಂಡಿದ್ದ. ಒಮ್ಮೆ ಆತ ನನ್ನ ವಿಡಿಯೋ ಕಳಿಸಲು ಹೇಳಿದ. ನಾನೂ ಸಹ ನನ್ನ ಬೆತ್ತಲೆ ವಿಡಿಯೋ ಕಳಿಸಿಬಿಟ್ಟೆ. ಆದರೆ ಅದನ್ನು ಅವನು ವೈರಲ್ ಮಾಡಿಬಿಟ್ಟ ಎಂದು ಹೇಳುತ್ತಾ ಸೋನು ಗೌಡ ಕಣ್ಣೀರು ಹಾಕಿದ್ದಾರೆ.

ಆ ವಿಡಿಯೋ ಇಟ್ಟುಕೊಂಡು ಬ್ಲಾಕ್​ ಮೇಲ್​ ಮಾಡುತ್ತಿದ್ದ.ಇನ್ನು ಮುಂದೆ ಅದು ಯಾರನ್ನು ನೀನು ಮದುವೆ ಆಗುತ್ತೀಯೋ ನೋಡುತ್ತೇನೆ ಎಂದೆಲ್ಲ ಹೆದರಿಸಿದ ಆಗಲೇ ನಾನು ಅಮ್ಮನ ಬಳಿಕ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದೆ. ಒಂದೂವರೆ ವರ್ಷದ ಬಳಿಕ ಮೆಸೇಜ್​ ಮಾಡಿ ಹೆದರಿಸಿದ. ವಿಡಿಯೋ ಲೀಕ್​ ಮಾಡ್ತೀನಿ ಅಂತ ಬೆದರಿಸಿದ. ಅಳುತ್ತಾ ನಾನು ಡಿಪ್ರೆಷನ್​ಗೆ ಹೋದೆ.ಆದರೂ ಕನಿಕರ ಇಲ್ಲದ ಆ ವ್ಯಕ್ತಿ ನನ್ನ ಆ ವಿಡಿಯೋವನ್ನು ಲೀಕ್​ ಮಾಡೆ ಬಿಟ್ಟ . ಅದಾದ ಬಳಿಕ ನಾನು ನಮ್ಮ ಊರಿಗೆ ಹೋಗಿಲ್ಲ .ಎಲ್ಲರೂ ಫೋನ್ ಮಾಡಿ ಬೈಯುತ್ತಿದ್ದರು ,ನಮ್ ಮರ್ಯಾದೆ ಹಾಳು ಮಾಡಿದೆ ,ಎಂದೆಲ್ಲಾ ತುಚ್ಯವಾಗಿ ಬೈದಿದ್ದಾರೆ.ಆ ಸಮಯದಲ್ಲಿ ನನ್ನಮ್ಮ ನನ್ಗೆ ತುಂಬಾನೇ ಸಪೋರ್ಟ್ ಮಾಡಿದ್ದರು.

ನನ್ನ ನಂಬಿಕೆಗೆ ಮೋಸ ಆಯ್ತು. ನಾನು ಇದುವರೆಗೆ ಯಾವ ಹುಡುಗನನ್ನೂ ಕೈ ಹಿಡಿದುಕೊಂಡು ಮಾತನಾಡಿಸಿಲ್ಲ. ಇಲ್ಲಿ ಯಾರೂ ಸಾಚಾ ಅಲ್ಲ. ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನಂದು ಹೊರಗೆ ಬಂತು. ನಾನು ಪಬ್​ಗೆ ಹೋಗುತ್ತೇನೆ. ಎಲ್ಲ ಕಡೆ ಎಂಜಾಯ್​ ಮಾಡ್ತೀನಿ. ಆದರೆ ನಮ್ಮ ಅಮ್ಮ ಹಳ್ಳಿ ಕಡೆಯಿಂದ ಬಂದೋರು. ಅವರು ಅಷ್ಟು ದುಡ್ಡು ಮಾಡಿಟ್ಟಿರುವುದು ನಮಗೋಸ್ಕರ. ನಾನು ಅವರ ಮಾನ ಮರ್ಯಾದೆ ತೆಗೆದೆ ಎಂಬ ಫೀಲ್​ ನನ್ನನ್ನು ತುಂಬ ಕಾಡುತ್ತಿದೆ ಎಂದಿದ್ದಾರೆ ಸೋನು ಶ್ರೀನಿವಾಸ್​ ಗೌಡ.

ಆದರೆ ಹೊರಗೆ ಸೋನು ಗೌಡ ಅವರಿಗೆ ವಿರೋಧ ವ್ಯಕ್ತವಾಗಿದೆ. ಸೋನು ಗೌಡ ಅವರನ್ನು ಬಿಗ್‌ಬಾಸ್ ಮನೆಯ ಒಳಗೆ ಕಳಿಸಿದ್ದಕ್ಕೆ ಹಲವರು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನು ಗೌಡ ಯಾವ ಸಾಧನೆ ಮಾಡಿದ್ದಾರೆಂದು ಅವರನ್ನು ಬಿಗ್‌ಬಾಸ್ ಮನೆ ಒಳಗೆ ಕಳಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ‘ಕನ್ನಡಿಗರು ಬೆಳೆಸುವುದಿಲ್ಲ, ತುಳಿಯುತ್ತಾರೆ’ ಎಂದು ಹಿಂದೊಮ್ಮೆ ನೀಡಿದ್ದ ಹೇಳಿಕೆಯನ್ನಿಟ್ಟುಕೊಂಡು ಸೋನು ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.ಹಾಗೆ ಇಂದಿನ ಯುವ ಜನಾಂಗದ ಹೆಣ್ಣು ಮಕ್ಕಳಿಗೆ ಅವರಿಂದ ಯಾವ ರೀತಿಯ ಪ್ರೇರಣೆ ಸಿಗುತ್ತದೆ. ಎಂದು ನೆಟ್ಟಿಗರು ಗರಂ ಆಗಿದ್ದಾರೆ.

Leave a Comment

error: Content is protected !!