ಗಂಡ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯೋದನ್ನ ನೋಡೋಕೆ ಆಗದೆ ಛಲಗಾರ್ತಿ ಈ ಹಳ್ಳಿ ಹುಡುಗಿ ಮಾಡಿದ್ದೇನು ಗೊತ್ತಾ

ಜೀವನದಲ್ಲಿ ಒಂದು ಸ್ಪಷ್ಟವಾದ ಗುರಿ ಆ ಗುರಿಯನ್ನು ಸಾಧಿಸಲು ಬೇಕಾದ ಪರಿಶ್ರಮ ಸಾಮರ್ಥ್ಯ ನಮ್ಮಲ್ಲಿ ಇದ್ದರೆ ಏನನ್ನು ಬೇಕಾದರೂ ಸಾಧಿಸಹುದು. ಇಂದು ನಾವು ಒಬ್ಬ ಸಾಮಾನ್ಯ ಪೊಲೀಸ್ ಕಾನಸ್ಟೇಬಲ್ ನ ಹೆಂಡತಿ ಓರ್ವ ಧಕ್ಷ ಐಪಿಎಸ್ ಅಧಿಕಾರಿ ಆದರು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

ತಮಿಳುನಾಡಿನ ತಿಂಡಿಕಲ್ ಎಂಬ ಗ್ರಾಮದಲ್ಲಿ ಜನಿಸಿದ ಅಂಬಿಕಾ ಇವರಿಗೆ ಅತಿ ಚಿಕ್ಕ ವಯಸ್ಸಿನಲ್ಲೇ ಒಬ್ಬ ಪೊಲೀಸ್ ಪೇದೆಯ ಜೊತೆಗೆ ಅಂಬಿಕಾ ಅವರ ತಂದೆ ತಾಯಿ ವಿವಾಹ ಮಾಡುತ್ತಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜೀವನ ಸಾಗಿಸುತ್ತಿದ್ದ ಅಂಬಿಕಾ ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳ ತಾಯಿ ಕೂಡ ಆಗುತ್ತಾರೆ.

ಎಂದಿನಂತೆ ಅಂಬಿಕಾ ಅವರ ಪತಿ ಕೆಲಸಕ್ಕೆ ಹೋಗಿರುತ್ತಾರೆ ಮಧ್ಯಾಹ್ನದ ಊಟಕ್ಕೆ ಅವರು ಬಾರದೆ ಇದ್ದಾಗ ತಾವೇ ಪತಿಗೆ ಊಟ ತೆಗೆದುಕೊಂಡು ಹೋಗುತ್ತಾರೆ. ಹಾಗೆ ಹೋದಾಗ ಅಲ್ಲಿ ಅವರು ತನ್ನ ಪತಿ ಕೆಲವು ಪೇದೆಗಳ ಜೊತೆ ಪೊಲೀಸ್ ಪರೇಡ್ ನಲ್ಲಿ ನಿರತರಾಗಿದ್ದರು ಹಾಗೂ ವೇದಿಕೆಯ ಮೇಲೆ ಇದ್ದ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಾ ಇದ್ದರು. ಇದನ್ನು ಕಂಡು ಅಂಬಿಕಾ ಅಚ್ಚರಿ ಪಡುತ್ತಾರೆ. ಇದನ್ನು ಕಂಡಿದ್ದ ಅಂಬಿಕಾ ಅವರಿಗೆ ಬೇಜಾರಾಗುತ್ತೆ ಹಾಗೂ ರಾತ್ರಿ ಕನಸಲ್ಲಿ ಕೂಡಾ ತನ್ನ ಪತಿ ಇನ್ನೊಬ್ಬರಿಗೆ ಸೆಲ್ಯೂಟ್ ಹೊಡೆಯುತ್ತಿರುವ ದೃಶ್ಯ ಕಾಣುತ್ತದೆ.

ಬೆಳಿಗ್ಗೆ ಎದ್ದಾಗ ಅಂಬಿಕಾ ತನ್ನ ಪತಿಗೆ ನೀವು ಯಾಕೆ ಅವರಿಗೆ ಸೆಲ್ಯೂಟ್ ಹೊಡೆಯುತ್ತಾ ಇದ್ದೀರಿ ಎಂದು ಕೇಳುತ್ತಾರೆ ಅದಕ್ಕೆ ಅವರ ಪತಿ ಅವರು ನನ್ನ ಮೇಲಧಿಕಾರಿಗಳು ಅವರಿಗೆ ಗೌರವ ಸೂಚಿಸುವ ಸಲುವಾಗಿ ಸೆಲ್ಯೂಟ್ ಹೊಡೆಯುತ್ತಾ ಇದ್ದೆ ಎನ್ನುತ್ತಾರೆ.

ತಕ್ಷಣವೇ ಅಂಬಿಕಾ ಅವರು ತಾನು ಕೂಡ ಎಪಿಎಸ್ ಆಗಬೇಕು ಎಂದು ತಮ್ಮ ಮನದ ಆಸೆ ಹೇಳಿದಾಗ ಅವರ ಪತಿ ಆಗಬಹುದು ಆದರೆ ಅದಕ್ಕೆ ಪದವಿ ಪೂರ್ಣ ಮಾಡಿರಬೇಕು. ಆದರೆ ನಿಂದು ಹತ್ತನೇ ತರಗತಿ ಕೂಡ ಪೂರ್ಣ ಆಗಿಲ್ಲ ಎನ್ನುತ್ತಾರೆ. ಅದಕ್ಕೆ ಅಂಬಿಕಾ ನಾನು ಹತ್ತನೇ ತರಗತಿ ಪೂರ್ತಿ ಮಾಡಿ ಐಪಿಎಸ್ ಆಗಲು ಬೇಕಾದ ಎಲ್ಲ ಪದವಿಗಳನ್ನು ಓದುತ್ತೇನೆ ಎಂದು ಹೇಳಿ ಕೆಲವೊಂದು ಪರೀಕ್ಷೆಗಳನ್ನು ಸಹ ಬರೆಯುತ್ತಾರೆ. ಅವುಗಳಲ್ಲಿ ಒಂದೆರಡು ಪರೀಕ್ಷೆಗಳಲ್ಲಿ ಫೇಲ್ ಕೂಡ ಆಗ್ತಾರೆ ಆದರೂ ಛಲ ಬಿಡದೇ ಓದಿ, ಪತಿಯ ಸಹಾಯ ಸಹಕಾರದಿಂದ ಐಪಿಎಸ್ ಪರೀಕ್ಷೆ ಬರೆದು ಅಧಿಕಾರಿ ಕೂಡ ಆಗುತ್ತಾರೆ.

ಪ್ರಸ್ತುತ ಅಂಬಿಕಾ ಅವರು ದೆಹಲಿಯಲ್ಲಿ ಐಪಿಎಸ್ ಅಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತ ಇದ್ದಾರೆ ಹಾಗೂ ಅರ್ಧದಲ್ಲೇ ಓದು ಬಿಟ್ಟ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಸಹ ಮಾಡುತ್ತಾ ಇದ್ದಾರೆ.
ನಮ್ಮಲ್ಲಿ ಗುರಿ, ಪರಿಶ್ರಮ, ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅಂಬಿಕಾ ಅವರಂತಹ ದಕ್ಷ ಐಪಿಎಸ್ ಅಧಿಕಾರಿಗಳೇ ಜೀವಂತ ಉದಾಹರಣೆ.

Leave a Comment

error: Content is protected !!