LPG: ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಎಷ್ಟಾಗಿದೆ ಗೊತ್ತಾ?
LPG ಇತ್ತೀಚಿನ ದಿನಗಳಲ್ಲಿ ಗ್ರಹ ಬಳಕೆಯ ಸಾಮಾನುಗಳು ಹಾಗೂ ವಸ್ತುಗಳು ಬೆಲೆಯನ್ನು ಏರಿಕೆ ಕಾಣುತ್ತಿರುವುದು ನಿಮಗೆ ಗಣನೀಯವಾಗಿ ಕಾಣುತ್ತಿದೆ. ಲಾಕ್ಡೌನ್(Lockdown) ಪರಿಣಾಮವಾಗಿ ಈ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿರುವ ಪರಿಸ್ಥಿತಿಗೆ ಬಂದಿರುವುದು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.
ಈಗ ಮತ್ತೆ ಗ್ರಹ ಅಡುಗೆ ಅನಿಲ(Gas cylinder) ಬೆಲೆ ರೂ.50 ಹೆಚ್ಚಳವನ್ನು ಕಂಡಿದೆ ಎಂಬುದಾಗಿ ತಿಳಿದು ಬಂದಿದ್ದು 14.2 ಕೆಜಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳ ಕಂಡು ಬಂದಿದೆ. ಈ ಹೊಸ ದರ ಇಂದಿನಿಂದಲೇ ಅಂದರೆ ಮಾರ್ಚ್ ಒಂದರಿಂದಲೇ ಜಾರಿಗೆ ಬರಲಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆ 2022ರ ಜುಲೈ 6ರ ನಂತರ ಮೊದಲ ಬಾರಿಗೆ 50 ರೂಪಾಯಿ ಏರಿಕೆ ಕಂಡಿದೆ.

ಇನ್ನು ವಾಣಿಜ್ಯ ಸಿಲಿಂಡರ್(Commercial Cylinder) ಬೆಲೆ ಮಾರ್ಚ್ 1 ರಿಂದ 350 ರೂಪಾಯಿ ಹೆಚ್ಚಳವನ್ನು ಕಂಡಿದ್ದು, ರಾಷ್ಟ ರಾಜಧಾನಿಯಲ್ಲಿ 1769 ಇದ್ದ ವಾಣಿಜ್ಯ ಅಡುಗೆ ಅನಿಲ 2119.5 ಆಗಿದೆ. ಕೊಲ್ಕತ್ತಾ ದಲ್ಲಿ 1870ರಿಂದ 2221.5 ಹಾಗೂ ಚೆನ್ನೈ(Chennai) ನಲ್ಲಿ 1917ರಿಂದ 2268 ರೂಪಾಯಿ ಆಗಿದೆ. ಇನ್ನು ಗೃಳಬಳಕೆಯ ಇಂದಿನ ಬೆಲೆ ರಾಷ್ಟ್ರದ ಬೇರೆ ಬೇರೆ ಸ್ಥಳಗಳಲ್ಲಿ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Dehli) 1053 ರೂಪಾಯಿಯಿಂದ 1103 ರೂಪಾಯಿ, ಮುಂಬೈನಲ್ಲಿ(Mumbai) 1052.5 ರಿಂದ 1102.ರೂಪಾಯಿಗೆ, ಕೊಲ್ಕತ್ತಾ(Kolkata) ದಲ್ಲಿ 1079 ರಿಂದ 1129 ರೂಪಾಯಿ ಹಾಗೂ ದಕ್ಷಿಣದ ಚೆನ್ನೈ ನಲ್ಲಿ 1068.5 ರಿಂದ 1118.5 ಬೆಲೆ ಏರಿಕೆ ಕಂಡಿವೆ. ಅಡುಗೆ ಅನಿಲಗಳ ಮೇಲಿನ ಈ ಬೆಲೆ ಏರಿಕೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಮಾಡೋ ಮೂಲಕ ಹಂಚಿಕೊಳ್ಳಿ.