ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲ. ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಮುಂದೆ ಇದು ಯಾವ ಹಂತಕ್ಕೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಮಕ್ಕಳಿಗೆ ತಂದೆ ತಾಯಿಯೇ ಸಂಬಂಧದ ಬೆಲೆ ಗೊತ್ತಿಲ್ಲ. ಚಿಕ್ಕಮ್ಮ ದೊಡ್ಡಮ್ಮ ಇವರೆಲ್ಲರೂ ತಾಯಿಗೆ ಸಮಾನರು ಮಲತಾಯಿಯಾದರೂ ಕೂಡ ಆಕೆ ತಾಯಿಯ ಸಮಾನ. ತನ್ನ ಮಲತಾಯಿಯ ಜೊತೆಗೆ ಸಂಬಂಧ ಬೆಳೆಸಿ ಮಲತಾಯಿಯನ್ನೇ ಮದುವೆಯಾದ ವಿಚಿತ್ರ ಮತ್ತು ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ.

ಉತ್ತರಾಖಂಡದ ಬಜ್ಪುರ್​ ಜಿಲ್ಲೆಯ ಇಂದ್ರರಾಮ್​ ಎಂಬಾತ ಎರಡು ಮದುವೆ ಆಗಿದ್ದ. 11 ವರ್ಷಗಳ ಹಿಂದೆ ಮೊದಲ ಪತ್ನಿ ತೀರಿಕೊಂಡಿದ್ದಳು. ಮೊದಲ ಪತ್ನಿಗೆ ಇಬ್ಬರು ಮಕ್ಕಳು ಇದ್ದರು. ಮೊದಲ ಪತ್ನಿ ತೀರಿಕೊಂಡ ಮೇಲೆ ಇಂದ್ರರಾಮ್ ಬಾಬ್ಲಿ ಮಹಿಳೆಯನ್ನು ಮದುವೆಯಾದ. ಎರಡನೇ ಹೆಂಡತಿಯ ಜೊತೆ ಬೇರೆ ಮನೆಯಲ್ಲಿ ಇಂದ್ರರಾಮ್ ವಾಸ ಮಾಡುತ್ತಿದ್ದ. ಈತನ ಮೊದಲ ಪತ್ನಿ ಇಬ್ಬರು ಮಕ್ಕಳು ಈತನ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಇಂದ್ರರಾಮ್ ಮೊದಲ ಪತ್ನಿಯ ಮೊದಲ ಮಗ ಆಗಾಗ ಎರಡನೆಯ ಪತ್ನಿಯ ಜತೆ ವಾಸವಿದ್ದ ಮನೆಗೆ ಬರುತ್ತಿದ್ದ. ಆಗಾಗ ಹಿರಿಮಗ ಮನಿಗೆ ಬಂದು ಬಾಬ್ಲಿ(ಎರಡನೇ ಪತ್ನಿ)ಯ ಜೊತೆ ಅನ್ಯೋನ್ಯವಾಗಿ ಮಾತನಾಡುತ್ತಿದ್ದ. ಮತ್ತು ಬಾಬ್ಲಿ ಮಾಡಿದ ಕೈ ಅಡುಗೆ ಊಟ ಮಾಡಿಕೊಂಡು ಹೋಗುತ್ತಿದ್ದ. ನಿಧಾನವಾಗಿ ಎರಡನೆಯ ಹೆಂಡತಿ ಮತ್ತು ಹಿರಿಯ ಮಗನ ಮಧ್ಯೆ ಅ’ನೈ’ತಿಕ ಸಂಬಂಧ ಶುರುವಾಗುತ್ತೆ. ಇವರಿಬ್ಬರ ಮಧ್ಯೆ ಡಿಂಗ್ ಡಾಂಗ್ ಆಟ ಶುರುವಾದ ವಿಚಾರ ಮೊದಮೊದಲು ಇಂದ್ರರಾಮ್ ಗೆ ತಿಳಿದಿರುವುದಿಲ್ಲ.

ಒಂದು ದಿನದ ಮಟ್ಟಿಗೆ ತವರು ಮನೆಗೆ ಹೋಗುತ್ತೇನೆ ಎಂದು ಹೇಳಿದ ಬಾಬ್ಲಿ ಎರಡು ದಿವಸವಾದರೂ ಮನೆಗೆ ಬರುವುದಿಲ್ಲ. ನಂತರ ಇಂದ್ರರಾಮ್ ವಿಚಾರಣೆ ಮಾಡಿದಾಗ ತಿಳಿಯುತ್ತೆ ಸ್ಫೋಟಕ ಮಾಹಿತಿ. ತನ್ನ ಎರಡನೇ ಪತ್ನಿ ಬಾಬ್ಲಿ ತನ್ನ ಹಿರಿಯ ಮಗನ ಜೊತೆ ಮದುವೆಯಾಗಿದ್ದಾಳೆ ಎಂಬ ವಿಷಯ ಇಂದ್ರರಾಮ್ ಗೆ ಅರಿವಾಗುತ್ತದೆ.ಮನೆಯಿಂದ ಪರಾರಿಯಾಗುವಾಗ ಪತ್ನಿ ಬಾಬ್ಲಿ ಇಪ್ಪತ್ತು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಹೋದ ವಿಷಯ ಕೂಡ ಆತನಿಗೆ ಗೊತ್ತಾಗುತ್ತೆ.ತಕ್ಷಣ ಇಂದ್ರರಾಮ್ ಹಿರಿಯ ಮಗನ ಮನೆಗೆ ಹೋಗುತ್ತಾನೆ.

ಹಿರಿಯ ಮಗನ ಮನೆಯಲ್ಲಿ ಎರಡನೇ ಪತ್ನಿಯನ್ನು ನೋಡಿ ಇಂದ್ರರಾಮ್ ಶಾಕ್ ಆಗುತ್ತಾನೆ. ಮನೆಗೆ ಬಾ ಎಂದು ಬಾಬ್ಲಿ ಯನ್ನು ಒತ್ತಾಯಿಸುತ್ತಾನೆ. ಆದರೆ ಬಾಬ್ಲಿ ನಿರಾಕರಿಸುತ್ತಾಳೆ. ತದನಂತರ ಇವರ ನಡುವೆ ಮಾತಿನ ಚಕಮಕಿ ನಡೆದು ಇಂದ್ರರಾಮ್ ಗೆ ಗಾಯಗಳಾಗಿವೆ. ತನ್ನ ಹೆಂಡತಿ ಮತ್ತು ಮಗನ ಇಂತಹ ಅಸಹ್ಯ ಕೃತ್ಯವನ್ನು ಮಾಡಿರುವುದನ್ನು ನೋಡಿ ಇಂದ್ರರಾಮ್ ಗೆ ಸಹಿಸಿಕೊಳ್ಳಲಾಗಲಿಲ್ಲ. ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲು ಮಾಡಿದ್ದಾನೆ. ಮನನೊಂದ ಇಂದ್ರರಾಮ್ ನ್ಯಾಯ ಕೊಡಿಸುವಂತೆ ಗೋಳಾಡಿದ್ದಾನೆ.

By admin

Leave a Reply

Your email address will not be published.