Griha Lakshmi Yojana: ಸರ್ಕಾರ ಮಹಿಳೆಯರಿಗೆ 2000 ರೂಪಾಯಿ ನೀಡುತ್ತಿದ್ದು, ಈ ಸೌಲಭ್ಯವನ್ನು ಪಡೆದುಕೊಳ್ಳಲು ಏನೆಲ್ಲಾ ದಾಖಲೆಬೇಕು? ಇಲ್ಲಿದೆ ಮಾಹಿತಿ

Griha Lakshmi Yojana: ಕರ್ನಾಟಕ ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದೀಗ ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಗ್ಯಾರಂಟಿ ಕುರಿತು ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ನ 5ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆಯನ್ನು ರಾಜ್ಯದ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.

Griha Lakshmi Yojana In Karnataka

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ, ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಂದರೆ, ಕಾಂಗ್ರೆಸ್ ಸರ್ಕಾರ ರಚನೆಯಾದರೆ ರಾಜ್ಯದ ಪ್ರತಿಯೊಬ್ಬ ಗೃಹಿಣಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವುದಾಗಿ ಹೇಳಿತ್ತು

ATM Rules: ಬದಲಾಗಲಿದೆ ATM ನ ಹೊಸ ನಿಯಮಗಳು. ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸಲೇಬೇಕು ಇಲ್ಲದಿದ್ದಲ್ಲಿ ತೆರಿಗೆ ಪಾವತಿ ಮಾಡಬೇಕು.

ರಾಜ್ಯದಲ್ಲಿ 5 ವರ್ಷಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು, ಆ ಯೋಜನೆಗಳು ಕೂಡ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿತು ಆದ್ರೆ ನಂತರ ಬಂದ BJP ಸರ್ಕಾರ ಕೆಲವು ಯೋಜನೆಗಳನ್ನು ಕೈಬಿಟ್ಟಿದ್ದು ಜನ ಸಾಮಾನ್ಯರಿಗೆ ತೊಂದರೆ ಉಂಟಾಗಿದಂತೂ ನಿಜ. ಇದೀಗ ಮತ್ತೆ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಹಲವು ಯೋಜನೆಗಳನ್ನು ತರಲು ಮುಂದಾಗಿದ್ದು ಅವುಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿದೆ.

ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರು ಹಣ ಹೇಗೆ ಪಡೆಯುತ್ತಾರೆ?
ಮೊದಲನೆಯದಾಗಿ ಮನೆಯ ಹೆಣ್ಣಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುವುದು. ಕರ್ನಾಟಕ ಸರ್ಕಾರವು ಈ ಹಣವನ್ನು ನೇರವಾಗಿ ಕುಟುಂಬದ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸುತ್ತದೆ.

ಗೃಹ ಲಕ್ಷ್ಮಿ ಯೋಜನೆಯಡಿ ಬರುವಂತ ಈ ಹಣದಿಂದ ಮಹಿಳೆಯರಿಗೆ ಗೃಹಬಳಕೆಯ ಅಗತ್ಯ ವಸ್ತುಗಳ ಬೆಲೆ ಮತ್ತು ಎಲ್‌ಪಿಜಿಯಂತಹ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ರಾಜ್ಯದ 1.5 ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ.

Pan Card: ನಿಮ್ಮತ್ರ ಪಾನ್ ಕಾರ್ಡ್ ಇದ್ರೆ ಉಚಿತವಾಗಿ 50 ಸಾವಿರ ಸಿಗುತ್ತೆ. ಹೇಗೆ ಗೊತ್ತಾ ಇಲ್ಲಿದೆ ನೋಡಿ.

ಗೃಹ ಲಕ್ಷ್ಮಿ ಯೋಜನೆಯಡಿ ಯಾರೆಲ್ಲ ಹಣ ಪಡೆಯಬಹುದು?
ಪ್ರತಿ ಕುಟುಂಬಕ್ಕೆ ಒಬ್ಬ ಮಹಿಳೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಯೋಜನೆಗೆ ಅರ್ಹರಾಗಲು, ಅರ್ಜಿದಾರರು ಮನೆಯ ಮುಖ್ಯಸ್ಥರಾಗಿರಬೇಕು.
ಯೋಜನೆಗೆ ಅರ್ಹರಾಗಲು ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
ಗೃಹ ಲಕ್ಷ್ಮಿ ಯೋಜನೆಗೆ ಅಗತ್ಯವಿರುವ ದಾಖಲೆಗಳು

ಈ ಯೋಜನೆ ಪಡೆಯಲು ಯಾವೆಲ್ಲ ದಾಖಲೇಬೇಕು?
ಆಧಾರ್ ಕಾರ್ಡ್,
ಮತದಾರರ ಗುರುತಿನ ಚೀಟಿ,
ಡ್ರೈವಿಂಗ್ ಲೈಸೆನ್ಸ್
ಅಥವಾ ಸರ್ಕಾರದಿಂದ ನೀಡಲಾದ ಯಾವುದೇ ಐಡಿ ಕಾರ್ಡ್ ಫಲಾನುಭವಿಯ ಬಳಿ ಇರಬೇಕು.

ವಾಸಸ್ಥಳದ ದಾಖಲಾತಿಗಳು ಯಾವೆಲ್ಲ ಇರಬೇಕು?
ಪಡಿತರ ಚೀಟಿ,
ವಿದ್ಯುತ್ ಬಿಲ್
ನೀರಿನ ಬಿಲ್
ಅಥವಾ ಸರ್ಕಾರದಿಂದ ನೀಡಲಾದ ಯಾವುದೇ ವಿಳಾಸ ಪುರಾವೆಗಳು ಫಲಾನುಭವಿಯ ಬಳಿ ಇರಬೇಕು.ಬ್ಯಾಂಕ್ ಪಾಸ್ ಬುಕ್ ನಕಲು, ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಮತ್ತು ಪಾಸ್‌ಬುಕ್ ನಕಲು.

ಇದನ್ನೂ ಓದಿ..Chanakya Neethi: ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ಆಂಟಿಯರನ್ನು ಕಂಡು ಯುವಕರು ಆಕರ್ಷಿತರಾಗುವುದೇಕೆ ಗೊತ್ತಾ?

Leave a Comment

error: Content is protected !!