Electrical Vehicle: ಉಚಿತ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸೌಲಭ್ಯ ಇಂದೇ ಅರ್ಜಿ ಸಲ್ಲಿಸಿ.

Electrical Vehicle ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ(Karnataka Rajya Safayi) ನಿಗಮದಿಂದ ಈ ವರ್ಷ ಪರಿಶಿಷ್ಟ ಜಾತಿ ವರ್ಗದಿಂದ ಬರುವಂತಹ ಜನರಿಗೆ ವಿದ್ಯುತ್ ಚಾಲಿತ ಹಾಗೂ ಇತರೆ ದ್ವಿಚಕ್ರ ವಾಹನಗಳನ್ನು ನೀಡುವಂತಹ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯ ಲಾಭವನ್ನು ಪಡೆಯಲು ನಿಮಗಿರುವ ಅರ್ಹತೆಗಳನ್ನು ಹಾಗೂ ಇನ್ನಿತರ ವಿವರಗಳನ್ನು ಸಂಪೂರ್ಣ ಹಾಗೂ ಸಮಗ್ರವಾಗಿ ಪರಿಶೀಲಿಸೋಣ ಬನ್ನಿ.

ಮೊದಲಿಗೆ ಯಾವುದೇ ನಿಗಮದಿಂದ ಸಾಲವನ್ನು ಪಡೆದಿರಬಾರದು. ವಯೋ ಅರ್ಹತೆಯನ್ನು ನೋಡುವುದಾದರೆ 21ರಿಂದ 50 ವರ್ಷದವರೆಗೆ ಇರುವಂತಹ ಯಾರ ಬೇಕಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಬಳಿ ವಾಹನದ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಅರ್ಜಿಯನ್ನು ಚಾಮರಾಜನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್(Br Ambedkar) ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ನಾಳೆ ಸಂಜೆ ಅಂದರೆ ಮಾರ್ಚ್ 4ರ 5 ರ ಒಳಗೆ ನೀಡಬೇಕು.

ಇದರ ಹೆಚ್ಚಿನ ಮಾಹಿತಿಯ ವಿಚಾರಣೆಗಾಗಿ ನೀವು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ ಆಗಿರುವ 08226-224133 ಗೆ ಕರೆ ಮಾಡಿ ಹೆಚ್ಚಿನ ಹಾಗೂ ಪರಿಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಂತರವೇ ಈ ಕುರಿತಂತೆ ಮುಂದುವರೆಯುವುದು ಒಳ್ಳೆಯದು.

ಇನ್ನು ಇದನ್ನು ಪಡೆಯಲು ಅರ್ಹರಾಗಿರುವ ಉದ್ಯೋಗಿಗಳು ಯಾರೆಂದರೆ ಪೌರಕಾರ್ಮಿಕರು, ಶುಚಿ ಮಾಡುವಂತಹ ಕರ್ಮಚಾರಿಗಳು ಹಾಗೂ ಮ್ಯಾನುವಲ್ ಸ್ಕಾವೆಂಜರ್(Manual Scavenger) ಗಳು ಹಾಗೂ ಅವರಿಗೆ ಸಂಬಂಧಪಟ್ಟಂತಹ ವೃತ್ತಿಯನ್ನು ನಿರ್ವಹಿಸುತ್ತಿರುವವರಿಗೆ ಈ ಯೋಜನೆ ಲಗತ್ತಾಗಿದೆ ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕಾಗಿದ್ದು ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಡುತ್ತಿರುವವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಭಾವಿಸುತ್ತೇವೆ.

Leave A Reply

Your email address will not be published.