ತಾಳಿ ಕಟ್ಟಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ವಧುವಿಗೆ ಆಗಿದ್ದೇನು ನೋಡಿ ನಿಜಕ್ಕೂ ಶಾಕಿಂಗ್
ನಮ್ಮೆಲ್ಲರ ಜೀವನವೇ ಒಂದು ಮಾಯಾಜಾಲ ಯಾವಾಗ ಏನಾಗುತ್ತೆ ಎಂದು ಹೇಳೋಕೆ ಯಾರಿಂದಲೂ ಸಾಧ್ಯವಿಲ್ಲ ದೇವರ ಆಟವನ್ನು ಬಲ್ಲವರು ಯಾರೂ ಇಲ್ಲ. ಕೆಲವೊಮ್ಮೆ ನಾವು ಊಹಿಸಲೂ ಆಗದಂಥ ಘಟನೆಗಳು ನಡೆದು ಹೋಗುತ್ತವೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಮದುರವಾಡದಲ್ಲಿ ನಡೆದ ಒಂದು ಮದುವೆಯಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ವಧುವಿಗೆ ಆದ ಪರಿಸ್ಥಿತಿ ನೋಡಿ ಮದುವೆಗೆ ಬಂದಿದ್ದವರೆಲ್ಲ ಒಂದು ನಿಮಿಷ ಬೆಚ್ಚಿಬಿದ್ದರು..
ವಿಶಾಖಪಟ್ಟಣ ಜಿಲ್ಲೆಯ ಸೃಜನಾಳ ಮತ್ತು ಶಿವಾಜಿ ಎಂಬ ಜೋಡಿಗೆ ಮದುವೆ ಫಿಕ್ಸ್ ಆಗಿತ್ತು. ಮೇ 12 ರಂದು ಇವರ ಮದುವೆ ಕಾರ್ಯಕ್ರಮ ನಡೆದಿದೆ. ಮನೆಯವರೆಲ್ಲರೂ ಸೇರಿ ಒಳ್ಳೆಯ ಘಳಿಗೆ ನೋಡಿ ಮೇ 12 ನೇ ತಾರೀಕಿನಂದು ಮದುವೆ ನಿಶ್ಚಯ ಮಾಡಿದ್ದರು. ಮದುವೆಯ ಘಳಿಗೆ ಚೆನ್ನಾಗಿದ್ದರೂ ಕೂಡ ಸೃಜನಾಳ ಹಣೆಬರಹ ಸರಿ ಇರಲಿಲ್ಲ. ಇನ್ನೇನು ಮದುವೆ ಗಂಡು ಹೆಣ್ಣಿಗೆ ತಾಳಿ ಕಟ್ಟುವ ಸಮಯ. ಅಷ್ಟರಲ್ಲಿ ನೋಡಿ ದೊಡ್ಡ ಆ’ಘಾತ ಕಾದಿತ್ತು.

ಮದುವೆ ಗಂಡು ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುಮಗಳು ಸೃಜನ ಎಚ್ಚರ ತಪ್ಪಿ ಮದುವೆ ಮಂಟಪದಲ್ಲಿ ಬಿದ್ದಿದ್ದಾಳೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ಗಟ್ಟಿಮುಟ್ಟಾಗಿದ್ದ ಮಧು ಇದ್ದಕ್ಕಿದ್ದಂತೆ ಮಂಟಪದಲ್ಲೇ ಕುಸಿದು ಬಿದ್ದದ್ದನ್ನು ನೋಡಿ ಪ್ರತಿಯೊಬ್ಬರಿಗೂ ಆಶ್ಚರ್ಯವಾಗುತ್ತೆ. ತಕ್ಷಣ ವಧುವಿಗೆ ನೀರನ್ನು ಸೋಕಿ ಎಚ್ಚರಿಸುವ ಪ್ರಯತ್ನ ಪಡುತ್ತಾರೆ. ಆದರೆ ಸೃಜನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ತಕ್ಷಣ ವಧುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಕಳೆದ ಮೂರು ದಿನಗಳಿಂದ ಮದುವೆ ಸಮಾರಂಭಗಳು ಮತ್ತು ತೀವ್ರವಾದ ಫೋಟೋ ಶೂಟ್‌ಗಳಿಂದಾಗಿ ಆಯಾಸದಿಂದ ಸೃಜನಾ ಸಾ’ವ’ನ್ನಪ್ಪಿರಬಹುದು ಎಂದು ಕುಟುಂಬ ಭಾವಿಸಿದ್ದರು. ಆದರೆ ಆಕೆ ವಿ’ಷ’ ಸೇವಿಸಿ ಸಾ’ವ’ನ್ನಪ್ಪಿದ್ದಾಳೆ ಎಂದು ವೈದ್ಯರು ಸ್ಫೋಟಕ ಮಾಹಿತಿ ತಿಳಿಸಿದ್ದಾರೆ. ವೈದ್ಯರ ಈ ಮಾತನ್ನು ಕೇಳಿ ತಕ್ಷಣ ಸೃಜನಾಳ ಪಾಲಕರು ಪೋಲೀಸ್ ಠಾಣೆಗೆ ಹೋಗಿ ಗಂಡಿನ ಮನೆಯವರ ಮೇಲೆ ದೂರನ್ನು ದಾಖಲಿಸಿದ್ದಾರೆ. ಮದುವೆಗೂ ಮುಂಚೆಯೇ ತಮ್ಮ ಮಗಳ ಮೇಲೆ ಒತ್ತಡವನ್ನು ಹೇರಿ ಮಗಳನ್ನು ಮುಗಿಸಿದ್ದಾರೆ ಅಂತ ವರನ ಕಡೆಯವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.