ಹಾಸನದ ಫಾರ್ಮ್ ಹೌಸ್ ನಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಯಶ್ ತಂದೆ ತಾಯಿಗೆ ಯಶ್ ಉಡುಗೊರೆಯಾಗಿ ಕೊಟ್ಟ ವಾಹನಗಳೆಷ್ಟು ಗೊತ್ತಾ

ಯಶ್ ಅವರು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಅವರ ತಂದೆತಾಯಿ ಅವರ ಪರಿಶ್ರಮವೇ ಕಾರಣ. ಒಳ್ಳೆ ಬ್ಯಾಗ್ರೌಂಡ್ ಅಥವಾ ಆಸ್ತಿ ಅಂತಸ್ತು ಇಟ್ಟುಕೊಂಡು ಯಾರು ಬೇಕಾದರೂ ಚಿತ್ರರಂಗದಲ್ಲಿ ಹೀರೋ ಆಗುತ್ತಾರೆ. ಆದರೆ ಯಾವುದೇ ರೀತಿಯ ಬ್ಯಾಗ್ರೌಂಡ್ ಅಥವಾ ಶ್ರೀಮಂತಿಕೆಯ ಮನೆತನದಲ್ಲಿ ಹುಟ್ಟಿರದ ವ್ಯಕ್ತಿ ಚಿತ್ರ ರಂಗದಲ್ಲಿ ನಂಬರ್ ಓನ್ ಸ್ಥಾನ ಗಳಿಸುವುದು ಸುಲಭದ ಮಾತಲ್ಲ. ಈ ಅಸಾಧ್ಯದ ಕೆಲಸವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿ ತೋರಿಸಿದ್ದಾರೆ.

ಯಶ್ ಅವರ ಒಳ್ಳೆಯ ಗುಣ ಏನೆಂದರೆ ತಾವು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಸಹ ತಾವು ಬೆಳೆದುಬಂದ ಮೂಲವನ್ನು ಇನ್ನೂ ಮರೆತಿಲ್ಲ. ತಮ್ಮ ತಂದೆ ತಾಯಿ ಪಟ್ಟ ಪರಿಶ್ರಮ ಹಾಗೂ ಕಷ್ಟವನ್ನು ಇನ್ನೂ ತಲೆಯಲ್ಲಿಟ್ಟುಕೊಂಡಿದ್ದಾರೆ ಮತ್ತು ತಮ್ಮ ತಂದೆ ತಾಯಿಯನ್ನು ಕೊನೆಯ ಕಾಲದಲ್ಲಿ ರಾಯಲ್ಲಾಗಿ ನೋಡಿಕೊಳ್ಳುತ್ತಿದ್ದಾರೆ. ತನ್ನ ತಂದೆ ತಾಯಿಗೆ ವಾಸ ಮಾಡಲು ಹಾಸನದಲ್ಲಿ ದೊಡ್ಡದಾದ ಫಾರ್ಮೋಸ ವೊಂದನ್ನು ಖರೀದಿ ಮಾಡಿದ್ದ‍ರೆ.

ಹಾಸನದಲ್ಲಿ ಇರುವ ಯಶ್ ಅವರ ಫಾರ್ಮ್ ಹೌಸ್ ಸುಮಾರು ಐದು ಕಿಲೋಮೀಟರ್ ವಿಸ್ತೀರ್ಣದಲ್ಲಿದೆ.ತುಂಬಾ ವಿಶಾಲವಾದ ಫಾರ್ಮೋಸ ನಲ್ಲಿ ಯಶ್ ಅವರ ತಂದೆ ತಾಯಿ ಇಬ್ಬರೇ ವಾಸಮಾಡುತ್ತಾರೆ ಯಶ್ ಅವರು ಆಗಾಗ ಬಿಡುವಿನ ಸಮಯದಲ್ಲಿ ಹಾಸನದ ಹಾಸನದ ಫಾರ್ಮ್ ಹೌಸ್ ಗೆ ಬಂದು ತಂದೆ ತಾಯಿ ಜೊತೆ ಉಳಿದುಕೊಳ್ಳುತ್ತಾರೆ. ಈ ಒಂದು ಫಾರ್ಮ್ ಹೌಸ್ ತುಂಬಾ ವಿಶಾಲವಾಗಿದ್ದು ಕಾಡಿನ ಮಧ್ಯವಿದೆ.

ದಟ್ಟವಾದ ಅರಣ್ಯದ ಮಧ್ಯದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಯಶ್ ಅವರ ತಂದೆ ತಾಯಿ ಒಂಟಿಯಾಗಿ ಜೀವನ ನಡೆಸುತ್ತಿಲ್ಲ. ಯಶ್ ಅವರ ತಂದೆ ತಾಯಿಯನ್ನು ನೋಡಿಕೊಳ್ಳಲಿಕ್ಕೆ ಅಲ್ಲಿ ಕೈ ಕಾಲಿಗೆ ಆಳುಗಳಿದ್ದಾರೆ. ಅಡಿಗೆ ಮಾಡಲಿಕ್ಕೆ ಅಡುಗೆ ಭಟ್ಟರಿಂದ ಮನೆ ಕೆಲಸ ಮಾಡಲಿಕ್ಕೆ ಕೆಲಸದವರಿದ್ದಾರೆ. ಫಾರ್ಮ್ ಹೌಸ್ ಹಾಗೂ ಕೃಷಿ ಕೆಲಸ ಮಾಡಲು ಹತ್ತಾರು ಆಳುಗಳು ಹಾಗೆ ಕಾರುಗಳನ್ನು ಓಡಿಸಲು ಡ್ರೈವರ್ ಕೂಡ ಇದ್ದಾರೆ. ಫಾರ್ಮ್ ಹೌಸ್ ನಲ್ಲಿರುವ ತಂದೆತಾಯಿಗೆ ಸ್ವಲ್ಪ ತೊಂದರೆಯಾದರೂ ಕೂಡ ಯಶ್ ಅವರು ತಕ್ಷಣ ಬಂದು ನೆರವಾಗುತ್ತಾರೆ.

ಯಶ್ ಅವರು ತಮ್ಮ ತಂದೆಗೆ ಫಾರ್ಮಹೌಸ್ನಲ್ಲಿ ಓಡಾಡಲಿಕ್ಕೆ ಅಂತಾನೆ ಮಹಿಂದ್ರಾ ಕಂಪನಿಯ ಥಾರ್ ಜೀಪ್ ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಈಜಿಪ್ತ್ ನ ಬೆಲೆ ಸುಮಾರು ಹದಿನೈದು ರಿಂದ ಇಪ್ಪತ್ತು ಲಕ್ಷ. ಇನ್ನು ಯಶ್ ಅವರ ತಾಯಿಗೆ ಸ್ವಲ್ಪ ಕಾಲು ನೋವು ಕಾಣಿಸಿಕೊಂಡಿತ್ತು ತಮ್ಮ ತಾಯಿಗೆ ಓಡಾಡಲಿಕ್ಕೂ ಆಗುವುದಿಲ್ಲ ಅಂತ ಯಶ್ ದುಬಾರಿ ಬೆಂಜ್ ಕಾರ್ ಗಿಫ್ಟ್ ಆಗಿ ನೀಡಿದ್ದಾರೆ. ಈ ಬೆನ್ಜ್ ಕಾರಿನ ಬೆಲೆ 50 ಲಕ್ಷ ರೂಪಾಯಿ ಗಳು. ಅಷ್ಟೇ ಅಲ್ಲದೆ ಫಾರ್ಮ್ ಹೌಸ್ ನಲ್ಲಿ ಕೃಷಿಗೆ ಬೇಕಾದ ವಾಹನಗಳಾದ ಬೊಲೆರೋ ಜೀಪ್ , ಅತ್ಯಾಧುನಿಕ ಟ್ರ್ಯಾಕ್ಟರ್ ಮತ್ತು ದುಬಾರಿ ಜೆಸಿಬಿಗಳನ್ನು ಕೂಡ ಯಶ್ ಅವರು ಖರೀದಿ ಮಾಡಿ ಫಾರ್ಮ್ ಹೌಸ್ ಗೆ ತರಿಸಿದ್ದಾರೆ. ಹಾಗೆ ಫಾರ್ಮ್ ಹೌಸ್ ನಲ್ಲಿ ತಮ್ಮ ತಂದೆ ತಾಯಿಗೆ ವಾಸಮಾಡಲು ದೊಡ್ಡದಾದ ವಿಶಾಲವಾದ ಮನೆಯೊಂದನ್ನು ಯಶ್ ಅವರು ಕಟ್ಟಿಸಿಕೊಟ್ಟಿದ್ದಾರೆ.

ಹಾಗೆಯೇ ಮುಂದಿನ ದಿನಗಳಲ್ಲಿ ಯಶ್ ಅವರು ಫಾರ್ಮ್ ಹೌಸ್ ಗೆ ಬಂದಾಗ ಅವರಿಗೆ ವೈಯಕ್ತಿಕವಾಗಿ ಜಿಮ್ ಒಂದನ್ನು ನಿರ್ಮಾಣ ಮಾಡಲಿದ್ದಾರೆ. ಇನ್ನೂ ಫಾರ್ಮ್ ಹೌಸ್ ನಲ್ಲಿರುವ ಕೆರೆ ಮತ್ತು ನೀರಾವರಿ ಅಭಿವೃದ್ಧಿ ಗಳನ್ನೆಲ್ಲಾ ಯಶ್ ಅವರು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಹಾಸನದಲ್ಲಿರುವ ಯಶ್ ಅವರ ಫಾರ್ಮ್ ಹೌಸ್ ಮನೆಯಲ್ಲಿರುವ ಸದಸ್ಯರಿಗಿಂತ ಮನೆಯ ಹೊರಗಿರುವ ವಾಹನಗಳೇ ಜಾಸ್ತಿಯಿದೆ. ಒಂದು ಕಾಲದಲ್ಲಿ ಚಿಕ್ಕದಾದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಯಶ್ ಕುಟುಂಬ ಇದೀಗ 5 ಕಿಲೋಮೀಟರ್ ದೊಡ್ಡದಾದ ಫಾರ್ಮ್ಹೌಸ್ನಲ್ಲಿ ರಾಯಲ್ಲಾಗಿ ಜೀವನ ನಡೆಸುತ್ತಿದ್ದಾರೆ.

Leave a Comment

error: Content is protected !!