Health Tips: ಅಸಿಡಿಟಿ ಪಿತ್ತ ಅಜೀರ್ಣಕ್ಕೆ ಇಲ್ಲಿದೆ ನೋಡಿ ಸುಲಭ ಮನೆಮದ್ದು.
Health Tips In Kannada ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಹೊಟ್ಟೆ ಸಂಬಂಧಿಸಿದಂತೆ ಆಸಿಡಿಟಿ(Acidity), ಹುಳಿತೇಗು, ಪಿತ್ತ ಹಾಗೂ ಅಜೀರ್ಣಗಳಂತಹ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಇದು ಪೂರ್ತಿ ಶಮನ ಆಗುವಂತಹ ಮದ್ದು ಕೂಡ ಸಿಗುತ್ತಿಲ್ಲ ಎಂಬುದು ಹಲವಾರು ಜನರ ಅಸಮಾಧಾನದ ಉತ್ತರವಾಗಿದೆ. ಬನ್ನಿ ಇದರ ಪರಿಹಾರಕ್ಕಾಗಿ ಇರುವಂತಹ ಮನೆ ಮದ್ದನ್ನು(Home Remedies) ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಆಸಿಡಿಟಿ ನೋಡಲು ಚಿಕ್ಕ ಆರೋಗ್ಯ ಸಮಸ್ಯೆಯ ಹಾಗೆ ಕಾಣಬಹುದು ಆದರೆ ಅದರಿಂದ ಹೃದಯ, ಮೆದುಳು(Brain) ಹಾಗೂ ಕಿಡ್ನಿ ಗಳಂತಹ ಸೂಕ್ಷ್ಮ ಅಂಗಾಂಗಗಳು ಕೂಡ ವೈಫಲ್ಯವನ್ನು ಕಂಡು ನಿಮ್ಮ ಜೀವಕ್ಕೆ ಹೆಚ್ಚು ಕಮ್ಮಿ ಆಗುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿದೆ. ಹೀಗಾಗಿ ಇದನ್ನು ಕಡೆಗಣಿಸೋದಕ್ಕೆ ಹೋಗ್ಬೇಡಿ. ಮೊದಲಿಗೆ ಪಿತ್ತದ ಬ್ಲಾಕೇಜ್ ನಿಂದ ಆಗುವಂತಹ ಸಮಸ್ಯೆಗಳನ್ನು ನೋಡುವುದಾದರೆ ಅದರಿಂದಾಗಿ ಲಕ್ವಾ ಹೊಡೆಯುವುದು ಥೈರೊಯ್ಡ್ ಗ್ರಂಥಿಯಲ್ಲಿ ಅಡೆತಡೆಗಳು ಉಂಟಾಗುವುದು ಹೃದಯ ಕಿಡ್ನಿ ಸೇರಿದಂತೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.

ಪುಂಡಿ ಸೊಪ್ಪು ಅಥವಾ ಗೊರಂಗು
ಸೊಪ್ಪನ್ನು ಒಣಗಿಸಿ. ಬೇಲದ ಹಣ್ಣು(Belada Hannu) ಅದರ ತಿರುಳನ್ನು ಹಾಗೂ ಆ ಸೊಪ್ಪನ್ನು ಎರಡನ್ನು ಕೂಡ ಸ್ಟೀಲ್ ಪಾತ್ರೆಯಲ್ಲಿ ಹಾಕಿ. ನಂತರ ಎರಡು ಒಣಗಿದ ನಂತರ ಎರಡನ್ನು ಸಪರೇಟ್ ಆಗಿ ಪುಡಿ ಮಾಡಬೇಕು. ನಂತರ ಈ ಪುಡಿಯನ್ನು ಪ್ರತಿದಿನ ಊಟ ಮಾಡುವ ಸ್ವಲ್ಪ ಸಮಯದ ಮುಂಚೆ ಎರಡನ್ನು ಒಂದೊಂದು ಚಮಚ ಸೇವಿಸಬೇಕು.
ಇದರಿಂದಾಗಿ ಪಿತ್ತ ಅಸಿಡಿಟಿ(Acidity) ಅಜೀರ್ಣ ಸಮಸ್ಯೆ ಎಲ್ಲವೂ ಕೂಡ ಶಮನವಾಗುತ್ತದೆ. ಹುಳಿತೇಗು ಹಾಗೂ ವಾಂತಿಯಿಂದ ಬಳಲುತ್ತಿರುವವರೆಗೂ ಕೂಡ ಇದೊಂದು ರಾಮಬಾಣದಂತಿರುವ ಮದ್ದು ಎಂದರೆ ತಪ್ಪಾಗಲಾರದು. ಒಂದು ವೇಳೆ ಇಂತಹ ಸಮಸ್ಯೆಯಿಂದ ಯಾರಾದರೂ ಬಳಲುತ್ತಿದ್ದರೆ ಈ ಸುಲಭ ಮನೆಮದ್ದನ್ನು ಅವರಿಗೆ ಬಳಸಲು ಸಲಹೆ ನೀಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.