ಶರೀರದ ಸುಸ್ತು ನಿಶ್ಯಕ್ತಿ ನಿವಾರಿಸಿ ದಿನವಿಡೀ ಎನರ್ಜಿ ನೀಡುವ ಸಂಜೀವಿನಿ

ಇವತ್ತಿನ ದಿನಗಳಲ್ಲಿ ನಿಶ್ಯಕ್ತಿ, ಸುಸ್ತು ತುಂಬಾ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ರಕ್ತ ಹೀನತೆ ಇರಬಹುದು . ನಮಗೆ ಏನಾದರೂ ಅತಿಯಾಗಿ ಸುಸ್ತು ನಿಶ್ಯಕ್ತಿ ಉಂಟಾಗುತ್ತ ಇದ್ದರೆ ನಾವು ನಮ್ಮ ರಕ್ತದ HB ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು. ಕೆಲವು ಔಷಧಿಗಳ ಪ್ರಭಾವದಿಂದ ಆಗಿ, ಹೆಣ್ಣುಮಕ್ಕಳಿಗೆ ಪೀರಿಯಡ್ಸ್ ಸಮಯದಲ್ಲಿ ಅತಿಯಾಗಿ ರಕ್ತಸ್ರಾವ ಆಗುವುದರಿಂದ, ಕೆಲವು ಡೆಂಗ್ಯೂ ಅಂತಹ ರೋಗಗಳು ಬಂದು ಹೋದ ನಂತರ ಸುಸ್ತು ನಿಶ್ಯಕ್ತಿ ಅತಿಯಾಗಿ ಕಾಡುವುದು. ಹೀಗಾದಾಗ ನಾವು ಕೆಲವೊಮ್ಮೆ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇದನ್ನು ಕಡೆಗಣಿಸದೆ ಸೂಕ್ತವಾದ ಔಷಧಿಯನ್ನು ಮಾಡಿಕೊಳ್ಳಬೇಕು. ದಿನವಿಡೀ ನಾವು ಸುಸ್ತು, ನಿಶ್ಯಕ್ತಿ ಇಲ್ಲದೆ ಉತ್ಸಾಹದಿಂದ ಕೆಲಸ ಮಾಡಿಕೊಂಡು ಇರಲು ಯಾವುದೇ ಅಡ್ಡಪರಿಣಾಮ ಇಲ್ಲದ ಸುಲಭವಾದ ಮನೆಮದ್ದುಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇಲ್ಲಿ ತೆಳ್ಳಗೆ ಇರುವವರಿಗೆ ಮಾತ್ರ ನಿಶ್ಯಕ್ತಿ ಆಗುತ್ತದೆ ದಪ್ಪ ಇರುವವರಿಗೆ ನಿಶ್ಯಕ್ತಿ ಉಂಟಾಗದು ಅಂತೇನೂ ಇಲ್ಲ. ನಿಜಕ್ಕೂ ತೆಳ್ಳಗೆ ಇರುವವರಿಗಿಂತ ದಪ್ಪ ಇರುವವರಿಗೆ ನಿಶ್ಯಕ್ತಿ ಉಂಟಾಗುವುದು ಹೆಚ್ಚು. ನಾವು ದಪ್ಪ ಆದ ಹಾಗೆ ನಮ್ಮ ಹೃದಯಕ್ಕೆ ತೊಂದರೆ ಹೆಚ್ಚು. ಇದರಿಂದ ಹೃದಯದ ಶಕ್ತಿ ಕುಂದುತ್ತದೆ. ಇದರಿಂದ ಅನೇಕ ಸಮಸ್ಯೆಗಳೂ ಕೂಡಾ ಉಂಟಾಗುವುದು. ನಿಷ್ಯಕ್ತಿಯನ್ನು ಹೋಗಲಾಡಿಸಿಕೊಳ್ಳಲು ಸುಲಭ ಉಪಾಯ ಎಂದರೆ ,ಒಣಗಿದ ಅಂಜೂರದ ಹಣ್ಣು ಮತ್ತು ಒಣ ದ್ರಾಕ್ಷಿ ಇವೆರಡನ್ನೂ ರಾತ್ರಿ ಚೆನ್ನಾಗಿ ತೊಳೆದು ನೆನಸಿ ಇಡಬೇಕು. ಇವೆರಡನ್ನೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಇದರಿಂದ ನಮ್ಮ ದೇಹದಲ್ಲಿನ ನಿಶ್ಯಕ್ತಿ ಕಡಿಮೆ ಆಗುವುದು. ಅಷ್ಟೇ ಅಲ್ಲದೆ ಪುರುಷರಿಗೆ ಈ ಒಂದು ಪಾನಕ ಅತ್ಯಂತ ಉಪಯುಕ್ತ. ಹೊರಗಡೆ ಕೆಲಸ ಮಾಡಿ ಬಂದಾಗ ಸಾಕಷ್ಟು ದಣಿದಿರುತ್ತಾರೆ ಆ ಸಮಯದಲ್ಲಿ ಈ ಹಣ್ಣಿನ ಪಾನಕ ಮಾಡಿ ಕೊಡುವುದರಿಂದ ಸುಸ್ತು ನಿಶ್ಯಕ್ತಿ ದೂರ ಮಾಡಿಕೊಳ್ಳಬಹುದು.

ನಾವು ಸಾಕ್ಷಶ್ಟು ರೆಡಿಮೇಡ್ ಪಾನಿಯಗಳಿಗೆ ಈಗ ದಾಸರಾಗಿದ್ದೇವೆ ಅದರ ಬದಲು ತಕ್ಷಣಕ್ಕೆ ಶಕ್ತಿ ನೀಡಬಲ್ಲ ಈ ಬೇಲದ ಹಣ್ಣಿನ ಪಾನಕ ಅತ್ಯುತ್ತಮ ಶಕ್ತಿ ವರ್ಧಕ ಎಂದೇ ಹೇಳಬಹುದು. ಬೇಲದ ಹಣ್ಣಿನ ಪಾನಕವನ್ನು ಕುಡಿಯುವುದರಿಂದ ಎಷ್ಟೇ ಸುಸ್ತು ನಿಶ್ಯಕ್ತಿ ಇದ್ದರೂ ತಕ್ಷಣವೇ ನಿವಾರಿಸಬಹುದಾದ ಗುಣ ಇದರಲ್ಲಿದೆ. ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ಬೇಲದ ಹಣ್ಣಿನ ಸಿಪ್ಪೆ ಸ್ವಲ್ಪ ಗಟ್ಟಿಯಾಗಿ ಇರುವುದು ಇದನ್ನು ತೆಂಗಿನ ಕಾಯಿ ಹಾಗೆಯೇ ಒಡೆದು ಅದರ ಒಳಗೆ ಇರುವ ಹಣ್ಣನ್ನು ತೆಗೆದುಕೊಂಡು ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡುವುದರಿಂದ ಎಂತದ್ದೆ ಸುಸ್ತು ಇದ್ದರೂ ಕೂಡಾ ಅದೆಲ್ಲ ಮಾಯವಾಗುವುದು.

Leave a Comment

error: Content is protected !!