ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಇತ್ತೀಚಿನ ದಿನಗಳಲ್ಲಿ ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಅಂತದ್ದೇ ಒಂದು ಕಥೆ ಈಗ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ. ಹೌದು ಮಿತ್ರರೇ ತೆಲಂಗಾಣದ ವಾರಂಗಲ್ ನ ಖಾನಾಪುರದಲ್ಲಿ ನಡೆದಿರುವ ಘಟನೆಯ ಕುರಿತಂತೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ನೂರ್ ಜಹಾನ್ ಎನ್ನುವ ಹುಡುಗಿ ಶರತ್ ಎನ್ನುವವನನ್ನು ಪ್ರೀತಿಸಿದ್ದಳು. ಮನೆಯವರ ವಿರೋಧದ ನಡುವೆ ಕೂಡ ಶರತ್ ನಾನು ನೂರ್ ಜಹಾನ್ ಹಿಂದೂ ಧರ್ಮದ ಪ್ರಕಾರವಾಗಿ ಮದುವೆಯಾಗಿದ್ದಳು. ಮದುವೆಯಾದ ಮೊದಲಿಗೆ ಚೆನ್ನಾಗಿತ್ತು ಇಬ್ಬರು ಕೂಡ ಹೈದರಾಬಾದ್ ಗೆ ಬಂದು ನೆಲೆಸಿದ್ದರು. ಮದುವೆಯಾದ ಐದೇ ತಿಂಗಳಿಗೆ ಶರತ್ ನ ತಾಯಿ ಹಾಗೂ ಮನೆಯವರು ನೂರ್ ಜಹಾನ್ ಳಿಗೆ ಕಿರುಕುಳವನ್ನು ನೀಡಲು ಪ್ರಾರಂಭಿಸುತ್ತಾರೆ.

ವರದಕ್ಷಿಣೆ ತರಲೇಬೇಕು ಎಂಬುದಾಗಿ ಇನ್ನಿಲ್ಲದಂತೆ ನೂರ್ ಜಹಾನ್ ಳಿಗೆ ಕಾಡುತ್ತಾರೆ. ಕೇವಲ ಗಂಡನ ಮನೆಯವರು ಮಾತ್ರವಲ್ಲದೆ ನಂಬಿ ಬಂದ ಗಂಡ ಕೂಡ ಈ ರೀತಿ ಕಿರುಕುಳದಲ್ಲಿ ಮನೆಯವರ ಜೊತೆಯಾದಾಗ ನೂರ್ ಜಹಾನ್ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ನೀಡಲು ಪ್ರಯತ್ನಿಸುತ್ತಾಳೆ ಆದರೆ ಶರತ್ ನ ಮನೆಯವರು ಅವರಿಗೆ ಲಂಚ ನೀಡಿ ಸುಮ್ಮನಾಗಿಸುತ್ತಾರೆ. ಕೊನೆಗೆ ದಾರಿ ತೋಚದೆ ನೂರ್ ಜಹಾನ್ ಮಾಡಿಕೊಂಡಿರುವ ಕಾರ್ಯ ನೋಡಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಅತ್ತೆ ಮಾವ ಹಾಗೂ ಗಂಡನಿಂದ ಸಿಕ್ಕ ಕಿರುಕುಳವನ್ನು ಸೆಲ್ಫಿ ವಿಡಿಯೋದ ಮುಖಾಂತರ ಬಿಚ್ಚಿಟ್ಟು ನನ್ನ ರೀತಿ ಬೇರೆ ಯಾರು ಕೂಡ ಹೀಗೆ ಮಾಡೋಕೆ ಹೋಗ್ಬೇಡಿ ಎಂಬುದಾಗಿ ಕಣ್ಣೀರಿಟ್ಟು ವಿಡಿಯೋ ಮಾಡಿ ಕೀಟನಾಶಕವನ್ನು ಸೇವಿಸಿ ತನ್ನ ಜೀವನವನ್ನು ತಾನೇ ಮುಗಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕಡೆ ಪೊಲೀಸ್ ತನಿಖೆ ಜೋರಾಗಿದ್ದು ಆ ಹೆಣ್ಣು ಮಗಳಿಗೆ ನ್ಯಾಯ ಸಿಗಲಿ ಎಂಬುದಾಗಿ ಆಶಿಸೋಣ.

By admin

Leave a Reply

Your email address will not be published.