ಭಾರತದ ಈ ಮೂರು ಗ್ರಾಮಗಳಲ್ಲಿ ದಸರಾವನ್ನು ಆಚರಿಸುವುದಿಲ್ಲ.ಇದಕ್ಕೆ ಕಾರಣ ಏನು ಗೊತ್ತಾ??

ಕರ್ನಾಟಕದಲ್ಲಿ ನಾಡ ಹಬ್ಬವಾಗಿಯೇ ಆಚರಿಸುವ ದಸರಾ ಸಂಭ್ರಮವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಮೈಸೂರಿಗೆ ಜನ ಹರಿದು ಬರುತ್ತಾರೆ. 9 ದಿನಗಳ ಕಾಲ ನವರೂಪಿ ಮಾತೆಯನ್ನು ಆರಾಧಿಸಿ ಹತ್ತನೇ ದಿನ ವಿಜಯದಶಮಿ ಎಂದು ಆಚರಿಸುತ್ತಾರೆ. ನೀಚ ಬುದ್ಧಿಯ ಎದುರು ಧರ್ಮದ ಗೆಲುವು; ಇದೇ ವಿಜಯದಶಮಿಯ ಸಂಕೇತ.

ದಸರಾ ಆಚರಣೆಯ ಹಿಂದೆ ಅನೇಕ ಕಥೆಗಳಿವೆ. ಜನಪ್ರಿಯವಾದದೆಂದರೆ, ಸದ್ಗುಣಗಳಿಂದ ಶೋಭಿಸುವ ಪ್ರಜಾಪಾಲಕ ರಾಮನು, ಅಹಂಕಾರದ ಒಡೆಯ ರಾವಣನೊಂದಿಗೆ ಹೋರಾಡಿ ಜಯಿಸಿದ ದಿನ. ಪವಿತ್ರಳಾದ ಸೀತೆಯನ್ನು ಮರಳಿ ಕರೆ ತರಲು ರಾಮನು ಹನುಮನ ಮುಂದಾಳತ್ವದ ಕಪಿ ಸೈನ್ಯದೊಂದಿಗೆ ರಣರಂಗದಲ್ಲಿ ರಾವಣನನ್ನು ಕೊಲ್ಲುತ್ತಾನೆ. ಇದರ ನೆನಪಿಗಾಗಿ ವಿಜಯದಶಮಿ ಆಚರಿಸುತ್ತಾರೆ. ದೈತ್ಯಾಕಾರದ ರಾವಣನ ಪ್ರತಿಮೆಯನ್ನು ಮಾಡಿ ಅದನ್ನು ಸುಡುವ ಪದ್ಧತಿ, ಹಲವು ಕಡೆಗಳಲ್ಲಿದೆ. ಕೆಟ್ಟ ಚಾಳಿ ಏನೇ ಇದ್ದರೂ ಅದನ್ನು ಸುಟ್ಟು ಒಳ್ಳೆಯ ಹಾದಿಯಲ್ಲಿಯೇ ನಡೆಯಬೇಕೆಂಬುದು ಇದರ ಅರ್ಥ.

ಆದರೆ ಭಾರತದ ಕೆಲವು ಭಾಗಗಳಲ್ಲಿ ರಾವಣ ದಹನದ ಹೊರತಾಗಿ ಅವನನ್ನೇ ಪೂಜಿಸುವ ಪದ್ಧತಿಯು ಇದೆಯಂತೆ. ಇನ್ನು ಕೆಲವು ಹಳ್ಳಿಗಳಲ್ಲಿ ದಸರಾ ಹಬ್ಬದ ಆಚರಣೆಯನ್ನೇ ನಿರಾಕರಿಸುತ್ತಾರಂತೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಗ್ರಾಮವು ಎಂದಿಗೂ ರಾವಣ ದಹನ ಮಾಡಿಲ್ಲವಂತೆ. ಬಾರಗಾಂವ್ ಗ್ರಾಮದ ನಿವಾಸಿಗಳು ತಮ್ಮ ನಂಬಿಕೆಯ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಏಕೆಂದರೆ ರಾವಣನು ತಪಸ್ಸಿನಿಂದ ಗಳಿಸಿದ ಶಕ್ತಿಯನ್ನು ಇದೇ ಹಳ್ಳಿಯ ರೈತನೊಬ್ಬನಿಗೆ ಹಸ್ತಾಂತರಿಸಿದನು ಎಂಬ ಮಾತಿದೆ. ರಾವಣನು ಶಕ್ತಿಯನ್ನು ಕಳೆದುಕೊಂಡದ್ದು ಇದೇ ಊರಿನಲ್ಲಿ. ಬಾಗ್ಪತ್ ಗ್ರಾಮದ ಪ್ರಸಿದ್ಧ ದೇವಾಲಯದ ಹಿರಿಯ ಅರ್ಚಕರಾದ ಗೌರಿಶಂಕರ್ ಅವರು ಇದರ ಕಥೆಯನ್ನು ವಿವರಿಸಿದ್ದಾರೆ; ‘ನಮ್ಮದು ಪ್ರಾಚೀನ ಗ್ರಾಮ. ಯಾವಾಗಲೂ ರಾವಣ ಎಂದೇ ಕರೆಯಲಾಗುತ್ತದೆ. ರಾಜ ಮತ್ತು ರಾಕ್ಷಸರಿಗೆ ಸಂಬಂಧಿಸಿದಂತೆ ಪುರಾಣ ಕಥೆಗಳನ್ನು ನಾವು ಓದಿದ್ದೇವೆ. ಪರ್ವತಗಳ ಮಡಿಲಿನಲ್ಲಿ ಹಲವಾರು ವರ್ಷಗಳ ತಪಸ್ಸಿನ ಫಲವಾಗಿ ರಾವಣನು ಶಕ್ತಿಯನ್ನು ಪಡೆಯುತ್ತಾನೆ. ತನ್ನ ರಾಜ್ಯ ರಾಜ್ಯಕ್ಕೆ ಮರಳುವಾಗ ಇದೇ ಊರಿನ ಮೂಲಕ ಹಾದು ಹೋಗಬೇಕಾಗಿತ್ತು. ಅದೇ ಸಮಯದಲ್ಲಿ ಬಡ ರೈತನೊಬ್ಬನಿಗೆ ತನ್ನ ಶಕ್ತಿಯನ್ನು ನೀಡುತ್ತಾನೆ. ಶಕ್ತಿಯ ಭಾರವನ್ನು ಹೊರಲಾರದ ರೈತ ಅದನ್ನು ನೆಲಕ್ಕರಿಸಿಬಿಡುತ್ತಾನೆ. ರಾವಣನು ತನ್ನೊಂದಿಗೆ ಶಕ್ತಿಗೆ ಬರುವಂತೆ ಕೇಳಿಕೊಂಡಾಗ ಶಕ್ತಿಯು ನಿರಾಕರಿಸುತ್ತದೆ. ಅದೇ ಶಕ್ತಿಯು ಇಂದು ಮಾನಸ ದೇವಿ ದೇವಾಲಯವಾಗಿ ನಿರ್ಮಿತಗೊಂಡಿದೆ; ಎಂದು ಉಲ್ಲೇಖವಿದೆ’ ಎಂಬ ಅರ್ಚಕರ ಮಾತುಗಳು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ನಗರದ ಬಿಸ್ರಾಖ್ ಗ್ರಾಮವು ದಸರಾ ಹಬ್ಬ ಆಚರಿಸದ ಹಳ್ಳಿಗೆ ಸಾಕ್ಷಿಯಾಗಿದೆ. ಇಲ್ಲಿಯ ನಿವಾಸಿಗಳು ರಾವಣ, ಮೇಘನಾದ ಮತ್ತು ಕುಂಭಕರ್ಣರ ಪ್ರತಿಮೆಗಳನ್ನು ಸುಡುವುದನ್ನು ಒಪ್ಪುವುದಿಲ್ಲ. ಶಿವನ ಆರಾಧಕ ವಿಶ್ರವ ಋಷಿಗೆ ಜನಿಸಿದ ರಾವಣನು ಬಿಸ್ರಾಖ್ ಗ್ರಾಮದಲ್ಲಿಯೇ ತನ್ನ ಬಾಲ್ಯವನ್ನು ಕಳೆದನು. ರಾವಣ ದೇವಾಲಯ ಎಂದೇ ಪ್ರಸಿದ್ಧವಾಗಿರುವ ಪ್ರಾಚೀನ ಶಿವ ದೇವಾಲಯವೊಂದರ ಮಹಾಂತ ರಾಮ್ ದಾಸ್ ಅವರು ‘ರಾವಣನು ನಮ್ಮ ಹಳ್ಳಿಯ ಮಗ. ಅವರ ದಹನವನ್ನು ನಾವು ನಿರಾಕರಿಸುತ್ತೇವೆ. ಅವರಲ್ಲಿ ನಮಗೆ ಹೆಮ್ಮೆ ಇದೆ ವಿಶ್ರವ ಋಷಿಗಳಿಂದಲೇ ಈ ಊರಿಗೆ ಹೆಸರು ಬಂದಿದೆ’ ಎಂದಿದ್ದಾರೆ. ಮಹಾರಾಷ್ಟ್ರದ ವರ್ಣನಾತೀತ ಹಳ್ಳಿಯಲ್ಲಿ ರಾವಣನಿಗಾಗಿ ಮಹಾ ಆರತಿಯೇ ನಡೆಯುತ್ತದೆ. ಇವರ ದಸರಾ ಹಬ್ಬದ ಆಚರಣೆಯ ವಿಭಿನ್ನವಾಗಿದೆ. ರಾವಣನನ್ನು ಅಂದು ಪೂಜಿಸಲಾಗುತ್ತದೆ.

Leave a Comment

error: Content is protected !!