PAN Card: ಪಾನ್ ಕಾರ್ಡ್ ಲಿಂಕ್ ಮಾಡುವ ಮುನ್ನ ಇದೊಂದು ಕೆಲಸ ಮಾಡಿಬಿಡಿ.

PAN Card ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರ್ಥಿಕ ಸಚಿವಾಲಯ ಪಾನ್ ಕಾರ್ಡ್(PAN card) ಬಳಕೆದಾರರಿಗೆ ಜೂನ್ 30ರ ವರೆಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್(Aadhar Card) ಜೊತೆಗೆ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುವಂತಹ ಅಧಿಕೃತ ಕಡ್ಡಾಯ ನಿಯಮವನ್ನು ಹೊರಹಾಕಿದೆ.

50,000ಕ್ಕೂ ಮೇಲ್ಪಟ್ಟ ಟ್ರಾನ್ಸಾಕ್ಷನ್ ನಿಂದ ಹಿಡಿದು ಬಹುತೇಕ ಹಲವಾರು ಆರ್ಥಿಕ ಸಂಬಂಧ ಕೆಲಸ ಗಳಿಗೆ ಪಾನ್ ಕಾರ್ಡ್ ಅಗತ್ಯ ಇದ್ದೇ ಇದೆ ಹಾಗೂ ಸರ್ಕಾರಿ ದಾಖಲೆಯ ರೂಪವಾಗಿ ಕೂಡ ಹಲವಾರು ಸರ್ಕಾರಿ ಕೆಲಸಗಳಲ್ಲಿಯೂ ಪಾನ್ ಕಾರ್ಡ್ ಅಗತ್ಯವಿದೆ. ಹೀಗಾಗಿ ಪಾನ್ ಕಾರ್ಡ್ ಎನ್ನುವುದು ಜೀವನದ ಅವಿಭಾಜ್ಯ ಅಂಗಗಳಲ್ಲಿ ಒಂದಾಗಿದ್ದು ಇದನ್ನು ನಿಷ್ಕ್ರಿಯಗೊಳಿಸಿದಂತೆ ತಡೆಯಲು ನೀವು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲೇಬೇಕು.

ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ಸಾವಿರ ರೂಪಾಯಿ ಲೇಟ್ ಫೈನ್ ಅನ್ನು ಕಟ್ಟಿ ನಂತರವೇ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಸಾಧ್ಯವಾಗಿದ್ದು ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನು ಮೊದಲು ಪರೀಕ್ಷಿಸಿ ನಂತರ ಲಿಂಕ್ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿ.

https://www.incometax.gov.in/ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗುವ ಮೂಲಕ ಇದನ್ನು ನೀವು ಅಗತ್ಯ ಮಾಹಿತಿಗಳನ್ನು ತುಂಬಿಸುವ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದ್ದು ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ಲಿಂಕ್ ಆಗದೆ ಹೋದಲ್ಲಿ https://incometaxindiaefiling.gov.in/ ವೆಬ್ಸೈಟ್ ಗೆ ಹೋಗಿ ಅಗತ್ಯ ಮಾಹಿತಿಗಳನ್ನು ತುಂಬಿಸುವ ಮೂಲಕ ಸಾವಿರ ರೂಪಾಯಿ ಫೈನ್ ಕಟ್ಟಿ, ನಿಮ್ಮ ಪಾನ್ ಕಾರ್ಡ್(PAN Card) ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳಬಹುದು.

Leave a Comment

error: Content is protected !!