ಟಿಕ್ ಟಾಕ್ ಮಾಡಿಕೊಂಡು ಆಟೊ ದಲ್ಲಿ ಓಡಾಡುತ್ತಿದ್ದ ಅಲ್ಲು ರಘು ಖರೀದಿಸಿರುವ ಆಡಿ ಕಾರ್ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿ ಬೀಳುತ್ತೀರಿ

ಒಂದು ಕಾಲದಲ್ಲಿ ಡಬ್ ಸ್ಮ್ಯಾಶ್ ಹಾಗೂ ಟಿಕ್ ಟಾಕ್ ಇದ್ದ ಸಂದರ್ಭದಲ್ಲಿ ಅಲ್ಲು ರಘು ಎನ್ನುವ ಕಂಟೆಂಟ್ ಕ್ರಿಯೇಟರ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕನ್ನಡದ ವಲಯದಲ್ಲಿ ಸುದ್ದಿ ಮಾಡಿದ್ದ ಎಂಬುದು ನಿಮಗೆ ತಿಳಿದಿರುವ ವಿಚಾರ. ಆ ಸಂದರ್ಭದಲ್ಲಿ ಕನ್ನಡದಲ್ಲಿ ಅಷ್ಟೊಂದು ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಇರಲಿಲ್ಲ ಹೀಗಾಗಿ ಅಲ್ಲು ರಘು ಆ ಕಾಲದಲ್ಲಿ ನಂಬರ್ ಒನ್ ಕಂಟೆಂಟ್ ಕ್ರಿಯೇಟರ್ ಅಥವಾ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಎಂದರೆ ತಪ್ಪಾಗಲಾರದು.

ಸೋಶಿಯಲ್ ಮೀಡಿಯಾ ರಾತ್ರೋರಾತ್ರಿ ಒಬ್ಬರನ್ನು ಸ್ಟಾರ್ ಮಾಡುತ್ತದೆ ಎಂಬುದಕ್ಕೆ ಅಲ್ಲು ರಘು ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು. ಇನ್ನು ಸದ್ಯಕ್ಕೆ ಅಲ್ಲು ರಘು ಸುಶ್ಮಿತಾ ಎನ್ನುವ ಮತ್ತೊಬ್ಬ ಸೋಶಿಯಲ್ ಮೀಡಿಯಾ ಸ್ಟಾರ್ ಅನ್ನು ಮದುವೆಯಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇತ್ತೀಚಿಗಷ್ಟೇ ಅಲ್ಲೂ ರಘು ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹೊಸದಾಗಿ ದುಬಾರಿ ಬೆಳೆಯ ಆಡಿ ಕಾರ್ ಅನ್ನು ಖರೀದಿಸಿರುವ ಬಗ್ಗೆ ಸಂತೋಷದಿಂದ ಹೇಳಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಅವರ ತಂದೆ ಮೈನಿಂಗ್ ಅನ್ನು ನಡೆಸುತ್ತಿದ್ದರು ನಂತರ ನಷ್ಟ ಆದಮೇಲೆ ಎಲ್ಲರೂ ಕೂಡ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಹೋಗುವ ಪರಿಸ್ಥಿತಿ ಉಂಟಾಯಿತು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ ಅಲ್ಲು ರಘು ಅವರು ಶೇರಿಂಗ್ ಆಟೋದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಹತ್ತು ರೂಪಾಯಿ ಕೂಡ ಇಲ್ಲದಂತಹ ಪರಿಸ್ಥಿತಿ ಉಂಟಾಗಿ ಸ್ನೇಹಿತರ ಬಳಿ ಸಾಲ ಕೇಳುವುದು ಹಾಗೂ ಓಡಾಡುವುದಕ್ಕೆ ಅವರ ಬಳಿ ದ್ವಿಚಕ್ರ ವಾಹನವನ್ನು ಕೇಳುವ ಪರಿಸ್ಥಿತಿ ಕೂಡ ನಿರ್ಮಾಣವಾಯಿತು.

ಅಲ್ಲಿಂದ ಕಷ್ಟದಲ್ಲೇ ಬೆಳೆದು ಬಂದ ಅಲ್ಲು ರಘು ಇಂದು ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಆಡಿ ಕ್ಯೂ4 ಕಾರನ್ನು ಖರೀದಿಸಿರುವುದು ನಿಜಕ್ಕೂ ಕೂಡ ಕನಸನ್ನು ಕಂಡು ಕಷ್ಟ ಪಟ್ಟರೆ ಯಾರು ಯಾವುದನ್ನು ಬೇಕಾದರೂ ಕೂಡ ಸಾಧಿಸಬಹುದು ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಅಲ್ಲು ರಘು ಅವರ ಬಗ್ಗೆ ಹಾಗೂ ಅವರು ಕಾರನ್ನು ಖರೀದಿಸಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!