84 ವರ್ಷ ವಯಸ್ಸಾದರೂ ರತನ್ ಟಾಟಾ ಅವರು ಮದುವೆ ಆಗಿಲ್ಲ ಯಾಕೆ ಗೊತ್ತಾ

TATA ಈ ಹೆಸರಿನ ಪರಿಚಯ ಬೇಕಾಗಿಲ್ಲ. ಏಕೆಂದರೆ ನಾವೆಲ್ಲರೂ ಇದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅಡುಗೆ ಮನೆಯಲ್ಲಿ ಬಳಸುವ ಉಪ್ಪು, ಕುಡಿಯುವ ಟೀ, ಸ್ಟೀಲ್,ಫೈನಾನ್ಸ್ ಇವೆಲ್ಲ ತುಂಬಾ ಕಡೆ ನಮ್ಮ ದೇಶದಲ್ಲಿ ಇದೆ. ಇದು ಅತಿ ದೊಡ್ಡ ವ್ಯಾಪಾರ ಸಂಸ್ಥೆ. ಇದರ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ತಿಳಿಯೋಣ. ಟಾಟಾ ಇದು ಅತಿ ದೊಡ್ಡ ವ್ಯಾಪಾರ ಸಂಸ್ಥೆ.ಇಲ್ಲಿ 7ಲಕ್ಷ ಜನರು ಕೆಲಸ ಮಾಡುತ್ತಾರೆ. ಇಂತಹ ಕಂಪನಿಯನ್ನು ನಡೆಸುತ್ತಿರುವ ವ್ಯಕ್ತಿಯ ಹೆಸರು ರತನ್ ಟಾಟಾ. ಸುಮಾರು 150ವರ್ಷದ ಚರಿತ್ರೆಯನ್ನು ಹೊಂದಿದೆ. ಜೆಮ್ ಶೇಟ್ ಜಿ ಟಾಟಾ ಎನ್ನುವವರು 1868ರಲ್ಲಿ ಕಾಟನ್ ಮಿಲ್ ನ್ನು ಪ್ರಾರಂಭಿಸುತ್ತಾರೆ.ಇದೇ ಟಾಟಾ ಸಂಸ್ಥೆಯ ಬುನಾದಿ. ನಂತರ ತುಂಬಾ ಜನರ ಟಾಟಾ ವಂಶಸ್ಥರ ಕೈಯಲ್ಲಿ ಬದಲಾಗುತ್ತಾ ಹೋಗುತ್ತದೆ. ನಮ್ಮ ದೇಶದ ಮೊಟ್ಟ ಮೊದಲ ಹೋಟೆಲ್ ಆದ ತಾಜ್,ಸ್ಟೀಲ್ ಕಂಪನಿ, ಏರ್ಲೈನ್ ಕಂಪನಿ ಶುರು ಮಾಡಿದ್ದು ಟಾಟಾ ವಂಶಸ್ಥರು. ಈಗಿನ ಏರ್ ಇಂಡಿಯಾ ಆಗಿನ ಏರ್ಲೈನ್ಸ್.

6000 ಕೋಟಿ ಇದ್ದ ಟಾಟಾ ಕಂಪನಿಯನ್ನು 6ಲಕ್ಷ ಕೋಟಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಅವರ ವ್ಯಾಪಾರ ಪಯಣಗಳಲ್ಲಿ ತೊಂದರೆ ನೋವುಗಳನ್ನು ಅನುಭವಿಸ ಬೇಕಾಗುತ್ತದೆ. 1998ರಲ್ಲಿ ಟಾಟಾ ಕಂಪನಿ ಟಾಟಾ ಇಂಡಿಕಾ ಕಾರ್ ಗಳನ್ನು ತರುತ್ತಾರೆ. ಆದರೆ ಇದು ಯಶಸ್ಸು ಕೊಡಲಿಲ್ಲ. ನಷ್ಟ ಸಂಭವಿಸುತ್ತದೆ. ಆ ಕಾರನ್ನು ಅಮೆರಿಕದ ಫೋರ್ಡ್ ಕಂಪನಿಗೆ ಮಾರಲು ಕೇಳಿದಾಗ ಆ ಕಂಪನಿಯು ಅವಮಾನ ಮಾಡುತ್ತದೆ. ನಂತರ ಭಾರತಕ್ಕೆ ಬಂದು ಇಂಡಿಕಾ ಕಾರನ್ನು ಪರಿಚಯಿಸಿದಾಗ ಯಶಸ್ಸು ಕಾಣುತ್ತಾರೆ.

ನಂತರ ತುಂಬಾ ಕಂಪನಿಯನ್ನು ಖರೀದಿ ಮಾಡಿದ್ದಾರೆ. ಇಂಗ್ಲೆಂಡ್ ಗೆ ಸೇರಿದ ಟಾಟಾ ಟೀ ಯನ್ನು ಟಾಟಾ ಜೊತೆ ಸೇರಿಸಿದ್ದಾರೆ.ಈ ಟೀ ಪ್ರಪಂಚದಲ್ಲೀ 2ನೇ ಸ್ಥಾನವನ್ನು ಪಡೆದಿದೆ. ಈ ರೀತಿ 22ದೇಶಗಳ ಕಂಪನಿಗಳನ್ನು ಖರೀದಿ ಮಾಡಿ ಟಾಟಾ ಕಂಪನಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ದಿದ್ದಾರೆ.ಒಂದು ಕಾಲದಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟಿಷರಿಗೆ ಕೆಲಸವನ್ನು ಕೊಡುತ್ತಿದ್ದಾರೆ ರತನ್ ಟಾಟಾ.

ರತನ್ ಟಾಟಾ ಅವರಿಗೆ 84 ವರ್ಷ ವಯಸ್ಸಾಗಿದ್ದು ಕೂಡ ಇನ್ನೂ ಮದುವೆ ಆಗಿಲ್ಲ ಇದಕ್ಕೆ ಕಾರಣವೇನೆಂದು ಕೇಳಿದಾಗ ರತನ್ ಟಾಟಾ ಅವರು ಕೊಟ್ಟ ಉತ್ತರ ಹೀಗಿತ್ತು. ರತನ್ ಟಾಟಾ ಅವರು10 ವರ್ಷ ಇದ್ದಾಗಲೇ ತಂದೆ ತಾಯಿಯಿಂದ ದೂರ ಆಗುತ್ತಾರೆ.ಈ ಕಾರಣದಿಂದ ಅವರು ಅವರ ಅಜ್ಜಿಯ ಹತ್ತಿರ ಬೆಳೆಯುತ್ತಾರೆ. ಅಮೆರಿಕಾದ ಕಾರ್ನೆಲ್ ಯುನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಾರೆ. ತದನಂತರ ಅಮೇರಿಕಾದಲ್ಲಿಯೇ 2 ವರ್ಷ ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಾರೆ. ಅಮೆರಿಕಾದಲ್ಲಿ ಕೆಲಸ ಮಾಡುವ ರತನ್ ಟಾಟಾ ಅವರಿಗೆ ಅಮೇರಿಕನ್ ಹುಡುಗಿಯ ಮೇಲೆ ಪ್ರೀತಿಯಾಗುತ್ತೆ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ ಮತ್ತು ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ಅದೇ ಸಮಯಕ್ಕೆ ರತನ್ ಟಾಟಾ ಅವರ ಅಜ್ಜಿಗೆ ಹುಷಾರಿರುವುದಿಲ್ಲ ತಕ್ಷಣ ಭಾರತಕ್ಕೆ ಮರಳ ಬೇಕಾದ ಪರಿಸ್ಥಿತಿ ಬರುತ್ತೆ.

ರತನ್ ಟಾಟಾ ಅವರು ಅಮೇರಿಕಾದ ತನ್ನ ಪ್ರೇಯಸಿಯ ಬಳಿ ಭಾರತಕ್ಕೆ ಹೋಗಿ ಇಬ್ಬರು ಮದುವೆಯಾಗಿ ಸೆಟಲ್ ಆಗೋಣ ಎಂದು ಹೇಳುತ್ತಾರೆ ಆದರೆ ಆ ಹುಡುಗಿ ಇಂಡಿಯಾಗೆ ಬರಲು ಒಪ್ಪುವುದಿಲ್ಲ. ರತನ್ ಟಾಟಾ ಗೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಬಿಟ್ಟು ಹೋಗಲು ಮನಸ್ಸಾಗುವುದಿಲ್ಲ. ಇನ್ನೊಂದು ಕಡೆ ತನ್ನ ಅಜ್ಜಿಯನ್ನು ಬಿಟ್ಟು ಪ್ರೇಯಸಿಯ ಜೊತೆ ಅಮೇರಿಕಾದಲ್ಲಿ ಮದುವೆಯಾಗಲು ಕೂಡ ಟಾಟಾಗೆ ಮನಸ್ಸಾಗುವುದಿಲ್ಲ. ಆಗ ರತನ್ ಟಾಟಾ ಪ್ರೇಯಸಿಯ ಜೊತೆ ಬ್ರೇಕಪ್ ಮಾಡಿಕೊಂಡು ಅಮೇರಿಕಾದಿಂದ ಭಾರತಕ್ಕೆ ಬರುತ್ತಾರೆ. ತನ್ನ ಮೊದಲ ಪ್ರೀತಿ ಹಾಗೂ ಮೊದಲ ಗೆಳತಿಯ ನೆನಪಿನಲ್ಲಿಯೇ ರತನ್ ಟಾಟಾ ಅವರು ಜೀವನವನ್ನು ಸಾಗಿಸುತ್ತಿದ್ದಾರೆ. ತನ್ನ 84 ನೇ ವಯಸ್ಸಿನಲ್ಲಿ ಕೂಡಾ ರತನ್ ಟಾಟಾ ಅವರು ತನ್ನ ಮೊದಲ ಗೆಳತಿ ಹಾಗೂ ಮೊದಲ ಪ್ರೀತಿಯನ್ನು ನೆನಪಿನಲ್ಲಿಟ್ಟುಕೊಂಡಿರುವುದು ತುಂಬಾ ವಿಶೇಷ.

Leave a Comment

error: Content is protected !!