ಕಡಿಮೆ ಬಂಡವಾಳದಿಂದ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಅತ್ಯಂತ ಲಾಭದಾಯಕ ಬ್ಯುಸಿನೆಸ್.

Business Idea ಗೆಳೆಯರೇ ಒಂದು ವೇಳೆ ನೀವು ಎಂಟನೇ ತರಗತಿ ಓದಿದ್ದರು ಸಾಕು ಕೈ ತುಂಬಾ ಲಕ್ಷ ಲಕ್ಷ ಹಣ ದುಡಿಯುವಂತಹ ಒಂದು ಉದ್ಯಮವನ್ನು ನೀವು ಪ್ರಾರಂಭಿಸಬಹುದಾಗಿದೆ. ನಮ್ಮ ಭಾರತ ದೇಶದಲ್ಲಿ ಅಂಚೆ ಸೇವೆ(Postal Service) ಎನ್ನುವುದು ಸಾಕಷ್ಟು ಅತ್ಯಗತ್ಯವಾಗಿ ಬೇಕಾಗಿರುವಂತಹ ವಿಚಾರವಾಗಿದ್ದು ಕೆಲವೊಂದು ಕಡೆಗಳಲ್ಲಿ ಇದರ ಕೊರತೆ ಕೂಡ ಎದ್ದು ಕಾಣುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕಾಗಿ ಅಂಚೆ ಇಲಾಖೆ ಸಂಸ್ಥೆ ತನ್ನದೇ ಆದಂತಹ ಫ್ರಾಂಚೈಸಿಯನ್ನು ತೆರೆಯುವ ಯೋಜನೆಯನ್ನು ಪ್ರಾರಂಭಿಸಿದೆ.

ಹಲವಾರು ವಿವಿಧ ರೀತಿಯ ಫ್ರಾಂಚೈಸಿ ಗಳನ್ನು(Franchise) ಅಂಚೆ ಇಲಾಖೆ ಪ್ರಾರಂಭಿಸಿದ್ದು ಅದರಲ್ಲಿ ನಿಮಗೆ ಸೂಕ್ತವಾದಂತಹ ಪ್ರಾಂಚೈಸಿಯನ್ನು ನೀವು ಕೊಂಡುಕೊಳ್ಳಬಹುದಾಗಿದೆ. ಮೊದಲಿಗೆ ಅಂಚೆ ಕಛೇರಿ ಇಲ್ಲದಂತಹ ಸ್ಥಳದಲ್ಲಿ ನೀವೇ ಔಟ್ಲೆಟ್ ಅನ್ನು ಪ್ರಾರಂಭಿಸಿ ಅಂಚೆ ಸೌಲಭ್ಯವನ್ನು ಒದಗಿಸುವ ಔಟ್ಲೆಟ್ ಫ್ರಾಂಚೈಸಿಯನ್ನು ಪ್ರಾರಂಭಿಸಬಹುದಾಗಿದೆ. ಎರಡನೇದಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಂಚೆ ಚೀಟಿ ಹಾಗೂ ಪುಸ್ತಕಗಳನ್ನು ತಲುಪಿಸುವಂತಹ ಪೋಸ್ಟಲ್ ಏಜೆಂಟ್ ಫ್ರಾಂಚೈಸಿಯನ್ನು ಕೂಡ ನೀವು ಪಡೆದುಕೊಳ್ಳಬಹುದು.

ಕನಿಷ್ಠ 8ನೇ ತರಗತಿ ಪಾಸ್ ಆಗಿದ್ದು 18 ವರ್ಷ ಪೂರೈಸಿ ಬಿಡುವ ಯಾರು ಬೇಕಾದರೂ ಕೂಡ ಇದನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಅನಿಸಿಕೆಗಳ ಮೂಲಕ ನೀವು ಗ್ರಾಹಕರಿಗೆ ಅಂಚೆ ಕಚೇರಿ ನೀಡುವಂತಹ ಎಲ್ಲಾ ಸೌಲಭ್ಯಗಳನ್ನು ಹಾಗೂ ಸೇವೆಗಳನ್ನು ಒದಗಿಸಬಹುದಾಗಿದ್ದು ಇದಕ್ಕಾಗಿ ನೀವು 5000 ಠೇವಣಿ ಇಡಬೇಕಾಗಿದೆ. ನಿಮ್ಮ ಕೆಲಸಕ್ಕೆ ಅನುಗುಣವಾಗಿ ನಿಮಗೆ ಕಮಿಷನ್ ದೊರಕಲಿದೆ. ಮೊದಲಿಗೆ ಈ ಸೇವೆಯನ್ನು ಪಡೆಯಲು ನೀವು ಅರ್ಜಿಯನ್ನು ಕೂಡ ಸಲ್ಲಿಸಬೇಕಾಗಿರುತ್ತದೆ.

ಇನ್ನು ಪ್ರತಿಯೊಂದು ಸೇವೆಗಳ ಮೂಲಕ ನೀವು ಅದರ ಮೇಲಿನ ಕಮಿಷನ್ ರೂಪದಲ್ಲಿ ಹಣವನ್ನು ಪಡೆಯಲಿದ್ದೀರಿ. ಹೀಗಾಗಿ ಹೆಚ್ಚಿನ ಅಂಚೆ ಕಚೇರಿ(Post Office) ಗ್ರಾಹಕರು ಇರುವಂತಹ ಸ್ಥಳದಲ್ಲಿಯೇ ನಿಮ್ಮ ಫ್ರಾಂಚೈಸಿಯನ್ನು ತೆರೆಯುವುದು ಉತ್ತಮ. ಯಾವ ಸೇವೆಗೆ ಎಷ್ಟು ರೂಪಾಯಿ ಕಮಿಷನ್ ಪಡೆಯಬಹುದು ಎನ್ನುವುದನ್ನು ನೀವು ಅಧಿಕೃತವಾಗಿ ಅಂಚೆ ಕಚೇರಿಯ ವೆಬ್ಸೈಟ್ನಲ್ಲಿ ಹೋಗಿ ಇದರ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಕಡಿಮೆ ಬಂಡವಾಳದಲ್ಲಿ ಉತ್ತಮ ಹಣವನ್ನು ಗಳಿಸುವ ಮಾರ್ಗ ಇದಾಗಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!