ಜಾಸ್ತಿ ಕರೆನ್ಸಿ ನೋಟ್ ಪ್ರಿಂಟ್ ಮಾಡುವುದಿಲ್ಲ ಯಾಕೆ ಗೊತ್ತಾ? ಇದರ ಹಿಂದಿದೆ ಎಲ್ಲರೂ ತಿಳಿಯಬೇಕಾಗಿರುವ ರಹಸ್ಯ.

Currency Note ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2016ರಲ್ಲಿ ಹಳೆಯ 500 ಹಾಗೂ ಸಾವಿರ ರೂಪಾಯಿಗಳ ನೋಟುಗಳನ್ನು ನಮ್ಮ ಭಾರತ ಸರ್ಕಾರ ನಿಷೇಧ ಗೊಳಿಸಿ ಹೊಸ ಐನೂರು ಹಾಗೂ 2 ಸಾವಿರ ರೂಪಾಯಿಗಳ(2000 Rupess Note) ನೋಟುಗಳನ್ನು ಜಾರಿಗೆ ತಂದಿತು. ಈಗಲೂ ಕೂಡ ಜನರಲ್ಲಿ ಅದೇ ನೋಟ ಚಲಾವಣೆ ಆಗುತ್ತಿದ್ದು ಆರಂಭದಲ್ಲಿ ಕಷ್ಟವಾದರೂ ಈಗ ಜನರು ಅದಕ್ಕೆ ಹೊಂದಿಕೊಂಡಿದ್ದಾರೆ ಎಂಬುದು ಎಂಬ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಆದರೆ ನಿಮಗೆಲ್ಲರಿಗೂ ಒಂದು ಯೋಚನೆ ಬಂದಿರಬಹುದು ಒಂದು ವೇಳೆ ನಮ್ಮ ದೇಶದಲ್ಲಿ ಬಡವರಿಗೆ ಹೆಚ್ಚೆಚ್ಚು ಹಣವನ್ನು ಪ್ರಿಂಟ್ ಮಾಡಿ ನೀಡಿದಾಗ ಎಲ್ಲರಲ್ಲೂ ಕೂಡ ಬಡತನ ನಿರ್ಮೂಲನೆ ಯಾಗುತ್ತದೆ ಹಾಗೂ ಎಲ್ಲರೂ ಕೂಡ ಸಿರಿವಂತರಾಗುತ್ತಾರೆ ಎಂಬುದಾಗಿ ನೀವು ಕನಸಿನಲ್ಲಾದರೂ ಕೂಡ ಒಮ್ಮೆಯಾದರೂ ಯೋಚಿಸಿರಬಹುದು. ಆದರೆ ಈ ರೀತಿ ಕನಸಿನಲ್ಲಿ ಅಂದುಕೊಂಡ ಹಾಗೆ ಕರೆನ್ಸಿ ನೋಟುಗಳನ್ನು(Currency Notes) ಹೆಚ್ಚೆಚ್ಚು ಪ್ರಿಂಟ್ ಮಾಡೋ ಹಾಗಿಲ್ಲ.

ಹೌದು ಜನರ ಬೇಡಿಕೆ ಎಷ್ಟಿರುತ್ತದೆಯೋ ಅಷ್ಟು ನೋಟುಗಳನ್ನು ಮಾತ್ರ ಪ್ರಿಂಟ್ ಮಾಡಲು ಸಾಧ್ಯ ಅದಕ್ಕಿಂತ ಹೆಚ್ಚಿನ ನೋಟುಗಳನ್ನು ಪ್ರಿಂಟ್ ಮಾಡಿದರೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಣದುಬ್ಬರ(Inflation) ಹೆಚ್ಚಾಗಿ ಹಣದ ಮೌಲ್ಯ ಕಡಿಮೆಯಾಗಿ ಅದರಿಂದ ಖರೀದಿಸುವಂತಹ ಸೇವೆ ಅಥವಾ ಸರಕಿನ ಬೆಲೆ ಹೆಚ್ಚಾಗಿ ಎಲ್ಲಾ ಕಡೆ ಹಣದ ಮೌಲ್ಯ ಪಾತಾಳಕ್ಕೆ ಸೇರುತ್ತದೆ.

ಹೀಗಾಗಿಯೇ ಎಷ್ಟು ಅಗತ್ಯ ಇರುತ್ತದೆಯೋ ಅಷ್ಟು ಹಣವನ್ನು ಮಾತ್ರ ಪ್ರಿಂಟ್ ಮಾಡಲಾಗುತ್ತದೆ ಎಂಬುದಾಗಿ ಅಧಿಕೃತ ಆರ್ಥಿಕ ಮೂಲಗಳು ಹೇಳುತ್ತವೆ. ಈಗಲಾದರೂ ನಿಮಗೆ ಯಾಕೆ ಯಾವುದೇ ಸರ್ಕಾರಗಳು ಕೂಡ ಅಗತ್ಯಕ್ಕೂ ಮೀರಿದ ನೋಟುಗಳನ್ನು ಪ್ರಿಂಟ್ ಮಾಡುವುದಿಲ್ಲ ಎಂಬುದಾಗಿ ತಿಳಿದಿರಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!