ಎಂಬಿಎ ಮುಗಿಸಿದ್ರೂ ಕೆಲಸ ಸಿಗಲಿಲ್ಲ ಅನ್ನೋ ಕಾರಣಕ್ಕೆ ಯುವತಿ ಮಾಡಿಕೊಂಡ ಕೆಲಸ ನೋಡಿ! ಏನು ಹೇಳೋದು ಈಗಿನ ಮಕ್ಕಳಿಗೆ

ಇವತ್ತಿನ ಯುವಕ ಯುವತಿಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಲುವುದೇ ಕಷ್ಟ. ಯಾಕಂದ್ರೆ ಯಾವ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಲಾಗದ ಸೂಕ್ಷ್ಮ ಮನಸ್ಥಿತಿ ಕೆಲವರದ್ದು. ತಮ್ಮ ಯಾವುದೇ ಪರಿಸ್ಥಿತಿಯನ್ನು ಯಾರ ಬಳಿಯೂ ಕೇಳಿಕೊಳ್ಳದೇ ಒಳಗೊಳಗೇ ಎಲ್ಲವನ್ನೂ ಅನುಭವಿಸುತ್ತಾ ನಂತರ ಖಿನ್ನತೆಗೆ ಒಳಗಗುತ್ತಾರೆ. ಕೊನೆಗೆ ಸಾ’ಯು’ವಂಥ ಕೆಟ್ಟ ನಿರ್ಧಾರವನ್ನು ಮಾಡಿಯೇ ಬಿಡುತ್ತಾರೆ. ಇಂಥ ಒಂದು ಬುದ್ದಿಗೇಡಿ ಕೆಲಸವನ್ನು ಮಾಡಿ ಜೀವವನ್ನೇ ತೆಗೆದುಕೊಂಡಿದ್ಡಾಳೆ ಒಬ್ಬಳು ಯುವತಿ.

ಈ ಘಟನೆ ನಡೆದಿದ್ದು ಉಡುಪಿಯ ಕಾಪುವಿನಲ್ಲಿ. 23 ವರ್ಷದ ಸಹನಾ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದವರು. ಎಂಬಿಎ ಪದವೀಧರೆ. ದ.ಕ ಜಿಲ್ಲೆ ಉಪ್ಪಿನಂಗಡಿ ಮೂಲದ ಸಹನಾ (23) ಆ’ತ್ಮ’ಹತ್ಯೆ ಮಾಡಿಕೊಂಡ ಯುವತಿ. ಸಹನಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು ಸುಮಾರು ಒಂದುವರೆ ವರ್ಷವಾಗಿತ್ತು. ಆದರೆ ಅವರಿಗೆ ಯಾವುದೇ ಸರಿಯಾದ ಕೆಲಸ ಸಿಗದೇ ಮನೆಯಲ್ಲಿಯೇ ಇದ್ದಳು. ಇದರಿಂದ ಬಹಳ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದರು ಎನ್ನುವುದು ಅವರ ಸಾ’ವಿನ ಸುದ್ದಿಯ ನಂತರವೇ ಗೊತ್ತಾಗಿದೆ.

ಏಪ್ರಿಲ್ 30 ರಂದು ಶಿರ್ವ ಬಳಿಯ ಕಟ್ಟಿಂಗೇರಿ ಗ್ರಾಮದಲ್ಲಿರುವ ಸೌಮ್ಯ ಅಂದರೆ ಅವರ ಸಹೋದರಿ. ಅವರ ಮನೆಗೆ ಸಹನಾ ಹೋಗಿದ್ದಳು. ಅವರ ಮನೆಯಲ್ಲಿಯೇ ಉಳಿದುಕೊಂಡ ಸಹನಾ ರಾತ್ರಿಯೇ ವಿ’ಷ’ವನ್ನು ಸೇವಿಸಿದ್ದಾಳೆ. ಮರುದಿನ ಬೆಳಿಗ್ಗೆ ವಾಂತಿ ಮಾಡಿಕೊಂಡು ಒದ್ದಾಡುತ್ತಿರುವುದನ್ನು ನೋಡಿ ಆಕೆಯನ್ನು ಉಡುಪಿ ನಗರದ ಮಿಷನ್ ಆಸ್ಪತ್ರೆಗೆ ಸೇರಿಸಲಾಯಿತು.

ಇಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆ ಇಲ್ಲದೇ ಸಹನಾ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರಲ್ಲಿ ಯವ ಚೇತರಿಕೆಯೋ ಕಾಣಲಿಲ್ಲ. ನಂತರ ಮೇ 7 ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಹನಾ ಅವರನ್ನು ಕರೆದುಕೊಂಡು ಬರಲಾಯಿತು. ಇಲ್ಲಿಯೂ ಚಿಕಿತ್ಸೆಗೆ ಸಹಸಾ ದೇಹ ಸರಿಯಾಗಿ ಪ್ರತಿಕ್ರಿಯಿಸದೇ ಮೇ 9 ರಂದು ಸಹನಾ ಅಸುನೀಗಿದ್ದಾರೆ. ಈ ಪ್ರಕರಣ ಶಿರ್ವ ಠಾಣೆಯಲ್ಲಿ ದಾಖಲಾಗಿದೆ.

ಕೇವಲ ಕೆಲಸ ಸರಿಯಾಗಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಇನ್ನಷ್ಟು ಪ್ರಯತ್ನವನ್ನು ಮಾಡುವ ಬದಲು ಸಹನಾ ಆ’ತ್ಮಹ’ತ್ಯೆಗೆ ಶರಣಾಗಿದ್ದು ನಿಜಕ್ಕೂ ದುರಂತ. ಈಗಿನ ಕಾಲದ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಜೀವನವನ್ನು ಹೇಗೆ ಎದುರಿಸಬೇಕು ಎಂಬ ಪಾಠವನ್ನು ಹೇಳಬೇಕಾದ ಪರಿಸ್ಥಿತಿ ಒದಗಿದೆ. ಈ ಸಂಬಂಧ ಯುವ ಕಾಂಗ್ರೇಸ್ ಸರ್ಕಾರ ಸರಿಯಾಗಿ ಉದ್ಯೋಗ ಒದಗಿಸದೇ ಇರುವುದಕ್ಕಾಗಿ ಪ್ರತಿಭಟನೆ ನಡೆಸಿದೆ.

Leave a Comment

error: Content is protected !!