10 ವರ್ಷಗಳ ಹಿಂದೆ ಅಪ್ಪು ತನ್ನ ಮ್ಯಾನೇಜರ್ ಚಂದ್ರು ಗೆ ದಾನ ಮಾಡಿದ್ದ ಜಾಗದ ಬೆಲೆ ಈಗ ಎಷ್ಟು ಕೋಟಿ ಗೊತ್ತಾ ನಂಬಲಿಕ್ಕೆ ಸಾಧ್ಯ ಇಲ್ಲ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನೆಲ್ಲ ಆಗಲೇ ಅಕ್ಟೋಬರ್ 29ಕ್ಕೆ ಬರೋಬ್ಬರಿ ಒಂದು ವರ್ಷ ಕಳೆದಿದೆ. ನಿಜಕ್ಕೂ ಕೂಡ ಆ ಧೀಮಂತ ವ್ಯಕ್ತಿತ್ವ ಇಲ್ಲದ ಕರ್ನಾಟಕವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮವರನ್ನೇ ನಾವು ಕಳೆದುಕೊಂಡಿದ್ದೇವೆ ಎನ್ನುವ ದುಃಖಕ್ಕೆ ಇಡೀ ಕರ್ನಾಟಕವೇ ಬಿದ್ದಿದೆ. ಒಬ್ಬ ವ್ಯಕ್ತಿ ಬಾರದ ಲೋಕಕ್ಕೆ ಹೋದಾಗ ಇಡೀ ರಾಜ್ಯವೇ ಎಷ್ಟೊಂದು ದುಃಖ ಪಡುತ್ತದೆ ಎಂಬುದನ್ನು ಕರ್ನಾಟಕ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾಕ್ಷಿಕರಿಸಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಇದ್ದಷ್ಟು ಕಾಲ ಯಾವ ರೀತಿಯಲ್ಲಿ ಜನಸೇವೆಯನ್ನು ಹಾಗೂ ಜನೋಪಕಾರಿ ಕಾರ್ಯವನ್ನು ಮಾಡಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಫೀಸಿನಲ್ಲಿ ಅವರ ಮ್ಯಾನೇಜರ್ ಆಗಿ ಬರೋಬ್ಬರಿ 22 ವರ್ಷಗಳ ಕಾಲ ಕಾರ್ಯವನ್ನು ನಿರ್ವಹಿಸಿರುವ ಚಂದ್ರು ಅವರ ಕುರಿತಂತೆ.

ಹೌದು ಮಿತ್ರರೇ ಅಪ್ಪು ಸಿನಿಮಾದಿಂದ ಪ್ರಾರಂಭಿಸಿ ಇಲ್ಲಿಯವರೆಗೂ ಕೂಡ ಅಪ್ಪು ಅವರ ಆಫೀಸಿನಲ್ಲಿ ಅವರ ಮ್ಯಾನೇಜರ್ ಆಗಿ ಚಂದ್ರುರವರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ತಮ್ಮ ಒಡೆಯ ಅಪ್ಪು ಅವರ ಕುರಿತಂತೆ ಮಾತನಾಡುತ್ತಾ ನಾನು ಏನು ಇಲ್ಲದೆ ಅವರ ಬಳಿ ಕೆಲಸಕ್ಕಾಗಿ ಬಂದವನು ಈಗ ಅವರಿಂದಾಗಿ ನನ್ನ ಬಳಿ ಕಾರು ಮನೆ ಸೈಟು ಹಾಗೂ ಕೋಟ್ಯಾಂತರ ಬೆಳೆಬಾಳುವ ಆಸ್ತಿ ಇದೆ ಎಲ್ಲಾ ಅವರು ನೀಡಿರುವ ಭಿಕ್ಷೆ ಎಂಬುದಾಗಿ ಹೇಳಿದ್ದಾರೆ. 10 ವರ್ಷಗಳ ಹಿಂದೆ ಅಪ್ಪು ಕೊಡಿಸಿದ್ದ ಒಂದು ಸೈಟ್ ಇದೀಗ 2 ಕೋಟಿ ಗೂ ಅಧಿಕ ಬೆಲೆ ಬಾಳುತ್ತಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದ್ದ ಚಂದ್ರು ಇದೀಗ ಕೋಟ್ಯಾಧೀಶ. ಅಷ್ಟರಮಟ್ಟಿಗೆ ನಮ್ಮನ್ನು ಅವರ ಜೊತೆಯ ಬೆಳೆಸಿಕೊಂಡು ಬಂದಿದ್ದಾರೆ ಎಂಬುದಾಗಿ ತಮ್ಮ ಒಡೆಯನನ್ನು ನೆನೆದುಕೊಂಡು ಕಣ್ಣೀರು ಹಾಕಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಮನೆಯಲ್ಲಿ ಅಥವಾ ಆಫೀಸಿನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಮನೆಯ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ವಿಚಾರವಾಗಿ ಸಂಪೂರ್ಣ ಉಚಿತ ಸವಲತ್ತನ್ನು ನೀಡುತ್ತಿದ್ದರು ಎಂಬುದಾಗಿ ಕೂಡ ಚಂದ್ರು ಅವರು ಹೇಳುತ್ತಾರೆ. ಅಭಿಮಾನಿಗಳು ಒಂದು ವೇಳೆ ಮಳೆ ಬಂದು ಮನೆಯ ಮುಂದೆ ಗೇಟಿನ ಹತ್ತಿರ ನಿಂತಾಗಲಿಲ್ಲ ಸಿಸಿಟಿವಿ ಕ್ಯಾಮೆರದಲ್ಲಿ ನೋಡಿದರೆ ಅವರನ್ನು ಮನೆಯ ಒಳಗೆ ಕರೆದು ಟೀ ಕಾಫಿ ಕುಡಿಸಿ ಕಳಿಸುತ್ತಿದ್ದರಂತೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಷ್ಕಲ್ಮಶ ಮನಸ್ಸು ಎನ್ನುವುದು ನಿಜಕ್ಕೂ ಕೂಡ ಇಂದಿಗೂ ಪ್ರತಿಯೊಬ್ಬ ಕನ್ನಡಿಗನಲ್ಲಿ ಹಾಗೂ ಅಪ್ಪು ಅಭಿಮಾನಿಗಳೆ ಪ್ರತಿಧ್ವನಿಸುತ್ತಿದ್ದು ಸಮಾಜದಲ್ಲಿ ಅವರ ಆದರ್ಶಗಳು ಅಭಿಮಾನಿಗಳ ಮೂಲಕ ಮುಂದುವರೆಯಲಿ ಎಂದು ಹಾರೈಸೋಣ.

Leave a Comment

error: Content is protected !!