Chanakya Neethi: ಯೌವನದಲ್ಲಿ ಈ ತಪ್ಪುಗಳನ್ನು ಯಾವತ್ತೂ ಮಾಡ್ಬೇಡಿ. ಆಮೇಲೆ ಪಶ್ಚಾತ್ತಾಪ ಪಡ್ತೀರಾ.

Inspirational ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಯೌವನ ಎನ್ನುವುದು ಆತನ ಉದ್ಧಾರವನ್ನು ಅಥವಾ ಗ್ರಹಚಾರವನ್ನು ನಿರ್ಧಾರ ಮಾಡುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥದಲ್ಲಿ ಹೇಳಲಾಗುತ್ತದೆ. ಹೀಗಾಗಿ ಆ ಯವ್ವನದಲ್ಲಿ ಯುವಕರು ಕೆಲವೊಂದು ತಪ್ಪುಗಳನ್ನು ಮಾಡಬಾರದು, ಅದರ ಕುರಿತಂತೆ ಚಾಣಕ್ಯ ಗ್ರಂಥದಲ್ಲಿ(Chanakya Gruntha) ಉಲ್ಲೇಖಿಸಿರುವಂತೆ ತಿಳಿಯೋಣ ಬನ್ನಿ.

ಮೊದಲಿಗೆ ಯುವಕರಲ್ಲಿ ಆಲಸ್ಯ ಇರಬಾರದು ಇದು ಅವರ ಪ್ರಗತಿ ಹಾಗೂ ಅಭಿವೃದ್ಧಿಗೆ ಅವರೇ ತೊಡಕು ಮಾಡಿಕೊಂಡಂತಾಗುತ್ತದೆ. ಎರಡನೆಯದಾಗಿ ಅವರಲ್ಲಿ ಕಾ’ಮ ಇರಬಾರದು. ಯವ್ವನದಲ್ಲಿ(Adulthood) ಅವರು ತಪಸ್ವಿಯಂತೆ ಇರಬೇಕು ಇಂತಹ ಆಕರ್ಷಣೆಗಳಿಂದ ದೂರವಿರಬೇಕು. ಮೂರನೇದಾಗಿ ಯುವಕರು ತಮ್ಮ ಕೋಪವನ್ನು ನಿಯಂತ್ರಿಸಬೇಕು ಯಾಕೆಂದರೆ ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಸಾಕಷ್ಟು ದೊಡ್ಡ ಮಟ್ಟದ ವ್ಯಕ್ತಿ ಪರಿಣಾಮವನ್ನು ಜೀವನದಲ್ಲಿ ಬೀರಬಹುದು.

Chanakya

ನಾಲ್ಕನೇದಾಗಿ ಕೆಟ್ಟ ಚಟಗಳ ಅಭ್ಯಾಸವನ್ನು ಸಂಪೂರ್ಣವಾಗಿ ಯೌವನದಲ್ಲಿ ತೊರೆಯಬೇಕು. ಇದರಿಂದಾಗಿ ನಿಮ್ಮ ಹಣ ಹಾಗೂ ಅದರಿಂದ ಹಾಳು ಮಾಡಿಕೊಂಡಂತಹ ಸಮಯ ಎರಡು ಕೂಡ ನಷ್ಟವಾಗುತ್ತದೆ. 5ನೇದಾಗಿ ನಿಮ್ಮ ಯೌವ್ವನ ನಿಮ್ಮ ಸಹವಾಸ ಯಾರ ಜೊತೆ ಇದೆ ಎನ್ನುವುದರ ಆಧಾರದ ಮೇಲೆ ಅದು ಚೆನ್ನಾಗಿರುತ್ತದೆಯೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ ಹೀಗಾಗಿ ಸಹವಾಸ ಚೆನ್ನಾಗಿರಲಿ. 6ನೇದಾಗಿ ಯಾವುದೇ ಕೆಲಸ ಮಾಡುವಾಗ ನೀವು ನಿರ್ಲಕ್ಷದಿಂದ ಕೆಲಸ ಮಾಡಬೇಡಿ ಯಾಕೆಂದರೆ ಇದು ಮುಂದಿನ ದಿನಗಳಲ್ಲಿ ನಿಮ್ಮ ವೈಯಕ್ತಿಕ ಜೀವನದ ಮೇಲೆ ಕೂಡ ಪರಿಣಾಮ ಬೀರುವಂತಹ ಸಾಧ್ಯತೆ ಇರುತ್ತದೆ.

ಏಳನೇದಾಗಿ ದುರಾಸೆ(Greed) ಎನ್ನುವುದು ಇನ್ನಷ್ಟು ಬೇಕು ಎಂಬ ಯೋಚನೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ ಹಾಗೂ ಅದರಿಂದ ಕೆಟ್ಟ ಕೆಲಸಗಳನ್ನು ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ ಹೀಗಾಗಿ ದುರಾಸೆಯನ್ನು ಹೊಂದಬೇಡಿ. 8ನೇದಾಗಿ ಅಲಂಕಾರ. ನೈಜವಾದದ್ದು ಏನಿದೆಯೋ ಅದನ್ನೇ ಹೊಂದಿರಿ ಅಲಂಕಾರದಿಂದ ಕೆಲ ದಿನಗಳ ಮಟ್ಟಿಗೆ ಬೇರೆಯವರಿಗೆ ನೀವು ಚೆನ್ನಾಗಿ ಕಾಣಿಸಬಹುದು ಆದರೆ ಅದು ಶಾಶ್ವತವಲ್ಲ. 9ನೇದಾಗಿ ಆನಂದ ಹಾಗೂ ಮನರಂಜನೆ. ಜೀವನದಲ್ಲಿ ಇವುಗಳು ಇರಬೇಕು ನಿಜ ಆದರೆ ಅತಿಯಾದರೆ ಅದು ನಿಮ್ಮ ಜೀವನಕ್ಕೆ ಖಂಡಿತವಾಗಿ ಪರಿಣಮಿಸಬಹುದು. ಕೊನೆಯದಾಗಿ ಸಮಯವನ್ನು ಪೋಲು ಮಾಡಬೇಡಿ ಯಾಕೆಂದರೆ ಯೌವನದ ಸಮಯಗಳು ಅತ್ಯಂತ ಅವಶ್ಯಕ ನಿಮ್ಮ ಭವಿಷ್ಯದ ದೃಷ್ಟಿಯಿಂದ. ಹೀಗಾಗಿ ಅವುಗಳನ್ನು ಸರಿಯಾಗಿ ಗೌರವ ಕೊಟ್ಟು ಖರ್ಚು ಮಾಡಿ.

Leave a Comment

error: Content is protected !!