ಮನೆಯಲ್ಲಿ ಪುರಿ ಮಾಡುವಾಗ ಫುಲ್ ಉಬ್ಬಬೇಕೆ? ಇಲ್ಲಿದೆ ಸಿಂಪಲ್ ಉಪಾಯ

ಪೂರಿ ಕರಿದ ಪದಾರ್ಥಗಳಲ್ಲಿ ಒಂದು. ಇದನ್ನು ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಮಾಡಿ ಸವಿಯುತ್ತಾರೆ. ಆದರೆ ಎಲ್ಲರಿಗೂ ಸರಿಯಾದ ಹದ ಸಿಗುವುದಿಲ್ಲ. ಕೆಲವರು ಮಾಡುವ ಪೂರಿ ಕರಿದಾಗ ಉಬ್ಬುತ್ತದೆ. ಆದರೆ ಕೆಲವರು ಮಾಡುವ ಪೂರಿ ಉಬ್ಬುವುದಿಲ್ಲ. ನಾವು ಇಲ್ಲಿ ರುಚಿ ರುಚಿಯಾದ ಚೆನ್ನಾಗಿ ಉಬ್ಬುವ ಪುರಿ ಮತ್ತು ಅದಕ್ಕೆ ಚೆನ್ನಾಗಿರುವ ಬಾಜಿಯನ್ನು ಮಾಡುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪೂರಿಯನ್ನು ಮಾಡಲು ಕೆಲವರು ಗೋಧಿಹಿಟ್ಟನ್ನು ತೆಗೆದುಕೊಳ್ಳುತ್ತಾರೆ. ಆದರೆ ಪೂರಿ ಚೆನ್ನಾಗಿ ಉಬ್ಬಬೇಕು ಎಂದರೆ ಮೈದಾಹಿಟ್ಟನ್ನು ತೆಗೆದುಕೊಳ್ಳಬೇಕು. ಮೊದಲು  ಮೊದಲು ಮೈದಾಹಿಟ್ಟನ್ನು ಚೆನ್ನಾಗಿ ಜರಡಿಯಲ್ಲಿ ಸಾಣಿಸಿ ಕೊಳ್ಳಬೇಕು. ಮೊದಲು 3 ಕಪ್ ಮೈದಾಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ  ಅದಕ್ಕೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಚೆನ್ನಾಗಿ ಕಲಸಬೇಕು.  ಕೊನೆಯದಾಗಿ ಸ್ವಲ್ಪ ಎಣ್ಣೆಯನ್ನು ಸವರಿ ಇಡಬೇಕು.

ಅದಕ್ಕೆ ಬಾಜಿ ಮಾಡಿದರೆ ಕಾಂಬಿನೇಷನ್ ಚೆನ್ನಾಗಿರುತ್ತದೆ. ಬಾಜಿ ಮಾಡುವ ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸು ಮತ್ತು ಬೆಳ್ಳುಳ್ಳಿಯನ್ನು ಹಾಕಬೇಕು. ಅದಕ್ಕೆ ಬೇವಿನಸೊಪ್ಪು ಮತ್ತು ಇಂಗು ಹಾಕಬೇಕು. ನಂತರ ಅದಕ್ಕೆ ಈರುಳ್ಳಿ ಹಾಕಿ ಅದು ಚೆನ್ನಾಗಿ ಫ್ರೈ ಆದಮೇಲೆ ಅದಕ್ಕೆ ಅರಿಶಿನ ಹಾಕಿ ನಂತರ ಟೊಮೆಟೊ ಹಾಕಬೇಕು. ನಂತರ ಬೇಯಿಸಿದ ಆಲೂಗಡ್ಡೆ ಹಾಕಬೇಕು. ಅದಕ್ಕೆ ಸ್ವಲ್ಪ ಉಪ್ಪು ಹಾಕಬೇಕು.

ನಂತರ ಸ್ವಲ್ಪ ನೀರು ಹಾಕಬೇಕು. ಅದರ ಮೇಲೆ ಸ್ವಲ್ಪ ಕುತ್ತುಂಬರಿ ಸೊಪ್ಪನ್ನು ಹಾಕಬೇಕು. ಸ್ವಲ್ಪ ಕುದಿಸಿದ ನಂತರ ಬಿಸಿ ಬಿಸಿಯಾದ ಬಾಜಿ ತಯಾರಿ ಆಗುತ್ತದೆ. ಈಗ ಕಲಸಿಟ್ಟ ಪೂರಿಯ ಹಿಟ್ಟನ್ನು ಸಣ್ಣ ಸಣ್ಣದಾಗಿ ಉಂಡೆಯನ್ನು ಮಾಡಿಕೊಳ್ಳಬೇಕು. ನಂತರ ಹುಡಿಹಿಟ್ಟನ್ನು ಹಾಕಿ ಪೂರಿಯ ಗಾತ್ರಕ್ಕೆ ವರೆಯಬೇಕು. ಇದನ್ನು ಕಾದ ಎಣ್ಣೆಗೆ ಹಾಕಿ ಕರಿದರೆ ಬಹಳ ಚೆನ್ನಾಗಿ ಉಬ್ಬುತ್ತದೆ. ಈಗ ಬಿಸಿ ಬಿಸಿಯಾದ ಪೂರಿಗೆ ಬಾಜಿಯನ್ನು ಹಚ್ಚಿಕೊಂಡು ತಿಂದರೆ ತಿನ್ನಲು ಬಹಳ ಸವಿಯಾಗುತ್ತದೆ.

Leave a Comment

error: Content is protected !!