ಹಣ ಬೇಡಿಕೆ ಇಟ್ಟು, ತನ್ನ ಜೋತೆ ಮಲಗುವಂತೆ ಒತ್ತಾಯ ಮಾಡಿದ ಮಂಜು ಪಾವಗಡ ಸಹೋದರ ನಿಗೆ ಬಿತ್ತು ಗೂಸಾ

ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಂಜು ಪಾವಗಡ ಅವರ ಸಹೋದರ ಪ್ರದೀಪ್ ಅವರ ವಿಚಾರ ಬಹುತೇಕ ನಿಮ್ಮೆಲ್ಲರಿಗೂ ತಿಳಿದಿದೆ. ಪತ್ರಕರ್ತ ಎಂಬುದಾಗಿ ಹೇಳಿಕೊಂಡು ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣದ ಬೇಡಿಕೆ ಇಟ್ಟಿದ್ದ ಪ್ರದೀಪ್ ಸೇರಿದಂತೆ ಇನ್ನೂ ಕೆಲವು ಯುವತಿಯರನ್ನು ಈಗಾಗಲೇ ಬಂದಿಸಲಾಗಿದೆ. ಇದಕ್ಕೂ ಮುನ್ನ ಈ ಘಟನೆಯ ಹಿನ್ನೆಲೆ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಪ್ರದೀಪ್ ತಾನೊಬ್ಬ ಪತ್ರಿಕೆಯ ಸಂಪಾದಕ ಎಂಬುದಾಗಿ ಹೇಳಿ ಪಾಲಿಕೆಯ ಸಿಬ್ಬಂದಿಯಾಗಿರುವ ದೀಪಿಕಾಗೆ ಪರಿಚಯವಾಗಿದ್ದ. ಸಂಘ ಸಂಸ್ಥೆಯ ಹೆಸರಿನಲ್ಲಿ 10 ಲಕ್ಷ ಸಾಲ ಪಡೆಯುವ ಬಗ್ಗೆ ದೀಪಿಕಾ ಬಳಿ ಒಪ್ಪಿಗೆಯನ್ನು ಕೂಡ ಪಡೆದುಕೊಂಡಿದ್ದ. ಆದರೆ ಈ ಸಂದರ್ಭದಲ್ಲಿ ದೀಪಿಕಾ 10 ಲಕ್ಷ ರೂಪಾಯಿ ಸಾಲಕ್ಕೆ 4 ಲಕ್ಷ ರೂಪಾಯಿ ನನಗೆ ಕಮಿಷನ್ ನೀಡಬೇಕು ಎಂಬುದಾಗಿ ಹೇಳಿದ್ದನ್ನು ಆಕೆಗೆ ಬ್ಲಾಕ್ ಮೇಲ್ ಮಾಡುವ ಸಲುವಾಗಿ ಪ್ರದೀಪ್ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದ. ಇದೇ ಆಡಿಯೋವನ್ನು ಇಟ್ಟುಕೊಂಡು ದೀಪಿಕಾ ಬಳಿ ನಾಲ್ಕು ಲಕ್ಷ ರೂಪಾಯಿ ನೀಡಲೇಬೇಕು ಎಂಬುದಾಗಿ ಬೇಡಿಕೆ ಇಟ್ಟಿದ್ದ.

ಈ ಸಂದರ್ಭದಲ್ಲಿ ತನ್ನ ಬಳಿ ಇದ್ದ ಮೂವರು ಯುವತಿಯರನ್ನು ಆಕೆಯ ಬಳಿ ಬಿಟ್ಟು ಇವರು ಆರ್ ಟಿ ಐ ಕಾರ್ಯಕರ್ತರು ಒಂದು ವೇಳೆ ನೀವು ಹಣ ನೀಡದಿದ್ದರೆ ನಿಮ್ಮನ್ನು ವಜಾ ಮಾಡಿಸುತ್ತೇವೆ ಹಾಗೂ ನಿಮ್ಮ ವಿರುದ್ಧ ಪತ್ರಿಕೆಯಲ್ಲಿ ಸುದ್ದಿಯನ್ನು ಬಿತ್ತರಿಸುತ್ತೇವೆ ಎಂದು ಹೇಳಿದ್ದು ಮಾತ್ರವಲ್ಲದೆ ನನ್ನ ಜೊತೆಗೆ ಒಂದು ರಾತ್ರಿಯನ್ನು ಕಳೆಯಬೇಕು ಎನ್ನುವ ಬೇಡಿಕೆಯನ್ನು ಕೂಡ ಇಟ್ಟಿದ್ದ. ಯಾವಾಗ ದೀಪಿಕ ಹಣ ಕೊಡುವುದಿಲ್ಲ ಎಂಬುದಾಗಿ ಪಟ್ಟು ಹಿಡಿದುಕೊಳ್ಳುತಾಗ ಆಕೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ಹಣ ನೀಡುವಂತೆ ಒತ್ತಾಯ ಮಾಡಿದ್ದು ಕೂಡ ತಿಳಿದು ಬಂದಿದೆ.

ಇದನ್ನು ತಿಳಿದುಕೊಂಡ ಪಾಲಿಕೆಯ ಮಧ್ಯವರ್ತಿಗಳು ಆ ಮೂರು ಯುವತಿಯರು ಹಾಗೂ ಪ್ರದೀಪ್ ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದಾದ ನಂತರ ಕೂಡಲೇ ತುಮಕೂರು ನಗರ ಪೊಲೀಸ್ ಇಲಾಖೆ ಇವರನ್ನು ಬಂಧಿಸಿದ್ದು ಈಗಾಗಲೇ ಇವರ ಮೇಲೆ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಹಾಗೂ ಇದರ ಬಗ್ಗೆ ಮಂಜು ಪಾವಗಡ ಪ್ರತಿಕ್ರಿಯೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!