ಬಹುಭಾಷಾ ತಾರೆ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣ ರಂಜನ್ ಶೆಟ್ಟಿ ಅವರ ಹ’ತ್ಯೆಗೆ ಯತ್ನಿಸಿದವರು ಯಾರು ಎಂಬುವ ಸಂಗತಿ ಹೊರಬಿದ್ದಿದೆ. ಗುಣ ರಂಜನ್ ಶೆಟ್ಟಿ ಮುತ್ತಪ್ಪ ರೈ ಬಲಗೈ ಬಂಟರಾಗಿದ್ದವರು. ಇದೀಗ ಜಯಕರ್ನಾಟಕ ಸಂಘಟನೆಯ ಪ್ರಮುಖ ಸ್ಥಾನದಲ್ಲಿ ಗುಣ ರಂಜನ್ ಶೆಟ್ಟಿ ಇದ್ದಾರೆ. ಗುಣ ರಂಜನ್ ಶೆಟ್ಟಿ ದಿವಂಗತ ಡಾಕ್ಟರ ಮುತ್ತಪ್ಪ ರೈ ಅವರಿಗೆ ಬಹಳ ಹತ್ತಿರದಲ್ಲಿ ಇದ್ದವರು. ನಟಿ ಅನುಷ್ಕಾ ಶೆಟ್ಟಿ ಸಹೋದರರಾಗಿರುವ ಗುಣ ರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಹ’ತ್ಯೆಗೆ ಸಂಚು ಮಾಡಲಾಗಿತ್ತು ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಹತ್ಯೆಯ ಪ್ರಯತ್ನ ಮಾಡಿದ್ದು ಯಾರು ಅಂತ ಕೂಡ ಬಹಿರಂಗವಾಗಿದೆ.

ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ. ಮನ್ವಿತ್ ರೈ ಕೂಡ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಮುತ್ತಪ್ಪ ರೈ ಅವರಿಂದಲೇ. ಇದೀಗ ಗುಣ ರಂಜನ್ ಶೆಟ್ಟಿ ಅವರ ಕೊಲೆಗೆ ಪ್ರಯತ್ನಪಟ್ಟಿದ್ದು ಮನ್ವಿತ್ ಎನ್ನುವ ವಿಚಾರ ಹೊರಬಿದ್ದಿತ್ತು ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಬಿಡುಗಡೆಯಾಗಿದೆ. ಈ ಸಂಬಂಧ ಜಯಕರ್ನಾಟಕ ಸಂಘಟನೆಯ ಸದಸ್ಯರು ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರು ನೀಡಿರುವ ಸಂಗತಿ ಬಹಿರಂಗವಾಗಿದೆ.

ಇನ್ನೂ ಈ ವಿಚಾರಕ್ಕೆ ಕುರಿತಂತೆ ಪೊಲೀಸ್ ತನಿಖೆಯೂ ಕೂಡ ನಡೆಯುತ್ತಿದೆ. ಇನ್ನು ಮನ್ವಿತ್ ರೈ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದು, ನಾನು ವಿದೇಶಕ್ಕೆ ವ್ಯವಹಾರದ ನಿಮಿತ್ತ ಬಂದಿದ್ದೇನೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತನಿಖೆಯ ಬಳಿಕ ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರಗೆ ಬರಲಿದೆ ಎಂಬುದನ್ನು ಕೂಡ ಹೇಳಿದ್ದಾರೆ.

ಇನ್ನು ತಮ್ಮ ಮೇಲೆ ಇದುವರೆಗೆ ಯಾವುದೇ ಕ್ರಿ’ಮಿನಲ್ ಕೇಸ್ ಗಳು ಇಲ್ಲ, ಯಾವ ಎಫ್ಐಆರ್ ಗಳು ದಾಖಲಾಗಿಲ್ಲ ಎಂದು ಹೇಳಿಕೊಂಡಿರುವ ಮನ್ವಿತ್ ರೈ. ವಿನಾಕಾರಣ ಈ ವಿಷಯದಲ್ಲಿ ನನ್ನ ಹೆಸರನ್ನು ತಳಕು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ. ಈ ಹಿಂದೆ ಮುತ್ತಪ್ಪ ರೈ ಅವರ ಪರಮಾಪ್ತ ರಾಕೇಶ್ ಮಲ್ಲಿ ಅವರನ್ನು ಅವರವರ ಸುಪಾರಿ ಕೊಟ್ಟಿದ್ದು ಅದರ ಹೆಸರು ಕೇಳಿಬಂದಿತ್ತು. ಮೂರು ಕೋಟಿ ರೂಪಾಯಿ ಡೀಲ್ ಕುದುರಿಸಲಾಗಿತ್ತು ಎಂದು ಹೇಳಲಾಗಿದೆ.

ಇನ್ನು ತನ್ನ ಕೊಲೆಗೆ ಮುತ್ತಪ್ಪ ರೈ ಸುಪಾರಿ ನೀಡಿದ್ದಾರೆ ಎಂಬುದನ್ನು ರಾಕೇಶ್ ಮಲ್ಲಿ ಹೇಳಿಕೊಂಡಿದ್ದರು. ಇನ್ನು ಮನ್ವಿತ್ ರೈ, ರಾಕೇಶ್ ಮಲ್ಲಿಯನ್ನು ಕೊಲ್ಲಲು ಸೂಪಾರಿ ಕೊಡುವುದಾಗಿ ಹೇಳಿದ್ದು ನಿಜ ಎಂದು ವಿದೇಶದಿಂದಲೇ ವಿಡಿಯೋವನ್ನು ಮಾಡಿ ಕಳುಹಿಸಿದ್ದಾರೆ. ಗುಣ ರಂಜನ್ ಅವರಿಗೆ ಮನ್ವಿತ್ ರೈ ಬೆದರಿಕೆ ಹಾಕಿದ್ದಾರೆ ಎನ್ನುವ ವಿಚಾರ ಕೂಡ ಬೆಂಗಳೂರಿನ ಭೂಗತ ಜಗತ್ತನ್ನು ಅಲ್ಲಾಡಿಸುತ್ತದೆ.

By admin

Leave a Reply

Your email address will not be published.