ನೀವು ಏನಾದ್ರು ಲಟಿಕೆ ತಗೆಯುತ್ತಿದ್ರೆ ಈ ಇಂಟ್ರೆಸ್ಟಿಂಗ್ ವಿಚಾರ ಓದಲೇಬೇಕು

ಲಟಿಕೆ ತೆಗೆಯುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಬಹಳಷ್ಟು ಜನರಿಗೆ ಆಗಾಗ ಲಟಿಕೆ ತೆಗೆಯುವುದು ಚಟವಾಗಿ ಇರುತ್ತದೆ. ಆದರೂ ಒಂದಲ್ಲ ಒಂದು ದಿನ ಎಲ್ಲರೂ ಲಟಿಕೆ ತೆಗೆದೇ ಇರುತ್ತಾರೆ. ಆದರೆ ಹೀಗೆ ಲಟಿಕೆ ತೆಗೆದಾಗ ನಮ್ಮ ಮನೆಗಳಲ್ಲಿ ಹಿರಿಯರು ಬಯ್ಯುತ್ತಾರೆ. ಲಟಿಕೆ ತೆಗೆಯುವುದು ಒಳ್ಳೆಯದಲ್ಲ ಅದು ಅಪಶಕುನ ಎಂದು ಹೇಳುತ್ತಾರೆ. ಆದರೆ ಇದು ಅಪಶಕುನ ಹೌದೋ ಅಲ್ಲವೋ ಗೊತ್ತಿಲ್ಲ ಆದರೆ ಇದು ಮೂಳೆಗಳಿಗೆ ಅಂತೂ ತುಂಬಾ ಅಪಾಯಕಾರಿ. ನಮ್ಮ ದೇಹ ಒಂದು ಯಂತ್ರ ಇದ್ದ ಹಾಗೇ ಇದರಲ್ಲಿ ಸಹ ಹಲವಾರು ಜಾಯಿಂಟ್ ಗಳು ಇರುತ್ತವೆ. ಈ ಜಾಯಿಂಟ್ ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸೈನೋ ವೈಲ್ ಫ್ಲೂಯುಡ್ ಎಂಬ ಲಿಕ್ವಿಡ್ ಇರುತ್ತದೆ. ಯಂತ್ರಗಳಲ್ಲಿ ಗ್ರೀಸ್ ಹೇಗೆ ಕೆಲಸ ಮಾಡುತ್ತದೋ ಅದೇ ರೀತಿ ನಮ್ಮ ದೇಹದಲ್ಲಿ ಮೂಳೆಗಳ ಮಧ್ಯದಲ್ಲಿ ಈ ಲಿಕ್ವಿಡ್ ಕೆಲಸ ನಿರ್ವಹಿಸುತ್ತದೆ. ಅಂದರೆ ಮೂಳೆಗಳು ಒಂದಕ್ಕೊಂದು ತಾಗಿ ಘರ್ಷಣೆ ಆಗದಂತೆ ನೋಡಿಕೊಳ್ಳುತ್ತದೆ..

ಲಟಿಕೆ ತೆಗೆದಾಗ ಶಬ್ಧ ಬರುತ್ತದೆ. ಆದರೆ ಅದ್ಯಾಕೆ? ಯಾಕಂದ್ರೆ ಈ ಸೈನೋ ವೈಲ್ ಫ್ಲೂಯುಡ್ ನಲ್ಲಿ ಕಾರ್ಬನ್ ಡೈ ಆಕ್ಸೈಡ್ ಸಂಗ್ರಹವಾಗಿ ಇರುತ್ತದೆ. ಇದು ಒಳಗಡೆ ಗಾಳಿಯ ಗುಳ್ಳೆಗಳ ತರ ಇರುತ್ತದೆ. ಲಟಿಕೆ ತೆಗೆದಾಗ ಈ ಗುಳ್ಳೆಗಳು ಬ್ಲಾಸ್ಟ್ ಆಗಿ ಶಬ್ಧ ಬರುತ್ತದೆ.

ಒಮ್ಮೆ ಲಟಿಕೆ ತೆಗೆದಮೇಲೆ ಮತ್ತೆ ಲಟಿಕೆ ತೆಗೆದರೆ ಶಬ್ಧ ಏಕೆ ಬರಲ್ಲ? ಯಾಕಂದ್ರೆ ನಾವು ಒಮ್ಮೆ ಲಟಿಕೆ ತೆಗೆದಮೇಲೆ ಕಾರ್ಬನ್ ಡೈ ಆಕ್ಸೈಡ್ ಅಲ್ಲಿ ಇರುವುದಿಲ್ಲ. ಮತ್ತೆ ಕಾರ್ಬನ್ ಡೈ ಆಕ್ಸೈಡ್ ಅಲ್ಲಿ ಸಂಗ್ರಹ ಆಗೋಕೆ ಕನಿಷ್ಠ ಪಕ್ಷ 15 ರಿಂದ 20 ನಿಮಿಷ ಆದರೂ ಸಮಯ ಬೇಕಾಗುತ್ತದೆ. 15 ರಿಂದ 20 ನಿಮಿಷದ ನಂತರ ಲಟಿಕೆ ತೆಗೆದರೆ ಮತ್ತೆ ಶಬ್ಧ ಬರುತ್ತದೆ.

ನಾವು ಈ ತರ ಲಟಿಕೆ ತೆಗೆಯುವುದು ಅಪಾಯಕಾರಿಯೇಯಾಕೆ?
ನಾವು ಪ್ರತೀ ಬಾರಿ ಲಟಿಕೆ ತೆಗೆದಾಗ ಸೈನೋ ವೈಲ್ ಫ್ಲೂಯುಡ್ ಖಾಲಿ ಆಗುತ್ತಾ ಹೋಗುತ್ತದೆ. ಇದು ಕಡಿಮೆ ಆದಾಗ ವಯಸ್ಸಾದಂತೆ ಮೂಳೆಗಳಲ್ಲಿ ನೋವು ಹೆಚ್ಚುತ್ತದೆ. ಮೂಳೆಗಳು ಗಟ್ಟಿಯಾಗಿ ಇರದೇ ಒಂದಕ್ಕೊಂದು ತಾಗಿ ಜಜ್ಜಿ ಹೋಗಿ ಸವೆದು ಹೋಗುತ್ತವೆ. ಹಾಗಾಗಿ ಲಟಿಕೆ ತೆಗೆಯುವ ಅಭ್ಯಾಸ ಇದ್ದಲ್ಲಿ ಅದನ್ನು ನಿಲ್ಲಿಸಿ

Leave a Comment

error: Content is protected !!