KSRTC: ಕೆಎಸ್ಆರ್ಟಿಸಿ ನೇಮಕಾತಿಯಲ್ಲಿ ತೂಕ ಹೆಚ್ಚಾಗಿ ಕಾಣಲು ಈ ಚಾಲಾಕಿಗಳು ಮಾಡಿದ್ದೇನು ಗೊತ್ತಾ?

KSRTC ಕೆಎಸ್ಆರ್ಟಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾಡಿರುವಂತಹ ಕೆಲವೊಂದು ಅಕ್ರಮಗಳು ಈಗ ತಿಳಿದು ಬಂದಿದ್ದು ಈ ಚಾಲಾಕಿಗಳು ತೂಕ ಹೆಚ್ಚಳಕ್ಕಾಗಿ ಮಾಡಿರುವಂತಹ ಉಪಾಯ ನೋಡಿ ಎಲ್ಲರೂ ಬೆಸ್ತು ಬಿದ್ದಿದ್ದಾರೆ. ಕಲಬುರ್ಗಿಯಲ್ಲಿ(Kalburgi) ನಡೆಯುತ್ತಿದ್ದ ಕೆಎಸ್ಆರ್ಟಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾಡುತ್ತಿದ್ದ ಅಕ್ರಮ ಈಗ ಬೆಳಕಿಗೆ ಬಂದಿದೆ. ಈ ನೇಮಕಾತಿಯಲ್ಲಿ ಬರುವಂತಹ ಅಭ್ಯರ್ಥಿಗಳಿಗೆ ನಿರ್ದಿಷ್ಟವಾದ ತೂಕ ಇರಬೇಕಾಗಿರುತ್ತದೆ.

ಆ ನಿರ್ದಿಷ್ಟವಾದ ತೂಕ ಇಲ್ಲದ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳು ಕಬ್ಬಿಣದ ಕಲ್ಲು ತೂಕವನ್ನು ತಮ್ಮ ಒಳ ಉಡುಪಿನಲ್ಲಿ ಹಾಕಿಕೊಂಡು ಬಂದಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಬಂದಿದ್ದಂತಹ ನಾಲ್ಕು ಅಭ್ಯರ್ಥಿಗಳು ನಿರ್ದಿಷ್ಟ ತೂಕ ಇಲ್ಲದೆ ಇರುವ ಕಾರಣದಿಂದ ಈ ರೀತಿ ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾರೆ. ಕಲ್ಬುರ್ಗಿ ಕೆಎಸ್ಆರ್ಟಿಸಿ(KSRTC) ಚಾಲಕ ಹಾಗೂ ನಿರ್ವಾಹಕ ವೃತ್ತಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಇರುವಂತಹ 1619 ಹುದ್ದೆಗಳಿಗೆ ರಾಜ್ಯಾದ್ಯಂತ 36,000ಕ್ಕೂ ಅಧಿಕ ಅರ್ಜಿಗಳು ಬಂದಿದೆ.

Kalburgi KSRTC Scam

ಈ ಸಮಯದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದಿಷ್ಟವಾದ ಎತ್ತರ ಹಾಗೂ ಕನಿಷ್ಠಪಕ್ಷ 55 ಕೆಜಿ ತೂಕ ಇರಲೇಬೇಕಾಗಿತ್ತು. ಈ ಸಂದರ್ಭದಲ್ಲಿ ಈ ಚಾಲಾಕಿಗಳು 5 ಕೆಜಿ ತೂಕದ ಕಬ್ಬಿಣದ ತೂಕದ ಕಲ್ಲನ್ನು ತಮ್ಮ ಒಳ ಉಡುಪಿನಲ್ಲಿ ಇಟ್ಟುಕೊಂಡಿದ್ದಾರೆ. ಇನ್ನೊಬ್ಬ ಅಭ್ಯರ್ಥಿಯಂತೂ ಅದಕ್ಕಾಗಿ ವಸ್ತ್ರ ವಿನ್ಯಾಸವನ್ನು ಮಾಡಿ ಎರಡು ಕಿಶೆಯಲ್ಲಿ ಐದು ಐದು ಕೆಜಿ ತೂಕದ ಕಲ್ಲನ್ನು ಇಟ್ಟುಕೊಂಡು ಬಂದಿದ್ದ. ಇನ್ನೊಬ್ಬ ಕಾಲಿಗೆ ಕಬ್ಬಿಣದ ಸಲಾಕೆಯನ್ನು ಕಟ್ಟಿಕೊಂಡು ಬಂದಿದ್ದ. ಈ ಚಾಲಾಕಿಗಳ ಯೋಜನೆಯನ್ನು ನೋಡಿ ಪರೀಕ್ಷಕರೇ ಸುಸ್ತಾಗಿದ್ದಾರೆ.

ಆದರೆ ಇವರು ಚಾಪೆಯ ಕೆಳಗೆ ತೋರಿದರೆ ಇವರನ್ನು ಪರೀಕ್ಷೆ ಮಾಡುವಂತಹ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು(KSRTC Officers) ಇನ್ನಷ್ಟು ಕಠಿಣ ಕ್ರಮದಿಂದ ಇವರನ್ನು ಪರೀಕ್ಷಿಸಿದ್ದು ಇವರು ಮಾಡುತ್ತಿರುವಂತಹ. ಇನ್ನು ಮುಂದೆ ಕೆ ಎಸ್ ಆರ್ ಟಿ ಸಿ ನಡೆಸುವಂತಹ ಯಾವುದೇ ಪರೀಕ್ಷೆಯಲ್ಲಿ ಕೂಡ ಇವರು ಭಾಗವಹಿಸದ ಹಾಗೆ ಇವರಿಗೆ ನಿಷೇಧಾಜ್ಞೆಯನ್ನು ಜಾರಿಗೆ ತರಿಸಲಾಗಿದೆ. ಮಾನವೀಯತೆಯ ಆಧಾರದ ಮೇಲೆ ಇವರ ಮೇಲೆ ಯಾವುದೇ ಪ್ರಕರಣವನ್ನು ದಾಖಲಿಸದೆ ಹಾಗೆ ಬಿಟ್ಟು ಕಳಿಸಲಾಗಿದೆ. ಕೆಲಸ ಗಿಟ್ಟಿಸಿಕೊಳ್ಳಲು ಹೀಗೂ ಕೂಡ ಮಾಡಬಹುದು ಎಂಬುದನ್ನು ಈ ಚಾಲಾಕಿಗಳು ನಿರೂಪಿಸಿದ್ದಾರೆ.

Leave a Comment

error: Content is protected !!