ಲೇಬರ್ ಕಾರ್ಡ್ ಇದ್ರೆ ನಿಮ್ಮ ಮಕ್ಕಳಿಗೆ ಸಿಗತ್ತೆ ಉಚಿತ ಲ್ಯಾಪ್ ಟಾಪ್, ಅರ್ಜಿ ಹಾಕೋದು ಹೇಗೆ ಇಲ್ಲಿದೆ ಮಾಹಿತಿ

ಇತ್ತೀಚೆಗೆ ನಮ್ಮ ರಾಜ್ಯದ ಕರ್ನಾಟಕ ರಾಜ್ಯ ಸರಕಾರವು ಕಾರ್ಮಿಕರ ಹಾಗೂ ಇತರೆ ವರ್ಗದವರು, ಕೂಲಿ ಕಾರ್ಮಿಕರ ಬಗ್ಗೆ ತುಂಬಾನೇ ಮಹತ್ವ ನೀಡಿದೆ ಹಾಗೂ ಇವರಿಗೆ ಅಂತಾನೆ ಹಲವಾರು ಯೋಜನೆಯನ್ನು ತಮ್ಮ ಬಜೆಟ್ ಅಲ್ಲಿ ಮಂಡನೆ ಮಾಡಿದ್ದಾರೆ. ದಿನಗೂಲಿ ಕಾರ್ಮಿಕರು ತನ್ನ ದೈನಂದಿನ ಕೂಲಿ ಮೊತ್ತವನ್ನು ಅವರವರ ಖಾತೆಗೆ ಜಮಾ ಮಾಡುವುದು ಹಾಗೂ ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗೆ ತಿಂಗಳಿಗೆ ಇಂತಿಷ್ಟು ಅಂತ ಹಣವನ್ನು ಪಿಂಚಣಿ ರೂಪದಲ್ಲಿ ಅವರ ಖಾತೆಗೆ ಜಮಾ ಮಾಡುವ ಜವಾಬ್ದಾರಿ ಅನ್ನು ಹೊಂದಿದೆ.

ಕಟ್ಟಡ ಹಾಗೂ ಇತರೆ ಕಾರ್ಮಿಕರು ಸರಕಾರಕ್ಕೆ ತಾವು ಯಾವ ಕೆಲಸವನ್ನೂ ಮಾಡುತ್ತಾ ಇದೀವಿ ಎನ್ನುವುದರ ಬಗ್ಗೆ ಕೂಲಂಕುಷವಾಗಿ ಮಾಹಿತಿಯನ್ನು ನಿಮ್ಮ ವಿ1 ನಮೂನೆ ಅಲ್ಲಿ ಮಂಡನೆ ಮಾಡಿ ನಿಮ್ಮ ಕಾರ್ಮಿಕ ಕೆಲಸಕ್ಕೆ ಸಂಬಂಧಪಟ್ಟ ಸಂಸ್ಥೆ ಅವರು ನೀಡುವ ಉದ್ಯೋಗ ದೃಢೀಕರಣ ಪತ್ರ ಜೊತೆ ನಿಮ್ಮ ಆಧಾರ್ ಕಾರ್ಡ್, ನಿಮ್ಮ ವಯಸ್ಸಿನ ದೃಢೀಕರಣ ಪತ್ರ, ವಾಹನ ಚಾಲನೆ ಪರವಾನಗಿ , ಎಲ್ ಐ ಸಿ ಪ್ರತಿ ಹಾಗೂ ನಿಮ್ಮ ಸ್ಥಳೀಯ ಆಸ್ಪತ್ರೆ ಅಲ್ಲಿ ನೀಡುವ ನಿಮ್ಮ ಜನನ / ಮರಣದ ದೃಢೀಕರಣ ಪತ್ರ ,ನಿಮ್ಮ ವಿದ್ಯಾರ್ಹತೆ ಮಾಹಿತಿ ಹಾಗೂ ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಅನ್ನು ಕಾರ್ಮಿಕ ಅಧಿಕಾರಿಗಳು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮುಖ್ಯ ಅಭಿಯಂತರರು ಇಲ್ಲಿಗೆ ಸಲ್ಲಿಸಬೇಕು.

ಇದರ ಫಲಾನುಭವಿಗಳಿಗೆ‌ ಕಟ್ಟಡ ನಿರ್ಮಾಣದ ಸಮಯದಲ್ಲಿ ಮರಣ ಹೊಂದಿದ ವೇಳೆ ಅಥವಾ ಪಾರ್ಶ್ವ ಅಂಗವೈಕಲ್ಯ ಹೊಂದಿದರೆ ಸರಕಾರವು ಪಿಂಚಣಿ ಅನ್ನು ನೀಡುವುದು ಹಾಗೂ ಕೆಲವೊಬ್ಬರಿಗೆ ವಸತಿ ಭಾಗ್ಯ ಕೂಡ ನೀಡುವುದು. ಮಹಿಳೆಯರಿಗೆ ಲಕ್ಷ್ಮಿ ಬಾಂಡ್ ಅನ್ನು ಒದಗಿಸಿ ಮೊದಲ ಎರಡು ಹೆಣ್ಣು ಮಕ್ಕಳಿಗೆ ತಲಾ ಮೂವತ್ತು ಸಾವಿರ ರೂಪಾಯಿ ಹಾಗೂ ಗಂಡು ಮಗುವಿನ ಜನನವಾದ ಇಪ್ಪತ್ತು ಸಾವಿರ ರೂಪಾಯಿ ನೀಡಿ ಅವರಿಗೆ ಸಹಾಯ ಧನವನ್ನು ನೀಡುವುದು. ಪಲಾನುಭವಿಗಳು ಮರಣ ಹೊಂದಿದ ಸಂದರ್ಭ ಅಲ್ಲಿ ಅವರ ಅಂತ್ಯಕ್ರಿಯೆಗೆ 4000 ಹಾಗೂ 50000 ಸಹಾಯ ಧನ ಎಂದು ನೀಡಲಾಗುವುದು .

ಇನ್ನು ಕಾರ್ಮಿಕರು ತಮ್ಮ ಮಕ್ಕಳಿಗೆ ಸಾಧಾರಣವಾಗಿ ಯಾರು ಅವರಿಗೆ ವಿದ್ಯೆ ನೀಡಿ ಅವರನ್ನು ಪ್ರಬುದ್ಧ ಪ್ರಜೆಯಾಗಿ ಮಾಡಲು ಆಸಕ್ತಿಯನ್ನು ಹೊಂದಿರುತ್ತಾರೆ ಅಂಥವರಿಗೆ ಅಂತಾನೆ ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸ್ಕಾಲರ್ಶಿಪ್ ನೀಡಿ ಅವರಿಗೆ ಮುಂದೆ ಓದಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಂದು ಹಂತದಲ್ಲಿ ಇಂತಿಷ್ಟು ಹಣವನ್ನು ವಿದ್ಯಾರ್ಥಿಗಳು ನೀಡಿ ಹಾಗೂ ಅವರ ಅಂಕ ಶೇಕಡಾವಾರು ಪ್ರಮಾಣ ಅನ್ನು ಕೂಡ ನೋಡಿ ಹಣವನ್ನು ನೀಡಲು ಸರಕಾರ ಮುಂದಾಗಿದೆ. ಒಂದನೇ ತರಗತಿಯಿಂದ ಹಿಡಿದು ಪದವಿಯನ್ನು ಕಲಿಯುವ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆಯಬಹುದು ಹಾಗೂ ಸರಕಾರಿ ಬಸ್ ಪಾಸ್ ಅನ್ನು ಕೂಡ ಉಚಿತವಾಗಿ ನೀಡಲಾಗುವುದು.

ಅಡುಗೆ ಅನಿಲದ ಪೂರೈಕೆ ಸಹಾಯ, ಧನ ಸಹಾಯ ಕೂಡ ಇದೆ. ಅಪಘಾತ ವಿಮೆ ಇನ್ನು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಅಸಹಾಯಕರು ಇದ್ರೆ ಅಂಥವರಿಗೆ ಇಬ್ಬರು ಹೆಣ್ಣು ಮಕ್ಕಳಿಗೆ ಸರಕಾರವು 50000 ಹಣವನ್ನು ನೀಡಿ ಸಹಾಯ ಮಾಡುತ್ತದೆ. ಇನ್ನು ಮಹಿಳಾ ಪಾಲನುಭವಿಗೆ ಮಗುವಿನ ಜನನವಾದ ಬಳಿಕ ಅದ ಮಗುವಿನ ಶಾಲಾ ಪೂರ್ವ ಶಿಕ್ಷಣ ಹಾಗೂ ಪೌಷ್ಠಿಕತೆಗಾಗಿ  ಆ ಮಗುವಿಗೆ ಮೂರು ವರ್ಷ ತುಂಬುವ ವರೆಗೂ 6000 ರೂಪಾಯಿ ಹಣವನ್ನು ನೀಡಲು ಸರಕಾರ ಮುಂದಾಗಿದೆ.

ಇತ್ತೀಚಿಗೆ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿದ್ಯೆ ಕಲಿಯುತ್ತಿರುವ ಪ್ರತಿಭಾವಂತ ಕಾರ್ಮಿಕ ವರ್ಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಅಂತಾನೆ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಅದುವೇ ಕಲಿಕಾ ಕಿಟ್ ಎಂದು ಹೆಸರಿಸಿದ್ದು ಹೈ ಟೆಕ್ ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇದು ಉಪಯೋಗ ಇದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲಾಪ್ ಟಾಪ್ ಹಾಗೂ ಟ್ಯಾಬ್ ಅನ್ನು ನೀಡುವ ಬಗ್ಗೆ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ ಇದನ್ನು ಪಡೆಯಲು ಅವರ ಬಳಿ ಕಡ್ಡಾಯವಾಗಿ ಲೇಬರ್ ಕಾರ್ಡ್ ಇರಲೇಬೇಕು ಆದರೆ ಇದು ಇತ್ತೀಚೆಗೆ ಹೊಸದಾಗಿ ಸೇರ್ಪಡೆ ಆದ ಕಾರಣ ಅದರ ಬಗ್ಗೆ ಯಾವ ವೆಬ್ಸೈಟ್ ಅಲ್ಲಿ ಅರ್ಜಿಯನ್ನು ಹಾಕಬೇಕು ಯಾರೆಲ್ಲ ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರುವುದು.

Leave a Comment

error: Content is protected !!