ಯಾರೂ ಕಂಡು ಹಿಡಿಯದ ಅವಿಷ್ಕಾರವನ್ನು ಕಂಡು ಹಿಡಿದ ಡ್ರೋನ್ ಪ್ರತಾಪ್. ಕನ್ನಡಿಗರು ದಿಗ್ಭ್ರಮೆ

“ನಾನು ತುಂಬಾ ಬಡ ಕುಟುಂಬದಲ್ಲಿ ಜನಿಸಿ, ಕಷ್ಟಗಳನ್ನು ಎದುರಿಸುತ್ತಾ ಬೆಳೆದು, ಅವರಿವರ ಸಹಾಯ ಪಡೆದು, ಡ್ರೋನ್ ತಯಾರಿಸಿದ್ದೇನೆ. ನಾನೊಬ್ಬ ಯುವ ವಿಜ್ಞಾನಿ” ಎನ್ನುತ್ತಾ ದೊಡ್ಡ ದೊಡ್ಡ ವೇದಿಕೆಗಳಲ್ಲಿ, ಸಭೆ ಸಮಾರಂಭಗಳಲ್ಲಿ, ರಾಜಕಾರಣಿಗಳಿಂದ, ಮಾಧ್ಯಮಗಳಿಂದ ಬಿಟ್ಟಿ ಪ್ರಚಾರ ಪಡೆದು ದೇಶ ವಿದೇಶಿಗರನ್ನು ತನ್ನತ್ತ ಸೆಳೆದು, ಯಾಮಾರಿಸಿದ ಡ್ರೋನ್ ಪ್ರತಾಪ ಪೊಲೀಸರ ತನಿಖೆಯ ನಂತರ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈತನು ಎಲ್ಲರಿಗೂ ಬಕ್ರ ಮಾಡಿರುವ ವಿಷಯ ತಿಳಿದಾಗ ಇವನಿಗೆ ‘ಕಾಗೆ ಪ್ರತಾಪ’ ಎಂಬ ಹೆಸರು ಬಂತು. ಎರಡು ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಏನೋ ಮಾಡಲು ಹೊರಟಂತಿದೆ.

ಕಾಗೆ ಪ್ರತಾಪನದು ಮಲವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮ. ತಂದೆ ತಾಯಿ ಇಬ್ಬರು ರೇಷ್ಮೆ ಬೆಳೆಗಾರರಾಗಿ ಗುರುತಿಸಿಕೊಂಡಿದ್ದಾರೆ. ತಾಯಿಯ ತಂದೆ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಪ್ರತಾಪನ ದೊಡ್ಡಪ್ಪ ಅಮೆರಿಕಾದ ವಿದ್ಯಾಸಂಸ್ಥೆಯೊಂದರಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರ ಮಗ ಕಲ್ಕತ್ತಾದಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ಪ್ರತಾಪ ಹೇಳಿಕೊಂಡಷ್ಟು ಬಡತನವಿಲ್ಲ; ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮಲವಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಜೆಎಸ್ಎಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಾಗಿ ಪ್ರತಾಪ ಸೇರುತ್ತಾನೆ. ಇದ್ದಕ್ಕಿದ್ದಂತೆಲೇ ಹಣ ಮತ್ತು ಹೆಸರು ಮಾಡುವ ಹುಚ್ಚು ಹಿಡಿದು ಉಪನ್ಯಾಸಕರಿಂದ, ಮಠಗಳಿಂದ ಹಣವನ್ನು ಪಡೆದು, ‘ನಾನು ಡ್ರೋನ್ ಅನ್ನು ತಯಾರಿಸಿದ್ದೇನೆ ಜರ್ಮನಿಯಲ್ಲಿ ಅದನ್ನು ಪ್ರದರ್ಶನ ಮಾಡುತ್ತೇನೆ’ ಎಂದೆಲ್ಲ ಕಾಗೆ ಹಾರಿಸಿ ಬಕ್ರ ಮಾಡಿದ್ದಾನೆ. ಈ ಸುಳ್ಳು ವಿಜ್ಞಾನಿ ಇಂದಿನವರೆಗೂ ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿಲ್ಲ.

ಇದೀಗ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋದೊಂದಿಗೆ ಬರಹವನ್ನು ಹಂಚಿಕೊಂಡಿದ್ದು, ಮತ್ತೆ ಸುದ್ದಿಯಾಗುತ್ತಿದೆ. ಫೋಟೋದ ಒಂದು ಬದಿಯಲ್ಲಿ ಲ್ಯಾಪ್ಟಾಪ್, ಅದಕ್ಕೆ ಕನೆಕ್ಟ್ ಮಾಡಿದ ಕೇಬಲ್, ಎರಡು ಕೈಗಳಿಗೆ ಹಳದಿ ಬಣ್ಣದ ಗ್ಲೌಸ್, ಒಂದು ಕೈಯಲ್ಲಿ ಶೋಲ್ಡ್ರಿಂಗ್ ಗನ್, ಕಣ್ಣುಗಳಿಗೆ ಸುರಕ್ಷಿತ ಕನ್ನಡಕ, ಎದುರಿನಲ್ಲಿರುವ ಟೇಬಲ್ ಮೇಲೆ ಡ್ರೋನ್ಗಳ ರೆಕ್ಕೆ, ಮುಖದಲ್ಲೊಂದು ದೊಡ್ಡದಾದ ಮಂದಹಾಸ ಇವಿಷ್ಟನ್ನು ಕಾಣಬಹುದು. ಬರಹದಲ್ಲಿ ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತದೆ’ ಎಂದಿದೆ.

ತನ್ನ ಮೇಲೆ ಟೀಕೆ ಮಾಡಿದವರಿಗೆ ಸರಿಯಾಗಿಯೇ ಡ್ರೋನ್ ಪಥ ಉತ್ತರ ನೀಡಿದ್ದಾರೆ ವಿಮಾನಗಳನ್ನು ಕಂಟ್ರೋಲ್ ಮಾಡವಂತಹ ಅಪ್ಲಿಕೇಶನ್ ಅಥವಾ ಸಾಫ್ಟ್ ವೇರ್ ವೊಂದನ್ನು ಡ್ರೋನ್ ಪ್ರತಾಪ್ ತಯಾರಿಸಿದ್ದಾರೆ. ಫ್ಲೈಟ್ ಕಂಟ್ರೋಲರ್ ಆ್ಯಪ್ ಅನ್ನು ಕ್ರಿಯೇಟ್ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಹಂಚಿಕೊಂಡಿದ್ದಾರೆ. ಆದರೆ ಇದು ಪ್ರ್ಯಾಕ್ಟಿಕಲ್ ಆಗಿ ವರ್ಕೌಟ್ ಆಗುತ್ತಾ ಇಲ್ಲವಾ ಎಂಬುದನ್ನು ಡ್ರೋನ್ ಪ್ರತಾಪ್ ತೋರಿಸಿಲ್ಲ. ಕೇವಲ ತಾನು ಕಂಪ್ಯೂಟರ್ ನಲ್ಲಿ ಸಾಫ್ಟ್ ವೇರ್ ಲೋಡ್ ಆಗುತ್ತಿರುವ ಫೋಟೋ ಅಷ್ಟೆ ತೋರಿಸಿದ್ದಾರೆ.. ಟ್ರೂಮನ್ ಪಥ ಪೌರ ಇವನ್ನು ಅವಿಷ್ಕಾರಕ್ಕೆ ಹಲವರು ಖುಷಿ ವ್ಯಕ್ತಪಡಿಸಿದರೆ.. ಇನ್ನೂ ಹಲವರು ಟೀಕೆ ಮಾಡಲು ಮುಂದುವರಿಸಿದ್ದಾರೆ..

ಈ ಅವತಾರವನ್ನು ಕಂಡ ನೆಟ್ಟಿಗರು ಕಾಮೆಂಟ್ಸ್ ಗಳ ಮೂಲಕ ಕಾಲೆಳೆದಿದ್ದಾರೆ. ‘ಈ ಬಾರಿ ರಾಕೆಟ್ ಹಾರಿಸ್ತೀರಾ? ಅಣ್ಣಾ’, ‘ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ?’, ‘ಅಣ್ಣ ನನ್ನ ಇಯರ್ ಫೋನ್ ನ ಒಂದು ಬದಿಯಲ್ಲಿ ಕೇಳುತ್ತಿಲ್ಲ. ರಿಪೇರಿ ಮಾಡಿಕೊಡಿ’, ‘ಶೋಲ್ಡ್ರಿಂಗ್ ಮಾಡೋಕೆ ಈ ರೀತಿಯ ಬಿಲ್ಡಪ್ ಬೇಕಾ?’, ‘ಅಣ್ಣನ ಮರು ವಿಶ್ವರೂಪ’, ‘ಬ್ರೊ ತುರ್ತಾಗಿ ಶಿವಮೊಗ್ಗದಿಂದ ವಿಜಯಪುರಕ್ಕೆ ಬಂದು ಬಾಟಲ್ ರಕ್ತ ಬೇಕಾಗಿತ್ತು. 10 ನಿಮಿಷದಲ್ಲಿ ಕಳುಹಿಸಬೇಕಾಗಿದೆ. ನಿಮ್ಮ ಡ್ರೋನ್ ಅನ್ನು ಕಳುಹಿಸಿದರೆ ನಮಗೆ ಸಹಾಯವಾಗುತ್ತೆ’, ‘ಅಣ್ಣ ಅವರು ಯೂಟ್ಯೂಬ್ ನೋಡಿಕೊಂಡು ಡ್ರೋನ್ ರೆಡಿ ಮಾಡುತ್ತಿದ್ದಾರೆ. ಅವನು ಸಿಗ್ನಲ್ ಕೊಟ್ಟಿದ್ದಾನೆ ಎಂದರೆ ದೊಡ್ಡದಾಗಿ ಏನೋ ನಡೆಯುತ್ತಿದೆ’ ಎಂದು ಕೆಜಿಎಫ್ ಸ್ಟೈಲ್ ನಲ್ಲಿ, ಹೀಗೆ ನಾನಾ ವಿಧದ ಕಾಮೆಂಟ್ಸ್ಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಒಮ್ಮೆ ಕಾಗೆ ಹಾರಿಸಿದವ ಇನ್ನೊಮ್ಮೆ ಪ್ರಚಾರವಾಗುತ್ತಿದ್ದಾನೆ.

Leave a Comment

error: Content is protected !!