ಆಹ್ವಾನ ಮಾಡಿದ್ದರೂ ಕೂಡ ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹೋಗದೆ ಇರಲು ಕಾರಣವೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಮರಣ ನಂತರ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೂ ಕೂಡ ಅಪ್ಪು ಅವರ ಪ್ರತಿನಿಧಿಯಾಗಿ ಹಾಗೂ ದೊಡ್ಡ ಮನೆಯ ಸೊಸೆಯಾಗಿ ಆಗಮಿಸುತ್ತಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ಆಹ್ವಾನವನ್ನು ಕಳಿಸಲಾಗಿತ್ತು.

ಆದರೆ ಆಹ್ವಾನವನ್ನು ಕಳಿಸಿದರೂ ಕೂಡ ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಂದಿರಲಿಲ್ಲ. ಈ ಕಾರ್ಯಕ್ರಮಕ್ಕೆ ಶಿವಣ್ಣ ಬಂದಿದ್ದು ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಿದ್ದು ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಕಾರಣ ಕೇಳಿದಾಗ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದ ಕಾರಣ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ನಾಮಕರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಹಾಗೂ ಆರವ್ ಎನ್ನುವುದಾಗಿ ನಾಮಕರಣ ಮಾಡಿದ್ದು ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮವನ್ನು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಮಾಡಿರುವುದು ಈಗಾಗಲೇ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗೆ ಒಳಗಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಕಾರ್ಯ ಈಗ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಬೇರೆ ಪ್ರಮುಖ ಕೆಲಸಗಳಿದ್ದ ಕಾರಣ ನಾಮಕರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ದಂಪತಿಗಳಿಬ್ಬರಿಗೂ ಕೂಡ ಕರೆ ಮಾಡಿ ಯಾವಾಗಲೂ ಫ್ರೀ ಇದ್ದರೆ ಮನೆಗೆ ಬನ್ನಿ ಎಂಬುದಾಗಿ ಆಹ್ವಾನ ನೀಡಿದ್ದಾರೆ. ಇದಕ್ಕೆ ಅಲ್ವಾ ಅಶ್ವಿನಿ ಮೇಡಂ ಅವರನ್ನು ನಾವು ದೊಡ್ಡ ಮನೆಯ ಸೊಸೆ ಎಂಬುದಾಗಿ ಪ್ರೀತಿಯಿಂದ ಕರೆಯುವುದು.

Leave a Comment

error: Content is protected !!