ಅಪ್ಪು ಅವರನ್ನು ಕಂಡರೆ ನನಗೆ ಸ್ವಲ್ಪ ಕೂಡ ಇಷ್ಟ ಆಗ್ತಿರ್ಲಿಲ್ಲ. ಅವರನ್ನು ನೋಡಿದಾಗಲೆಲ್ಲಾ ನನಗೆ ಕೋಪ ಬರುತ್ತಿತ್ತು- ಪ್ರಶಾಂತ್ ನೀಲ್

ಪುನೀತ್ ರಾಜ್ ಕುಮಾರ್ ಅವರಂತಹ ವ್ಯಕ್ತಿಗಳು ಶತಮಾನಕ್ಕೆ ಒಬ್ಬರು. ಪುನೀತ್ ರಾಜ್ ಕುಮಾರ್ ಇಂದು ಜನರ ಮನಸ್ಸು ಅಳಿಸಲಾಗದಂತಹ ಜಾಗವನ್ನು ಗಳಿಸಿದ್ದಾರೆ.‍ ಪುನೀತ್ ರಾಜ್ ಕುಮಾರ್ ಅವರನ್ನು ಇಂದು ಹಲವಾರು ಜನರು ದೇವರ ಸ್ಥಾನದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ದೇವರ ಫೋಟೋಗಳ ಪಕ್ಕಕ್ಕೆ ಪುನೀತ್ ಅವರ ಫೋಟೋ ಇಟ್ಟು ಪೂಜಿಸುವುದನ್ನು ನಾವು ನೋಡಿದ್ದೇವೆ. ಕೇವಲ ಒಬ್ಬ ನಟನಾಗಿ ಹಣ ಆಸ್ತಿ ಸಂಪಾದನೆ ಮಾಡಿದರೆ ಮಾತ್ರ ಇಂಥ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಒಳ್ಳೆಯ ನಡತೆ ಮತ್ತು ಮನುಷ್ಯತ್ವದಿಂದ ಮಾತ್ರ ಇಂಥ ಸ್ಥಾನವನ್ನು ಗಳಿಸಲು ಸಾಧ್ಯ.

ಪುನೀತ್ ಅವರನ್ನು ದ್ವೇಷಿಸುವ ವ್ಯಕ್ತಿ ಈ ಭೂಮಿ ಮೇಲೆ ಇರೋಕೆ ಸಾಧ್ಯನೇ ಇಲ್ಲ.ಹಾಗಿದ್ದಾಗ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪುನೀತ್ ಅವರನ್ನು ದ್ವೇಷಿಸುತ್ತಿದ್ದರು ಎಂದರೆ ನಿಜಕ್ಕೂ ನಂಬಲು ಸಾಧ್ಯವಿಲ್ಲ. ಪ್ರಶಾಂತ್ ನೀಲ್ ಅವರು ಪುನೀತ್ ರನ್ನ ಯಾಕೆ ದ್ವೇಷ ಮಾಡುತ್ತಿದ್ದರು? ದ್ವೇಷ ಮಾಡುವಂತಹ ಕೆಲಸ ಅಪ್ಪು ಅವರು ಏನು ಮಾಡಿದ್ದರು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡುತ್ತಿರಬಹುದು. ಪುನೀತ್ ಅವರನ್ನು ಸಿಕ್ಕಾಪಟ್ಟೆ ದ್ವೇಷಿಸುತ್ತಿದ್ದೆ ಎಂದು ಸ್ವತಃ ಪ್ರಶಾಂತ್ ನೀಲ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಪ್ರಖ್ಯಾತ ಹೈ ಲ್ಯಾಂಡ್ ಹೋಟೆಲ್ ಪ್ರಶಾಂತ್ ನೀಲ್ ಅವರ ತಾತನದ್ದು. ಪ್ರಶಾಂತ್ ನೀಲ್ ಅವರು ಇಪ್ಪತ್ತು ವರ್ಷದ ಹುಡುಗನಿದ್ದಾಗ ಹೋಟೆಲ್ ಗೆ ಹೋಗಿ ಸಮಯ ಕಳೆಯುತ್ತಿದ್ದರು. ಆಗಿನ ಕಾಲದಲ್ಲಿ ಈ ಹೈಲೆಂಡ್ ಹೊಟೇಲ್ ಗೆ ಶಿವರಾಜ್ ಕುಮಾರ್ ಉಪೇಂದ್ರ ಪುನೀತ್ ರಾಜ್ ಕುಮಾರ್ ಅವರಂತಹ ದೊಡ್ಡ ದೊಡ್ಡ ನಟರು ಬರುತ್ತಿದ್ದರು. ಪ್ರಶಾಂತ್ ನೀಲ್ ಅವರು ಆಗ ಪ್ರತಿದಿನ ಹೋಟೆಲಿಗೆ ಹೋಗಿ ಹುಡುಗರ ಜೊತೆ ಕ್ರಿಕೆಟ್ ಆಡುತ್ತಿದ್ದರು. ಒಂದು ದಿವಸ ಪುನೀತ್ ರಾಜ್ ಕುಮಾರ್ ಅವರು ಹೈಲೆಂಡ್ ಹೋಟೆಲಿಗೆ ಶೂಟಿಂಗ್ ಎಂಥ ಬಂದಿದ್ರು.

ಆ ದಿನ ಬೆಳಿಗ್ಗೆ ಪುನೀತ್ ರಾಜ್ ಕುಮಾರ್ ಅವರ ಅಪ್ಪು ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಇಡೀ ದಿನ ಅಪ್ಪು ಅವರು ಚಿತ್ರೀಕರಣ ಮಾಡುತ್ತಿದ್ದ ಕಾರಣ ಪ್ರಶಾಂತ್ ಅವರಿಗೆ ಹೋಟೆಲ್ ನಲ್ಲಿ ಗೆಳೆಯರ ಜೋತೆ ಕ್ರಿಕೆಟ್ ಆಡೋಕೆ ಆಗಲಿಲ್ಲ. ಇದರಿಂದ ಪ್ರಶಾಂತ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರ ಮೇಲೆ ಎಲ್ಲಿಲ್ಲದ ಕೋಪ ಹುಟ್ಟಿಕೊಳ್ಳುತ್ತೆ. ಇದು ನನ್ನ ಹೊಟೇಲ್ , ಇಲ್ಲಿ ನನಗೆ ಕ್ರಿಕೆಟ್ ಆಡಲು ಅವಕಾಶ ಇಲ್ಲವಾ!. ಇದು ನನ್ನ ಆಸ್ತಿ ಇವರ್ಯಾರು ಶೂಟಿಂಗ್ ಮಾಡೋಕೆ ಎಂದು ಪ್ರಶಾಂತ್ ನೀಲ್ ಅವರು ಪುನೀತ್ ಮೇಲೆ ಕೋಪದ ಮಾತುಗಳನ್ನು ಮನಸ್ಸಿನಲ್ಲೇ ಅಂದುಕೊಂಡಿದ್ದರು.

ಒಂದೇ ಒಂದು ದಿನ ಪುನೀತ್ ಅವರಿಂದ ಕ್ರಿಕೆಟ್ ಆಡೋಕೆ ಆಗಿಲ್ಲಾಂತ ಪ್ರಶಾಂತ್ ನೀಲ್ ಗೆ ಎಷ್ಟು ಕೋಪ ಬರುತ್ತೆ ಪುನೀತ್ ಅವರ ಮುಖವನ್ನು ನೋಡಿದರೆ ಕೂಡ ಇಷ್ಟ ಆಗುತ್ತಿರಲಿಲ್ಲ. ಪುನೀತ್ ಅವರ ಮೊದಲ ಸಿನಿಮಾ ಅಪ್ಪು ಚಿತ್ರ ಬಿಡುಗಡೆಯಾದಾಗ ಪ್ರಶಾಂತ್ ನೀಲ್ ಅವರು ಐವತ್ತು ದಿನಗಳ ಕಾಲ ಸಿನೆಮಾ ನೋಡದೆ ಮುನಿಸಿಕೊಂಡಿದ್ದರು. ಐವತ್ತು ದಿನಗಳ ನಂತರ ಪ್ರಶಾಂತ್ ನೀಲ್ ಅವರು ಶಿವಮೊಗ್ಗದ ಚಿಕ್ಕಮ್ಮನ ಮನೆಗೆ ಹೋದಾಗ ಅಪ್ಪು ಚಿತ್ರವನ್ನು ಮನೆಯವರೆಲ್ಲ ನೋಡಲು ಹೋದಾಗ ಅವರ ಜೊತೆ ಹೋಗಿ ನೋಡುತ್ತಾರೆ.

ಯಾವಾಗ ಪ್ರಶಾಂತ್ ನೀಲ್ ಅವರು ಅಪ್ಪು ಚಿತ್ರವನ್ನು ನೋಡುತ್ತಾರೋ ಆ ದಿನದಿಂದ ನಿನ್ನವರು ಪುನೀತ್ ಅವರ ಅಪ್ಪಟ ಅಭಿಮಾನಿ ಆಗಿ ಬಿಡುತ್ತಾರೆ. ಆ ದಿನದಿಂದ ಇಲ್ಲಿಯವರೆಗೆ ಕೂಡ ಪ್ರಶಾಂತ್ ನೀಲ್ ಅವರು ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅಪ್ಪು ಚಿತ್ರವನ್ನು ನೋಡಿದ ತಕ್ಷಣವೇ ಪುನೀತ್ ಅವರ ಮೇಲಿದ್ದ ದ್ವೇಷವೆಲ್ಲಾ ಕರಗಿಹೋಗುತ್ತದೆ. ಇದು ಇಪ್ಪತ್ತು ವರ್ಷಗಳ ಹಳೆಯ ನೆನಪು. ಪುನೀತ್ ಅವರನ್ನು ಮೊದಲು ಭೇಟಿ ಮಾಡಿದ್ದು ಯಾವಾಗ ಎಂಬ ಪ್ರಶ್ನೆ ಕೇಳಿದಾಗ ಪ್ರಶಾಂತ್ ನೀಲ್ ಅವರು ಈ ಕಥೆಯನ್ನು ಹೇಳಿ ಇಪ್ಪತ್ತು ವರ್ಷಗಳ ಹಳೆಯ ನೆನಪನ್ನು ಮೆಲುಕು ಹಾಕಿದರು.

Leave a Comment

error: Content is protected !!