Loan Recovery Agents: ಸಾಲ ತೀರಿಸಿಲ್ಲ ಅಂತ ಏಜೆಂಟ್ ಗಳು ತೊಂದ್ರೆ ಕೊಡುತ್ತಿದ್ದಾರಾ? ಈ ಕಾನೂನು ಸಲಹೆ ನಿಮಗೆ ಗೊತ್ತಿರಲಿ

Loan Recovery Agents: ಕಷ್ಟ ಬಂದಾಗ ಅಥವಾ ಹಣಕಾಸಿನ ತೊಂದರೆ ಎದುರಾದಾಗ ವ್ಯಕ್ತಿಯು ಸಾಲಕ್ಕಾಗಿ ಬ್ಯಾಂಕ್ ನ ಮೊರೆ ಹೋಗುತ್ತಾನೆ ಏಕೆಂದರೆ ಬ್ಯಾಂಕ್ ಗಳು ನಮಗೆ ಅಗತ್ಯವಿರುವ ಹಣವನ್ನು ಸಾಲದ ರೂಪದಲ್ಲಿ ಪೂರೈಕೆ ಮಾಡುತ್ತವೆ ಆದ್ದರಿಂದ ತಕ್ಷಣ ಹಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕ್ ನ ಮೊರೆ ಹೋಗುತ್ತಾನೆ ಆದರೆ ಗ್ರಾಹಕರು ಕೆಲವೊಂದು ಸಂದರ್ಭದಲ್ಲಿ ಲೋನ್ ನನ್ನ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಹಾಗಿದ್ದಾಗ ಬ್ಯಾಂಕುಗಳು ಅವರ ರಿಕವರಿ ಏಜೆಂಟ್ಗಳನ್ನು (Loan Recovery Agents) ಕಳುಹಿಸಿ ಲೋನ್ ಕೊಡುವಂತೆ ಒತ್ತಾಯ ಮಾಡುತ್ತಾರೆ ಹೇಗಾದರೂ ಮಾಡಿ ಲೋನ್ ನನ್ನು ವಸೂಲಿ ಮಾಡಬೇಕು ಎಂದು ಗ್ರಾಹಕರಿಗೆ ತೊಂದರೆಯನ್ನು ಕೊಡುತ್ತಾರೆ ತಮಗೆ ಬೇಕಾದ ರೀತಿಯಲ್ಲಿ ವರ್ತಿಸಿ ಹಣವನ್ನು ಮರುಪಾವತಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

Loan Recovery Agents

ಹೀಗೆ ಒತ್ತಾಯಪೂರ್ವಕವಾಗಿ ತೊಂದರೆಯನ್ನು ನೀಡಿ ಹಣವನ್ನು ವಸೂಲಿ ಮಾಡಿ ಮಾಡುವುದು ಕಾನೂನಿಗೆ ವಿರುದ್ಧವಾದ ಕಾರ್ಯ ನಿಮಗೆ ಏನಾದರೂ ಇಂತಹ ತೊಂದರೆಗಳು ಎದುರಾದಲ್ಲಿ ಕಾನೂನಿನಲ್ಲಿ ಇದರ ಬಗ್ಗೆ ದೂರು ನೀಡಬಹುದು ಇದಕ್ಕಾಗಿ ಆರ್ಬಿಐ ಒಂದು ರೂಲ್ಸ್ (RBI Rules) ಜಾರಿಗೆ ತಂದಿದೆ ಆ ರೂಲ್ಸ್ ನಲ್ಲಿರುವ ಮುಖ್ಯ ಅಂಶಗಳು ಯಾವುವು ಎಂದರೆ.

ಸಾಲ ಹಿಂಪಡೆಯಲು ಬರುವ ರಿಕವರಿ ಏಜೆಂಟ್ ಗಳು ಬೆಳಿಗ್ಗೆ 7ರಿಂದ ಸಂಜೆ ಎಂಟು ಗಂಟೆ ಸಮಯದ ಒಳಗೆ ಬಂದು ಈ ವಿಷಯದ ಬಗ್ಗೆ ಪ್ರಸ್ತಾಪಿಸಬೇಕು. ಏಜೆಂಟ್ಗಳು ಸಾಲಗಾರರಿಗೆ ಬಯ್ಯುವುದು ದೈಹಿಕವಾಗಿ ಅಥವಾ ಮಾನಸಿಕವಾಗಿ ಹಲ್ಲೆ ಮಾಡುವುದು ತಪ್ಪು ಒಂದು ವೇಳೆ ಹೀಗೆ ನಡೆದರೆ ಗ್ರಾಹಕರು ಕೂಡಲೇ ದೂರನ್ನು ದಾಖಲಿಸಬಹುದು. ಏಜೆಂಟ್ ಗಳಿಂದ ಬರುವ ಕಾಲ್ ಇ-ಮೇಲ್ ಅಥವಾ ಮೆಸೇಜ್ಗಳಲ್ಲಿ ಅಸಭ್ಯವಾಗಿ ವರ್ತಿಸಿದರೆ ಇವುಗಳ ದಾಖಲೆಯನ್ನು ನೀಡಿ ಸಹ ಸಾಲಗಾರ ದೂರು ನೀಡಬಹುದು.

ATM Rules: ಬದಲಾಗಲಿದೆ ATM ನ ಹೊಸ ನಿಯಮಗಳು. ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸಲೇಬೇಕು ಇಲ್ಲದಿದ್ದಲ್ಲಿ ತೆರಿಗೆ ಪಾವತಿ ಮಾಡಬೇಕು.

ಬ್ಯಾಂಕಿನಲ್ಲಿ ದೂರು ನೀಡಲು ಆಗದಿದ್ದರೆ ಪೊಲೀಸರ ಬಳಿ ಇದರ ಬಗ್ಗೆ ದೂರು ನೀಡಬಹುದು ಅಕಸ್ಮಾತ್ ಪೊಲೀಸರು ಕೂಡ ಇದಕ್ಕೆ ಸ್ಪಂದಿಸದೆ ಇದ್ದರೆ ಕೋರ್ಟ್ ಗಳ ಮೊರೆ ಹೋಗಲು ಅವಕಾಶವಿದೆ ಅಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಿ ತನಗಾದ ತೊಂದರೆಗಳನ್ನ ಸರಿಪಡಿಸಿಕೊಳ್ಳಬಹುದು. ಒಂದು ವೇಳೆ ರಿಕವರಿ ಏಜೆಂಟ್ ಸಾಲಗಾರನ ಗೌರವ ಪ್ರತಿಷ್ಠೆಗೆ ಧಕ್ಕೆಯಾದರೆ ಆತನ ವಿರುದ್ಧ ಹಾಗೂ ಬ್ಯಾಂಕ್ ನ ವಿರುದ್ಧ ಮಾನ ನಷ್ಟ (Defamation suit) ಮುಖದಮೆಯನ್ನು ಕೊಡಬಹುದು.

ಇಷ್ಟನ್ನು ಹೊರತುಪಡಿಸಿ ಆರ್‌ಬಿಐಗೂ ಸಹ ನೇರವಾಗಿ ದೂರು ನೀಡಬಹುದು ಇದಕ್ಕೆ ಪರಿಹಾರವಾಗಿ ಆರ್ ಬಿ ಐ ಆ ಸಮಯಕ್ಕೆ ಅಂತಹ ಪ್ರದೇಶಗಳಿಗೆ ರಿಕವರಿ ಏಜೆಂಟ್ ಗಳನ್ನು ನೇಮಕ ಮಾಡದ ಹಾಗೆ ತಡೆಯುತ್ತದೆ.

ಆದ್ದರಿಂದ ಪ್ರತಿಯೊಂದು ಬ್ಯಾಂಕ್ (Bank) ಕೂಡ ತಮ್ಮ ರಿಕವರಿ ಸಮಯದಲ್ಲಿ ಇಂತಹ ಕೆಲವೊಂದು ನಿಯಮಗಳನ್ನ ಪಾಲಿಸಬೇಕಾಗುತ್ತದೆ ದೇಶದ ಪ್ರತಿಯೊಂದು ಬ್ಯಾಂಕಿಗೂ ಸೆಂಟ್ರಲ್ ಬ್ಯಾಂಕ್ ಆಗಿರುವಂತಹ ಆರ್‌ಬಿಐನ ಗೈಡ್ಲೈನ್ಸ್ (RBI Guidelines) ಅನ್ವಯವಾಗುತ್ತದೆ.

ಇದನ್ನೂ ಓದಿ..Pan Card: ನಿಮ್ಮತ್ರ ಪಾನ್ ಕಾರ್ಡ್ ಇದ್ರೆ ಉಚಿತವಾಗಿ 50 ಸಾವಿರ ಸಿಗುತ್ತೆ. ಹೇಗೆ ಗೊತ್ತಾ ಇಲ್ಲಿದೆ ನೋಡಿ.

Leave a Comment

error: Content is protected !!